ಹೆದ್ದಾರಿಯಲ್ಲಿ ‘ಹಸಿರು ಶಾಲು’ಗಳ ಆರ್ಭಟ; ರೈತರ ಪ್ರತಿಭಟನೆ
ಶ್ರೀರಂಗಪಟ್ಟಣ: ‘ನೇಗಿಲ ಹಿಡಿದ, ಹೊಲದೊಳು ಹಾಡುತ, ಉಳುವ ಯೋಗಿಯ ನೋಡಲ್ಲಿ...’ ಹಾಡು ಶುರುವಾಗುತ್ತಿದ್ದಂತೆಯೇ ಹಸಿರು ಶಾಲುಗಳ ಅಲೆ ತೇಲಿ ಬಂತು. ಪ್ರತಿಭಟನೆ ನಡೆಸುತ್ತಿದ್ದ ಅಷ್ಟೂ ರೈತರು ಮತ್ತು ರೈತ ಮುಖಂಡರು ತಮ್ಮ ಶಾಲುಗಳನ್ನು ಹುರುಪಿನಿಂದ ಬೀಸಿದರು. ಸಿಪಿಐನ ಕೆಂಬಾವುಟ ಮತ್ತು ಡಿಎಸ್ಎಸ್ನ ನೀಲಿ ಬಾವುಟಗಳೂ ರಾರಾಜಿಸಿದವು. ರಾಜ್ಯ ಮತ್ತು ಕೇಂದ್ರ ಸರ್ಕಾರ ಹಾಗೂ

ಶ್ರೀರಂಗಪಟ್ಟಣ: ‘ನೇಗಿಲ ಹಿಡಿದ, ಹೊಲದೊಳು ಹಾಡುತ, ಉಳುವ ಯೋಗಿಯ ನೋಡಲ್ಲಿ...’ ಹಾಡು ಶುರುವಾಗುತ್ತಿದ್ದಂತೆಯೇ ಹಸಿರು ಶಾಲುಗಳ ಅಲೆ ತೇಲಿ ಬಂತು. ಪ್ರತಿಭಟನೆ ನಡೆಸುತ್ತಿದ್ದ ಅಷ್ಟೂ ರೈತರು ಮತ್ತು ರೈತ ಮುಖಂಡರು ತಮ್ಮ ಶಾಲುಗಳನ್ನು ಹುರುಪಿನಿಂದ ಬೀಸಿದರು. ಸಿಪಿಐನ ಕೆಂಬಾವುಟ ಮತ್ತು ಡಿಎಸ್ಎಸ್ನ ನೀಲಿ ಬಾವುಟಗಳೂ ರಾರಾಜಿಸಿದವು. ರಾಜ್ಯ ಮತ್ತು ಕೇಂದ್ರ ಸರ್ಕಾರ ಹಾಗೂ ರೈತ ಸಂಘದ ಪರ ಘೋಷಣೆಗಳು ಮೊಳಗಿದವು.ಈ ದೃಶ್ಯ ಕಂಡು ಬಂದಿದ್ದು, ತಾಲ್ಲೂಕಿನ ಗಣಂಗೂರು ಸಮೀಪ ಇರುವ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯ ಟೋಲ್ ಬಳಿ. ಕಬ್ಬು ಮತ್ತು ಹಾಲಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು ಹಾಗೂ ಕೃಷಿ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ರೈತಸಂಘ ಹಾಗೂ ಇನ್ನಿತರ ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸಿದರು.ರೈತಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮತ್ತು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ರೈತ ಕಹಳೆ ಮೊಳಗಿತು. ಹಸಿರು ಸೈನಿಕರು ಹೆದ್ದಾರಿಗೆ ದಾಂಗುಡಿ ಇಟ್ಟರು. ಬೇಡಿಕೆ ಈಡೇರಿಸುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.ಎರಡು ತಾಸು ಹೆದ್ದಾರಿ ಮತ್ತು ಸರ್ವಿಸ್ ರಸ್ತೆಯಲ್ಲಿನ ಸಂಚಾರ ಬಂದ್ ಆಯಿತು. ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಿಗಳಿಂದ ಆಗಮಿಸಿದ್ದ ರೈತರು ಟೋಲ್ ಉದ್ದಕ್ಕೂ ಕುಳಿತು ಪ್ರತಿಭಟಿಸಿದರು. ರೈತರ ಮತ್ತೊಂದು ಗುಂಪು ಸರ್ವಿಸ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆದು ನಿಲ್ಲಿಸಿತು.ವಾಹನ ತಡೆಯುತ್ತಿದ್ದ ರೈತರನ್ನು ಹರಕ್ಕೆ ದಬ್ಬಲು ಪೊಲೀಸರು ಮುಂದಾದಾಗ ರೈತರು ಮತ್ತು ಪೊಲೀಸರ ನಡುವೆ ತಳ್ಳಾಟ, ನೂಕಾಟ ನಡೆಯಿತು. ಒಂದು ಹಂತದಲ್ಲಿ ಪೊಲೀಸರ ಜತೆ ರೈತರು ವಾಗ್ವಾದಕ್ಕಿಳಿದರು. ಆಕ್ರೋಶವನ್ನೂ ವ್ಯಕ್ತಪಡಿಸಿದರು.