ಟೈಗರ್ ಶ್ರಾಫ್ ಫೈರಿಂಗ್ ಕೇಸ್ | ಸಿಗ್ನಲ್, ಝಂಗಿ ಆ್ಯಪ್ ಬಳಸಿ ಸಂಚು, ಪೊಲೀಸರಿಂದ ತನಿಖೆ ಚುರುಕು
ಮುಂಬೈ: ನಟ ಟೈಗರ್ ಶ್ರಾಫ್ (Tiger Shroff) ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ರೂಪಿಸಿದ ಸಂಚಿನ ಬಗ್ಗೆ ಮಾಹಿತಿ ಕಲೆಹಾಕಲು ಪೊಲೀಸರು ಮುಂದಾಗಿದ್ದಾರೆ. ಆರೋಪಿಗಳು ಸಂಪರ್ಕಕ್ಕಾಗಿ ಝಂಗಿ ಮತ್ತು ಸಿಗ್ನಲ್ನಂತಹ ಮೆಸೆಜಿಂಗ್ ಪ್ಲಾಟ್ಫಾರ್ಮ್ಗಳನ್ನು ಬಳಿಸಿದ್ದರು ಎಂದು ಶಂಕಿಸಲಾಗಿದ್ದು, ಅವುಗಳ ಚಾಟಿಂಗ್ನ್ನು ಪೊಲೀಸರು ಪರಿಶೀಲಿಸುತ್

ಮುಂಬೈ: ನಟ ಟೈಗರ್ ಶ್ರಾಫ್ (Tiger Shroff) ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ರೂಪಿಸಿದ ಸಂಚಿನ ಬಗ್ಗೆ ಮಾಹಿತಿ ಕಲೆಹಾಕಲು ಪೊಲೀಸರು ಮುಂದಾಗಿದ್ದಾರೆ. ಆರೋಪಿಗಳು ಸಂಪರ್ಕಕ್ಕಾಗಿ ಝಂಗಿ ಮತ್ತು ಸಿಗ್ನಲ್ನಂತಹ ಮೆಸೆಜಿಂಗ್ ಪ್ಲಾಟ್ಫಾರ್ಮ್ಗಳನ್ನು ಬಳಿಸಿದ್ದರು ಎಂದು ಶಂಕಿಸಲಾಗಿದ್ದು, ಅವುಗಳ ಚಾಟಿಂಗ್ನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಸಮೀರ್ ಹಸನ್ ಖತ್ರಿ ಮತ್ತು ಜತಿನ್ ಕೃಷ್ಣ ಪಾಂಚಾಲ್ ಅನಿಲ್ ಪಂಡಿತ್ ನೇರವಾಗಿ ಸಂಪರ್ಕದಲ್ಲಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ. ಮೂಲಗಳ ಪ್ರಕಾರ, ಶೂಟರ್ ರೆಹನ್ ಅನ್ಸಾರಿ ಮತ್ತು ಅನಿಲ್ ಪಂಡಿತ್ ನಡುವಿನ ಸಂಪರ್ಕಕ್ಕೆ ಸಮೀರ್ ಅನುಕೂಲ ಮಾಡಿಕೊಟ್ಟಿದ್ದ. ನಂತರ ದುಷ್ಕರ್ಮಿಗಳು ಸಂಚು ರೂಪಿಸಿದ್ದರು. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲು ಮೆಸೇಜಿಂಗ್ ಅಪ್ಲಿಕೇಶನ್ಗಳ ಮೂಲಕ ಮಾಡಲಾದ ಮೆಸೇಜ್ಗಳನ್ನು ಪರಿಶೀಲಿಸಲಾಗುತ್ತಿದೆ. ಇದನ್ನೂ ಓದಿ: ಟೈಗರ್ ಶ್ರಾಫ್ ಫೈರಿಂಗ್ ಕೇಸ್ | ಸೂರತ್ನಲ್ಲಿ 2 ಪಿಸ್ತೂಲ್ ವಶಪಡಿಸಿಕೊಂಡ ಮುಂಬೈ ಕ್ರೈಂ ಬ್ರ್ಯಾಂಚ್ ಟೀಂ ತನಿಖೆಯ ಭಾಗವಾಗಿ ಪೊಲೀಸರು, ಮೂವರು ಶಂಕಿತರನ್ನು ಅ.22 ರಂದು ಮೀರಾ-ಭಯಂದರ್ನ ಚೆನಾ ಅರಣ್ಯಕ್ಕೆ ಕರೆದೊಯ್ದಿದ್ದರು. ಈ ಸ್ಥಳವನ್ನು ಗುಂಡು ಹಾರಿಸುವ ಅಭ್ಯಾಸಕ್ಕಾಗಿ ಬಳಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಭಾಗದಲ್ಲಿ ಸಾಕ್ಷಗಳ ಸಂಗ್ರಹಕ್ಕೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಓರ್ವ ಮಹಿಳೆಯನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದ್ದು, ಪ್ರಕರಣದಲ್ಲಿ ಆಕೆಯ ಪಾತ್ರವನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಏತನ್ಮಧ್ಯೆ, ಹೆಚ್ಚಿನ ವಿಚಾರಣೆ ನಡೆಸಲು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಲು ಎರಡು ಪೊಲೀಸ್ ತಂಡಗಳನ್ನು ಹರಿಯಾಣಕ್ಕೆ ಕಳುಹಿಸಲಾಗಿದೆ. ಇದನ್ನೂ ಓದಿ: ಟೈಗರ್ ಫೈರಿಂಗ್ ಕೇಸ್ | ಮುಂಬೈ ಬಳಿ ಶೂಟಿಂಗ್ ಪ್ರ್ಯಾಕ್ಟೀಸ್ – ಒಮ್ಮೆ ಹಾರಿಸಿದಾಗ ಮಿಸ್ ಫೈರ್: ತನಿಖೆ ವೇಳೆ ಬಯಲಾಯ್ತು ಸತ್ಯ