ಸ್ಪಂದನ | ಮೆನೋಪಾಸ್; ದೀರ್ಘಾವಧಿ ನೋವು ನಿರ್ಲಕ್ಷ್ಯ ಬೇಡ
ಪ್ರಶ್ನೆ: ನನಗೆ ಈಗ ವಯಸ್ಸು 58. ಮುಟ್ಟು ನಿಂತು 5 ವರ್ಷಗಳಾಗಿವೆ. ನಾನು ಮೂರು ವರ್ಷಗಳ ಹಿಂದೆ ಕಚೇರಿ ಕೆಲಸದಿಂದ ಸ್ವಯಂ ನಿವೃತ್ತಿ ಪಡೆದಿದ್ದೇನೆ. ಕಳೆದ ಎರಡು-ಮೂರು ವರ್ಷಗಳಿಂದ ಹೆಚ್ಚಿನ ದಿನಗಳಲ್ಲಿ ಬೆನ್ನುನೋವು, ಮೈಕೈ ನೋವು ಸದಾ ಇದ್ದೇ ಇರುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಯೂ ಇದೆ. ವೈದ್ಯರ ಸಲಹೆ ಮೇರೆಗೆ ಕ್ಯಾಲ್ಸಿಯಂ ಮಾತ್ರೆಯನ್ನೂ ತೆಗೆದುಕೊಳ್ಳುತ್ತಿದ್ದೇನೆ.
ಪ್ರಶ್ನೆ: ನನಗೆ ಈಗ ವಯಸ್ಸು 58. ಮುಟ್ಟು ನಿಂತು 5 ವರ್ಷಗಳಾಗಿವೆ. ನಾನು ಮೂರು ವರ್ಷಗಳ ಹಿಂದೆ ಕಚೇರಿ ಕೆಲಸದಿಂದ ಸ್ವಯಂ ನಿವೃತ್ತಿ ಪಡೆದಿದ್ದೇನೆ. ಕಳೆದ ಎರಡು-ಮೂರು ವರ್ಷಗಳಿಂದ ಹೆಚ್ಚಿನ ದಿನಗಳಲ್ಲಿ ಬೆನ್ನುನೋವು, ಮೈಕೈ ನೋವು ಸದಾ ಇದ್ದೇ ಇರುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಯೂ ಇದೆ. ವೈದ್ಯರ ಸಲಹೆ ಮೇರೆಗೆ ಕ್ಯಾಲ್ಸಿಯಂ ಮಾತ್ರೆಯನ್ನೂ ತೆಗೆದುಕೊಳ್ಳುತ್ತಿದ್ದೇನೆ. ನೋವು ನಿವಾರಣೆಗೆ ನಾನು ಏನು ಮಾಡಲಿ?ಉತ್ತರ: ದಮಯಂತಿ ಅವರೇ, ಹೆದರಬೇಡಿ. ನಿಮಗೇನು ದೊಡ್ಡ ಸಮಸ್ಯೆ ಇಲ್ಲ. ಶೇ 50ಕ್ಕೂ ಹೆಚ್ಚು ಮಹಿಳೆಯರಲ್ಲಿ ಮುಟ್ಟು ನಿಂತ ಮೇಲೆ ಆಗುವ ಸಾಮಾನ್ಯ ಸಮಸ್ಯೆಯೇ ಇದು. ಏಕೆಂದರೆ, 55 ರಿಂದ 60 ವರ್ಷ ಆಗುತ್ತಿದ್ದಂತೆ ದೇಹದ ಸ್ನಾಯುಗಳ ದ್ರವ್ಯರಾಶಿ (Mass) ಹಾಗೂ ಶಕ್ತಿ ಕ್ಷೀಣಿಸುತ್ತಾ ಬರುತ್ತದೆ. ಮಹಿಳೆಯರಲ್ಲಿ ಪುರುಷರಿಗಿಂತ ಮೊದಲೇ ಸ್ನಾಯುಗಳ ಮೊತ್ತ ಕಡಿಮೆ ಇರುತ್ತದೆ. ಸ್ನಾಯುನಷ್ಟವನ್ನು ‘ಸಾರ್ಕೋಪೀನಿಯಾ’ ಅನ್ನುತ್ತಾರೆ.