ಗೋಮಾಂಸ ಸೇವಿಸಿದ್ದಕ್ಕೆ ನಿಂದನೆ: ಆತ್ಮಹತ್ಯೆ ಮಾಡಿಕೊಂಡ ಬಾಲಕನ ಸ್ನೇಹಿತರ ಬಂಧನ
ಕೊಯಮತ್ತೂರು: ಗೋಮಾಂಸ ಸೇವಿಸಿದ್ದಕ್ಕೆ ಜಾತಿ ನಿಂದನೆ ಹಾಗೂ ಕಿರುಕುಳಕ್ಕೆ ಒಳಗಾಗಿದ್ದ 16 ವರ್ಷದ ದಲಿತ ಬಾಲಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ 11ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.ಬಂಧಿತರು ಮೃತ ಬಾಲಕನ ಸಹಪಾಠಿಗಳಾಗಿದ್ದು, ಅವರನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಿ, ಬಳಿಕ ವೀಕ್ಷಣಾ ಗೃಹಕ್

ಕೊಯಮತ್ತೂರು: ಗೋಮಾಂಸ ಸೇವಿಸಿದ್ದಕ್ಕೆ ಜಾತಿ ನಿಂದನೆ ಹಾಗೂ ಕಿರುಕುಳಕ್ಕೆ ಒಳಗಾಗಿದ್ದ 16 ವರ್ಷದ ದಲಿತ ಬಾಲಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ 11ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.ಬಂಧಿತರು ಮೃತ ಬಾಲಕನ ಸಹಪಾಠಿಗಳಾಗಿದ್ದು, ಅವರನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಿ, ಬಳಿಕ ವೀಕ್ಷಣಾ ಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.ಗೋಮಾಂಸ ಸೇವಿಸಿದ್ದಕ್ಕಾಗಿ ಕಿರುಕುಳ: ವಿದ್ಯಾರ್ಥಿ ಆತ್ಮಹತ್ಯೆ ಶಾಲೆಯ ಮುಖ್ಯ ಶಿಕ್ಷಕ ಎಸ್. ಅರುಣ್ಕುಮಾರ್ ಮತ್ತು ತರಗತಿ ಶಿಕ್ಷಕ ಪಿ. ವಿಜಯಕುಮಾರ್ ಅವರನ್ನು ಶಾಲಾ ಆಡಳಿತ ಮಂಡಳಿ ಅಮಾನತುಗೊಳಿಸಿದೆ. ವಿಚಾರಣೆಗಾಗಿ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.ಶಾಲಾ ಆಡಳಿತ ಕೈಗೊಂಡ ಶಿಸ್ತು ಕ್ರಮಗಳ ಕುರಿತು ಜಿಲ್ಲಾ ಶಿಕ್ಷಣ ಇಲಾಖೆಗೆ ಅಧಿಕೃತ ವರದಿ ಸಲ್ಲಿಸಲಾಗಿದೆ.ಗೋಮಾಂಸ ಸೇವಿಸುತ್ತಿದ್ದ ವಿಚಾರವಾಗಿ ಜಾತಿ ನಿಂದನೆ ಮತ್ತು ಕಿರುಕುಳಕ್ಕೆ ಒಳಗಾಗಿದ್ದ ಬಾಲಕ, ಇಲ್ಲಿನ ಪೀಲಮೇಡು ಪ್ರದೇಶದಲ್ಲಿರುವ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.ಅಕ್ಟೋಬರ್ 21ರಂದು ಈ ಘಟನೆ ನಡೆದಿದೆ. ಸುಮಾರು ಎರಡು ತಿಂಗಳ ಹಿಂದೆ ತೀವ್ರ ಕಿರುಕುಳ ನೀಡಲಾಗಿತ್ತು ಎಂದು ಮೃತ ಬಾಲಕನ ತಾಯಿ ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.ಹಾಸ್ಟೆಲ್ನಲ್ಲಿ ಗೋಮಾಂಸ ಖಾದ್ಯಕ್ಕೆ ಮನವಿ: ತಮಿಳುನಾಡು ಸಚಿವರ ಹೇಳಿಕೆಗೆ ಆಕ್ಷೇಪಬಾಲಕನ ಆಹಾರ ಪದ್ಧತಿಯನ್ನು ಗುರಿಯಾಗಿಸಿಕೊಂಡು ಇಬ್ಬರು ಸಹಪಾಠಿಗಳು ನಿರಂತರವಾಗಿ ಜಾತಿ ನಿಂದನೆ ಮಾಡುತ್ತಿದ್ದರು ಎಂದು ಸಂಬಂಧಿಕರೂ ಆರೋಪಿಸಿದ್ದಾರೆ. ಈ ಕುರಿತು ತರಗತಿ ಶಿಕ್ಷಕ ಮತ್ತು ಮುಖ್ಯ ಶಿಕ್ಷಕರ ಗಮನಕ್ಕೆ ತಂದಿದ್ದರೂ ಯಾವುದೇ ಪರಿಹಾರ ಕ್ರಮ ಕೈಗೊಂಡಿರಲಿಲ್ಲ ಎಂದು ಅವರು ದೂರಿದ್ದಾರೆ.ಈ ಪ್ರಕರಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ರಜಾ ದಿನದಲ್ಲೂ ತಾರಾ ಹೋಟೆಲ್ಗಳ ಮೇಲೆ ದಾಳಿ: ಕೊಳೆತ ಗೋಮಾಂಸ ಪತ್ತೆ