ಪದವೀಧರರ ಪಶ್ಚಿಮ ಕ್ಷೇತ್ರದ ಚುನಾವಣೆ: ಸಚಿವರ ಜೊತೆಗೆ ಬಂದು ನಕಲಿ ಮತದಾನ
ಹಾವೇರಿ: ಪದವೀಧರರ ಪಶ್ಚಿಮ ಮತಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಜರುಗಿದ ಮತದಾನ ಪ್ರಕ್ರಿಯೆಯಲ್ಲಿ ಮಹಿಳೆಯೊಬ್ಬರು ನಕಲಿ ಮತದಾನ ಮಾಡಿರುವುದು ಪತ್ತೆಯಾಗಿದೆ.ನಗರದ ಹಾವೇರಿ ತಹಶೀಲ್ದಾರ್ ಕಚೇರಿಯ ಮತಗಟ್ಟೆಯಲ್ಲಿ ಆಶಾ ಪಾಟೀಲ ಎಂಬುವವರು ಮತದಾನ ಮಾಡಬೇಕಿತ್ತು. ಅವರ ಬದಲಿಗೆ, ಮಹಿಳೆಯೊಬ್ಬರು ಬಂದು ಮತದಾನ ಮಾಡಿರುವುದು ಗೊತ್ತಾಗಿದೆ.ಕಾಂಗ್ರೆಸ್ ಪಕ್ಷದ ಜಿಲ್ಲ
ಹಾವೇರಿ: ಪದವೀಧರರ ಪಶ್ಚಿಮ ಮತಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಜರುಗಿದ ಮತದಾನ ಪ್ರಕ್ರಿಯೆಯಲ್ಲಿ ಮಹಿಳೆಯೊಬ್ಬರು ನಕಲಿ ಮತದಾನ ಮಾಡಿರುವುದು ಪತ್ತೆಯಾಗಿದೆ.ನಗರದ ಹಾವೇರಿ ತಹಶೀಲ್ದಾರ್ ಕಚೇರಿಯ ಮತಗಟ್ಟೆಯಲ್ಲಿ ಆಶಾ ಪಾಟೀಲ ಎಂಬುವವರು ಮತದಾನ ಮಾಡಬೇಕಿತ್ತು. ಅವರ ಬದಲಿಗೆ, ಮಹಿಳೆಯೊಬ್ಬರು ಬಂದು ಮತದಾನ ಮಾಡಿರುವುದು ಗೊತ್ತಾಗಿದೆ.ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರ ಪತ್ನಿಯಾದ ಆಶಾ ಪಾಟೀಲ ಅವರ ಹೆಸರಿನಲ್ಲಿಯೇ ನಕಲಿ ಮತದಾನ ಆಗಿದೆ.ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅವರ ಜೊತೆಯಲ್ಲಿಯೇ ಮತಗಟ್ಟೆಗೆ ಬಂದಿದ್ದ ಮಹಿಳೆ, ನಕಲಿ ಗುರುತಿನ ಚೀಟಿ ತೋರಿಸಿ ಮತದಾನ ಮಾಡಿರುವುದು ಪತ್ತೆಯಾಗಿದೆ.ನಕಲಿ ಮತದಾನ ಆಗಿರುವುದನ್ನು ಒಪ್ಪಿಕೊಂಡಿರುವ ಸಂಜೀವಕುಮಾರ ನೀರಲಗಿ, ‘ನನ್ನ ಪತ್ನಿ ಹೆಸರಿನಲ್ಲಿ ನಕಲಿ ಮತದಾನ ಆಗಿರುವುದು ಶುಕ್ರವಾರ ರಾತ್ರಿ ನನ್ನ ಗಮನಕ್ಕೆ ಬಂದಿದೆ. ನಕಲಿ ಮತದಾನದ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಗೆ ದೂರು ನೀಡಲಾಗುವುದು’ ಎಂದಿದ್ದಾರೆ.ನಕಲಿ ಮತದಾನದ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿರುವ ಬಿಜೆಪಿ ಮುಖಂಡರು, 'ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷವು ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ನಕಲಿ ಮತದಾನ ಮಾಡಿಸಿದೆ' ಎಂದು ದೂರಿದ್ದಾರೆ.