‘ರಾಜೀವ್ ತುಂಬಾ ಸುಂದರವಾಗಿದ್ದರು’: ಪ್ರೇಮಾಂಕುರದ ಕ್ಷಣವನ್ನು ಹಂಚಿಕೊಂಡ ಸೋನಿಯಾ
ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸಾಮಾಜಿಕ ಜಾಲತಾಣ ಎಕ್ಸ್ಗೆ ಅಡಿ ಇಟ್ಟಿದ್ದು, ಪತಿ ರಾಜೀವ್ ಗಾಂಧಿ ಜೊತೆಗಿನ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.ರಾಜೀವ್ ಗಾಂಧಿ ಸ್ಪುರದ್ರೂಪಿ, ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದರು ಎಂದು ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.ಯೌವನದ ದಿನಗಳಿಂದ ಇಲ್ಲಿಯವರೆಗಿನ ತಮ್ಮ ಜೀವನದ ಪಯಣವನ್ನು ಒಳಗೊಂಡಿರುವ ‘ಬಿಲಾಂಗಿಂಗ್ ಎ ಜರ
ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸಾಮಾಜಿಕ ಜಾಲತಾಣ ಎಕ್ಸ್ಗೆ ಅಡಿ ಇಟ್ಟಿದ್ದು, ಪತಿ ರಾಜೀವ್ ಗಾಂಧಿ ಜೊತೆಗಿನ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.ರಾಜೀವ್ ಗಾಂಧಿ ಸ್ಪುರದ್ರೂಪಿ, ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದರು ಎಂದು ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.ಯೌವನದ ದಿನಗಳಿಂದ ಇಲ್ಲಿಯವರೆಗಿನ ತಮ್ಮ ಜೀವನದ ಪಯಣವನ್ನು ಒಳಗೊಂಡಿರುವ ‘ಬಿಲಾಂಗಿಂಗ್ ಎ ಜರ್ನಿ ಆಫ್ ಲವ್’ ಪುಸ್ತಕದ ವಿಡಿಯೊವೊಂದನ್ನೂ ಅವರು ಹಂಚಿಕೊಂಡಿದ್ದಾರೆ. ನವೆಂಬರ್ 10ರಂದು ಪುಸ್ತಕ ಬಿಡುಗಡೆಯಾಗಲಿದೆ.ಕೇಂಬ್ರಿಡ್ಜ್ನಲ್ಲಿ ರಾಜೀವ್ ಗಾಂಧಿಯ ಭೇಟಿ, ಸ್ನೇಹದ ಕುರಿತಾದ ಎರಡು ನಿಮಿಷಗಳ ವಿಡಿಯೊವನ್ನು ಎಕ್ಸ್ ಮತ್ತು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅವರು, ರೆಸ್ಟೋರೆಂಟ್ನಲ್ಲಿ ಮೊದಲ ಬಾರಿಗೆ ರಾಜೀವ್ ಭೇಟಿಯಾದ ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ‘ಕೇಂಬ್ರಿಡ್ಜ್ನ ಚಿಕ್ಕ ಗ್ರೀಕ್ ರೆಸ್ಟೋರೆಂಟ್ನಲ್ಲಿ ನಮ್ಮ ಪ್ರೇಮ ಪಯಣ ಆರಂಭವಾಯಿತು. ಪ್ರೀತಿ, ಆನಂದ ಮತ್ತು ನೆನಪುಗಳಿಂದ ಕೂಡಿದ ಪ್ರಪಂಚವನ್ನು ನಾನು ಮತ್ತು ರಾಜೀವ್ ನಿರ್ಮಿಸಿದ್ದೆವು. ನವೆಂಬರ್ 10ರಂದು ಆ ಜಗತ್ತನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ’ ಎಂದು ಅವರು ವಿಡಿಯೊದಲ್ಲಿ ಹೇಳಿದ್ದಾರೆ.