ಇದರ ಜೊತೆಗೆ, ಮಹಿಳೆಯರಿಗೆ ಹಲವು ರೀತಿಯ ನೋವುಗಳು ಆಗಬಹುದು. ತಲೆನೋವು, ಕೀಲುನೋವು, ಯೋನಿಯಲ್ಲಿ ನೋವು, ಮೂತ್ರ ವಿಸರ್ಜನೆ ಮಾಡುವಾಗ ನೋವು, ಲೈಂಗಿಕ ಕ್ರಿಯೆಯಲ್ಲಿ ನೋವು, ನಿದ್ರಾಹೀನತೆ ಇವೆಲ್ಲವೂ ಈಸ್ಟ್ರೋಜನ್ ಹಾರ್ಮೋನ್ ಮಟ್ಟ ಕಡಿಮೆಯಾದಾಗ ಉಂಟಾಗಬಹುದು. ಆದರೆ ಯಾವುದೇ ನೋವನ್ನು ಮಹಿಳೆ ಮುಚ್ಚಿಟ್ಟರೆ ಅಪಾಯ.ಸ್ನಾಯುನಷ್ಟದಿಂದಾಗಿ ಮಹಿಳೆಯರ ಚಲನಶೀಲತೆ ಮತ್ತು ಉತ್ಸಾಹ ಕಡಿಮೆಯಾಗುತ್ತಾ, ಕೂರುವುದು-ಏಳುವುದು ಕಷ್ಟವಾಗುತ್ತದೆ. ಇದರಿಂದ ಆಗಾಗ್ಗೆ ಬೀಳುವುದು ಮತ್ತು ಮೂಳೆ ಮುರಿತದ ಜೊತೆಗೆ ನಿದ್ರಾಭಂಗ, ಆತಂಕ, ಬೇಸರ ಇವೆಲ್ಲವೂ ಸ್ನಾಯು ನಷ್ಟವಾಗಲು ಕಾರಣವಾಗುತ್ತವೆ.ತೂಕವೂ ಹೆಚ್ಚಾಗಿ, ಬೆನ್ನು ನೋವು ಮೈನೋವು, ಕೈಕಾಲು ಬಿಗಿತ ಜೊತೆಗೆ ದೀರ್ಘಾವಧಿಯ ಆರೋಗ್ಯ ಸಮಸ್ಯೆಗಳಾದ ಮಧುಮೇಹ, ರಕ್ತದೊತ್ತಡ ಎಲ್ಲವೂ ಬರಬಹುದು. ಹಾಗಾಗಿ ಈ ರೀತಿಯ ನೋವು ಸಾಮಾನ್ಯ ಎಂದು ಭಾವಿಸಿ, ವಯಸ್ಸಾದಂತೆ ನೋವಿನೊಂದಿಗೆ ಬದುಕಬೇಕೆಂಬ ನಿರ್ಲಕ್ಷ್ಯದಿಂದ ಹೊರಬಂದು ಕಾರ್ಯೋನ್ಮುಖರಾಗಬೇಕು.ಸ್ನಾಯುನಷ್ಟದ ಲಕ್ಷಣಗಳು....l ಕುರ್ಚಿಯಿಂದ ಏಳುವಾಗ ಕೈಗಳ ಸಹಾಯ ಬೇಕಾದರೆl ಐದು ಬಾರಿ ಏಳುವಾಗ 15 ಸೆಕೆಂಡಿಗಿಂತ ಹೆಚ್ಚು ಸಮಯ ಬೇಕಾದರೆl ಬಕೆಟ್ ಎತ್ತಲು ಅಥವಾ ಜಾಡಿಗಳ ಮುಚ್ಚಳ ತೆರೆಯಲು ಕಷ್ಟವಾದರೆl ವರ್ಷದಲ್ಲಿ ಎರಡು-ಮೂರು ಬಾರಿಗಿಂತ ಹೆಚ್ಚು ಎಡವಿ ಬಿದ್ದರೆl ಕಾಲಿನ ಮೀನಖಂಡಗಳ ಸುತ್ತಳತೆ 31 ಸೆಂ.ಮೀ.ಗಿಂತ ಕಡಿಮೆ ಇದ್ದರೆಇವೆಲ್ಲವುಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಪ್ರಶ್ನೆಗಳಿಗೆ ನಿಮ್ಮ ಉತ್ತರ ‘ಹೌದು’ ಎಂದಾದರೆ, ನಿಮಗೆ ಸ್ನಾಯುನಷ್ಟವಿದೆ ಎಂದರ್ಥ.