BJP ಹೆಸರು ಕೆಡಿಸಲು ರಾಹುಲ್ ಗಾಂಧಿ ಗುತ್ತಿಗೆ ನೀಡಿದ್ದಾರೆ: ನವನಾಥ್ ಬಾನ್ ಆರೋಪ
ಮುಂಬೈ: ‘ಬಿಜೆಪಿ ಹೆಸರು ಕೆಡಿಸಲು ರಾಹುಲ್ ಗಾಂಧಿ ಅವರು ಗುತ್ತಿಗೆ ನೀಡಿದ್ದಾರೆ' ಎಂದು ಪಕ್ಷದ ಮುಖ್ಯ ವಕ್ತಾರ ನವನಾಥ್ ಬಾನ್ ಅವರು ಆರೋಪ ಮಾಡಿದ್ದಾರೆ. ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಾಂಗೆ ಅವರಿಗೆ ₹500 ಕೋಟಿ ಹಣ ನೀಡಲಾಗಿದೆ ಎಂದು ಬಿಂಬಿಸುವಂತೆ ನಕಲಿ ಆಡಿಯೊ ಕ್ಲಿಪ್ ಅನ್ನು ರಚಿಸಲಾಗಿದೆ. ಈ ಆಡಿಯೊವನ್ನು ಶಿವಸೇನಾ ನಾಯಕ ಸಂಜಯ್ ರಾವುತ್ ಅವರು ಕೃತಕ ಬ
ಮುಂಬೈ: ‘ಬಿಜೆಪಿ ಹೆಸರು ಕೆಡಿಸಲು ರಾಹುಲ್ ಗಾಂಧಿ ಅವರು ಗುತ್ತಿಗೆ ನೀಡಿದ್ದಾರೆ' ಎಂದು ಪಕ್ಷದ ಮುಖ್ಯ ವಕ್ತಾರ ನವನಾಥ್ ಬಾನ್ ಅವರು ಆರೋಪ ಮಾಡಿದ್ದಾರೆ. ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಾಂಗೆ ಅವರಿಗೆ ₹500 ಕೋಟಿ ಹಣ ನೀಡಲಾಗಿದೆ ಎಂದು ಬಿಂಬಿಸುವಂತೆ ನಕಲಿ ಆಡಿಯೊ ಕ್ಲಿಪ್ ಅನ್ನು ರಚಿಸಲಾಗಿದೆ. ಈ ಆಡಿಯೊವನ್ನು ಶಿವಸೇನಾ ನಾಯಕ ಸಂಜಯ್ ರಾವುತ್ ಅವರು ಕೃತಕ ಬುದ್ಧಿಮತ್ತೆ ಮೂಲಕ ತಯಾರಿಸಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿದೆ. ಕಾಂಗ್ರೆಸ್ ತನ್ನ ರಾಜಕೀಯ ಲಾಭಕ್ಕಾಗಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಹಾಗೂ ಮನೋಜ್ ಜಾರಂಗೆ ನಡುವೆ ಬಿರುಕು ಮೂಡಿಸಲು ನಿಟ್ಟಿನಲ್ಲಿ ಈ ನಕಲಿ ಆಡಿಯೊ ತಯಾರಿಸಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ. ಸಂಜಯ್ ರಾವತ್ ಹಾಗೂ ₹500 ಕೋಟಿ ಹಣ ಪಡೆದಿರುವ ಕುರಿತು ಸೂಕ್ತ ತನಿಖೆ ನಡೆಸಬೇಕೆಂದು ಎಂದು ಬಿಜೆಪಿ ಮುಖ್ಯ ವಕ್ತಾರ ನವನಾಥ್ ಬಾನ್ ಅವರು ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮನೋಜ್ ಜಾರಂಗೆ ಅವರು, ಯಾವುದೇ ಹಣವನ್ನು ಸ್ವೀಕರಿಸಿಲ್ಲ. ಮರಾಠಾ ಮೀಸಲಾತಿ ಹೋರಾಟಕ್ಕೆ ಕಳಂಕ ತರುವ ಉದ್ದೇಶದಿಂದ ಈ ರೀತಿಯ ಸಂಚು ರೂಪಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.