ವಿಡಿಯೊದಲ್ಲಿ ಚಿತ್ರಗಳನ್ನು ತೋರಿಸುತ್ತಾ, ರಾಜೀವ್ ಸ್ಪುರದ್ರೂಪಿ, ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದರು ಎಂದು ವಿವರಿಸಿದ್ದಾರೆ.In a small Greek restaurant in Cambridge my journey of love began. Rajiv and I created a world filled with love, laughter and memories. On 10th November, I share that world with you. pic.twitter.com/zvN5Rqqstf— Sonia Gandhi (@SoniaGandhi) October 24, 2026 ರಾಜೀವ್ ಗಾಂಧಿಯೊಂದಿಗೆ ಪ್ರೀತಿಯಲ್ಲಿ ಬಿದ್ದ ಅನುಭವ ಹಂಚಿಕೊಂಡ ಅವರು: ‘ಆಗಿನ ದಿನಗಳಲ್ಲಿ ಇಂಗ್ಲೆಂಡ್ನಲ್ಲಿ ಸಿಗುತ್ತಿದ್ದ ಆಹಾರ ಬಹಳ ಕಳಪೆಯಾಗಿತ್ತು. ಈಗಿನಂತೆ, ಸಾಕಷ್ಟು ರೆಸ್ಟೋರೆಂಟ್ಗಳು ಇರಲಿಲ್ಲ. ಹಾಗಾಗಿ, ನನಗೆ ಇಷ್ಟವಾದ ಇಟಾಲಿಯನ್ ಶೈಲಿಯ ಊಟ ಎಲ್ಲಿ ಸಿಗುತ್ತದೆ ಎಂದು ಸದಾ ಹುಡುಕುತ್ತಿದ್ದೆ. ಆಗ ನನ್ನ ಕಣ್ಣಿಗೆ ಬಿದ್ದದ್ದು ವಾರ್ಸಿಟಿ ರೆಸ್ಟೋರೆಂಟ್. ಅದೊಂದು ಗ್ರೀಕ್ ರೆಸ್ಟೋರೆಂಟ್. ಅಲ್ಲಿಗೆ ಯುರೋಪಿಯನ್ ವಿದ್ಯಾರ್ಥಿಗಳ ಜೊತೆಗೆ, ಭಾರತೀಯ ವಿದ್ಯಾರ್ಥಿಗಳು ಸಹ ಬರುತ್ತಿದ್ದರು. ಅದೇ ರೆಸ್ಟೋರೆಂಟ್ನಲ್ಲಿ ನಾನು ರಾಜೀವ್ ಅವರನ್ನು ಭೇಟಿಯಾದೆ’ಎಂದು ವಿವರಿಸಿದ್ದಾರೆ.ಮೊದಲ ಬಾರಿಗೆ ಅವರನ್ನು ಭೇಟಿಯಾದಾಗಲೇ ಅವರೊಂದಿಗಿರುವುದು ನನಗೆ ಬಹಳ ಇಷ್ಟವಾಯಿತು. ಅವರಿಗೂ ನನ್ನ ಬಗ್ಗೆ ಅದೇ ಭಾವನೆ ಇತ್ತು ಎಂಬುದು ನನಗೆ ತಿಳಿಯಿತು ಎಂದು ಸೋನಿಯಾ ವಿಡಿಯೊದಲ್ಲಿ ಮೆಲುಕು ಹಾಕಿದ್ದಾರೆ. ಇಬ್ಬರಿಗೂ ಪರಿಚಯವಿದ್ದ ಸ್ನೇಹಿತರೊಬ್ಬರು ನಮ್ಮಿಬ್ಬರಿಗೂ ಪರಿಚಯ ಮಾಡಿಸಿದರು. ಬಳಿಕ, ನಾವು ಸ್ನೇಹಿತರಾದೆವು. ಸ್ನೇಹಿತರ ಜೊತೆ ಪಾರ್ಟಿ, ಪ್ರವಾಸಕ್ಕೆ ತೆರಳುತ್ತಿದ್ದೆವು ಎಂದು ವಿವರಿಸಿದ್ದಾರೆ.‘ರಾಜೀವ್ ಬಹಳ ಸೌಮ್ಯ ವ್ಯಕ್ತಿಯಂತೆ ಕಾಣುತ್ತಿದ್ದರು. ತುಂಬಾ ಸುಂದರವಾಗಿಯೂ ಇದ್ದರು. ಅವರ ಆ ಸೌಮ್ಯತೆ ನನ್ನ ಮನಸನ್ನು ಆಳವಾಗಿ ಸ್ಪರ್ಶಿಸಿತು. ಹಾಗಾಗಿ, ಅವರನ್ನು ಮೊದಲ ಬಾರಿಗೆ ಭೇಟಿಯಾದ ಆ ಕ್ಷಣವನ್ನು ಎಂದೆಂದಿಗೂ ಮರೆಯಲಾರೆ’ಎಂದು ಅವರು ಹೇಳಿದ್ದಾರೆ.