ಆಹಾರಕ್ರಮದಲ್ಲಿ ಸೂಕ್ತ ಕಾಳಜಿ ವಹಿಸುವುದು ಅತಿ ಮುಖ್ಯ. ಶರೀರದ ಪ್ರತಿ ಒಂದು ಕೆಜಿ ತೂಕಕ್ಕೆ 1 ರಿಂದ 1.2 ಗ್ರಾಂ ಪ್ರೋಟೀನ್ ಆದರೂ ಅಗತ್ಯವಿದೆ. ಅದರಲ್ಲೂ ಲ್ಯೂಸಿನ್ ಅಂಶವಿರುವ ಪ್ರೋಟೀನ್ ಸೇವನೆಯಿಂದ ಸ್ನಾಯುಗಳ ಸವೆತ ಕಡಿಮೆಯಾಗುತ್ತದೆ. ಸಣ್ಣಪುಟ್ಟ ಕಾಯಿಲೆಗಳಿಗೂ ಅನಗತ್ಯವಾಗಿ ಆ್ಯಂಟಿಬಯೊಟಿಕ್ ಸೇವಿಸುವುದರಿಂದ ಕರುಳಿನ ಒಳ್ಳೆಯ ಬ್ಯಾಕ್ಟೀರಿಯಾ ನಷ್ಟವಾಗಿ, ಸ್ನಾಯುಗಳಲ್ಲಿ ಉರಿಯೂತ ಉಂಟಾಗಿ ನೋವು ಹೆಚ್ಚಾಗುತ್ತದೆ. ಇದನ್ನು ತಪ್ಪಿಸಿ ಪ್ರತಿದಿನ ಏಳೆಂಟು ತಾಸು ರಾತ್ರಿ ನಿದ್ದೆ ಮಾಡುವುದರಿಂದ ಸ್ನಾಯುಗಳು ಸಡಿಲಗೊಂಡು ನೋವು ಕಡಿಮೆಯಾಗುತ್ತದೆ.ಪ್ರತಿದಿನ ಮಧ್ಯಾಹ್ನ 11 ರಿಂದ 3 ಗಂಟೆಯೊಳಗಿನ ಬಿಸಿಲಿಗೆ ಹದಿನೈದು ನಿಮಿಷ ತೆರೆದುಕೊಂಡರೆ, ನಮಗೆ ಅಗತ್ಯವಾದ ವಿಟಮಿನ್ ಡಿ ನಮ್ಮ ಶರೀರದಲ್ಲೇ ಉತ್ಪಾದನೆಯಾಗಿ, ಕ್ಯಾಲ್ಸಿಯಂ ಹೀರುವಿಕೆ ಸರಿಯಾಗಿ, ಮೂಳೆ ಮತ್ತು ಸ್ನಾಯುಗಳ ಬಲ ಹೆಚ್ಚಾಗಿ ನೋವು ಕಡಿಮೆಯಾಗುತ್ತದೆ.ವಾರಕ್ಕೊಮ್ಮೆಯಾದರೂ ಎಣ್ಣೆ ಹಚ್ಚಿ, ನೀವೇ ಮಸಾಜ್ ಮಾಡಿಕೊಂಡು, ಒಂದು ಗಂಟೆ ಬಿಟ್ಟು ಸ್ನಾನ ಮಾಡಿ. ಓಡಾಡುವಾಗ ಜಾರದೆ ಇರುವ ಹಾಗೆ ಕಾಳಜಿ ವಹಿಸಿ.ಒಟ್ಟಾರೆ, ಮೆನೋಪಾಸ್ ನಂತರ ಹೆಚ್ಚು ಆರೋಗ್ಯ ಕಾಳಜಿ ವಹಿಸಬೇಕಾದ ಅನಿವಾರ್ಯತೆ ಇರುವುದರಿಂದ, ಯಾವುದೇ ರೀತಿಯ ನೋವಾದರೂ ಅದರ ಕಾರಣವನ್ನು ಹುಡುಕಿಕೊಳ್ಳಬೇಕು. ಸೂಕ್ತ ವೈಜ್ಞಾನಿಕ ,ವೈದ್ಯಕೀಯ ಬೆಂಬಲದೊಂದಿಗೆ ಸಲಹೆ ಮತ್ತು ಚಿಕಿತ್ಸೆ ಪಡೆದು, ಮುಂಜಾಗ್ರತೆ ವಹಿಸುವುದು ಪ್ರತಿ ಮಹಿಳೆಯರಿಗೂ ಮುಖ್ಯ.ವೈದ್ಯರ ಸಲಹೆ ಇಲ್ಲದೆ, ನೋವಿನ ಮಾತ್ರೆಗಳನ್ನು ದೀರ್ಘಕಾಲದವರೆಗೆ ನುಂಗುವುದು ಅಪಾಯಕಾರಿ.ಸ್ನಾಯು ಸೆಳೆತ (ಸಾಂದರ್ಭಿಕ ಚಿತ್ರ)261024-51-2112189955