ರೈತ ಸಂಘದ ಕಾರ್ಯಾಧ್ಯಕ್ಷ ವೀರಸಂಗಯ್ಯ ಮಾತನಾಡಿ, ‘ಕೇಂದ್ರ ಸರ್ಕಾರ ಜೀ ಟಿವಿ ನೆಟ್ವರ್ಕ್ನ ₹27 ಸಾವಿರ ಕೋಟಿ ಸಾಲದ ಪೈಕಿ 20,500 ಕೋಟಿ ಸಾಲ ಮನ್ನಾಡಿದೆ. ರಾಜ್ಯದಲ್ಲಿ 80 ಲಕ್ಷ ರೈತರಿದ್ದು, 2.10 ಲಕ್ಷ ಕೋಟಿ ಕೃಷಿ ಸಾಲವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜತೆಯಾಗಿ ಈ ಸಾಲವನ್ನು ಮನ್ನಾ ಮಾಡಬೇಕು’ ಎಂದು ಆಗ್ರಹಿಸಿದರು.ಶಾಸಕ ರಮೇಶ ಬಂಡಿಸಿದ್ದೇಗೌಡ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್. ಕಂಪೂಗೌಡ, ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿದರು. ಜಿಲ್ಲಾಧಿಕಾರಿ ಕುಮಾರ, ಜಿ.ಪಂ. ಸಿಇಒ ಕೆ.ಆರ್. ನಂದಿನಿ, ಎಸ್ಪಿ ವಿ.ಜೆ. ಶೋಭಾರಾಣಿ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.ಸಚಿವರಿಗೆ ಹಕ್ಕೊತ್ತಾಯ ಮಂಡನೆರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ ಹಕ್ಕೊತ್ತಾಯ ಸಲ್ಲಿಸಿದರು.ಪ್ರತಿ ಟನ್ ಕಬ್ಬು ಬೆಳೆಯಲು ₹4 ಸಾವಿರ ಖರ್ಚಾಗುತ್ತಿದ್ದು, ಸರ್ಕಾರ ₹6,150 ಬೆಲೆ ನಿಗದಿ ಮಾಡಬೇಕು. ಸಕ್ಕರೆ ಕಾರ್ಖಾನೆಗಳು ನಿಗದಿ ಮಾಡಿರುವ ಕಬ್ಬಿನ ಇಳುವರಿಯಲ್ಲಿನ 10.25 ಮಾನದಂಡದಿಂದ ರೈತರಿಗೆ ನಷ್ಟವಾಗುತ್ತಿದ್ದು, ಈ ಪ್ರಮಾಣವನ್ನು 8.5ಕ್ಕೆ ಇಳಿಸಬೇಕು. ಈಗಾಗಲೇ ಭರವಸೆ ನೀಡಿರುವಂತೆ ಹಾಲಿನ ದರ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.ರಾಜ್ಯ ಮತ್ತು ಕೇಂದ್ರ ಸರ್ಕಾರಗಳು 50:50 ಅನುಪಾತದಲ್ಲಿ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಸಕ್ಕರೆಯನ್ನು ಅಗತ್ಯ ವಸ್ತುಪಟ್ಟಿಯಿಂದ ಕೈ ಬಿಡಬೇಕು ಎಂದು ಮನವಿ ಮಾಡಿದರು.‘ರೈತರ ಬೆನ್ನಿಗೆ ರಾಜ್ಯ ಸರ್ಕಾರ’‘ರೈತರಿಗೆ ಶಕ್ತಿ ನೀಡುವ ಕೆಲಸದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಎಲ್ಲ ಪಕ್ಷಗಳು ಒಟ್ಟಾಗಿ ಕೇಂದ್ರ ಸರ್ಕಾರದ ಮುಂದೆ ರೈತರ ಸಮಸ್ಯೆಗಳನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಸಚಿವ ಎನ್. ಚಲುವರಾಯಸ್ವಾಮಿ ಆಶ್ವಾಸನೆ ನೀಡಿದರು.ಯಾವ ಬೆಳೆಗೆ ಎಂಎಸ್ಪಿ ನೀಡಬೇಕು ಎಂಬುದನ್ನು ಕೇಂದ್ರ ಸರಕಾರ ನಿರ್ಧಾರ ಮಾಡಲಿದೆ. ಹೀಗಾಗಿ ನಿಮ್ಮೆಲ್ಲರ ಸಹಕಾರವಿದ್ದರೆ, ಕೇಂದ್ರದ ಮೇಲೆ ಇನ್ನಷ್ಟು ಒತ್ತಡ ಹೇರಿ, ಆದಷ್ಟು ಶೀಘ್ರದಲ್ಲೇ ರೈತರ ಸಮಸ್ಯೆಗಳನ್ನು ಪರಿಹರಿಸಲು ನಿರಂತರ ಪ್ರಯತ್ನ ನಡೆಸಲಾಗುವುದು ಎಂದರು.ಸಕ್ಕರೆ ಕಾರ್ಖಾನೆಗಳು ಪ್ರೋತ್ಸಾಹಧನ ನೀಡುವ ಸಂಬಂಧ ನ್ಯಾಯಾಲಯದ ಮೂಲಕ ತಡೆಯಾಜ್ಞೆ ತಂದಿವೆ. ಈ ತಡೆಯಾಜ್ಞೆ ರದ್ದುಗೊಳಿಸಲು ರಾಜ್ಯ ಸರ್ಕಾರವು ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದೆ ಎಂದು ವಿವರಿಸಿದರು.261024-40-498348761