ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ಕೇರಳ ಸಚಿವ ಎಂ. ಲಿಜು ಭೇಟಿ
ಮಂಗಳೂರು: ಕೇರಳ ರಾಜ್ಯದ ಅಬಕಾರಿ ಸಚಿವ ಎಂ. ಲಿಜು ಅವರು ಕುಟುಂಬ ಸಮೇತರಾಗಿ ನಗರದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ಶುಕ್ರವಾರ ಭೇಟಿ ನೀಡಿದರು.ಕ್ಷೇತ್ರದ ವತಿಯಿಂದ ಅವರನ್ನು ಗೌರವಿಸಲಾಯಿತು. ನಂತರ ಮಾತನಾಡಿದ ಅವರು, ‘ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿರುವ ಗೋಕರ್ಣನಾಥ ಕ್ಷೇತ್ರವು ಬೇಡಿದವರಿಗೆ ವರ ನೀಡುವ ಶಕ್ತಿ ಕೇಂದ್ರವಾಗಿದೆ. ಚುನಾವಣೆಗೆ ಸ್ಪರ್ಧಿ

ಮಂಗಳೂರು: ಕೇರಳ ರಾಜ್ಯದ ಅಬಕಾರಿ ಸಚಿವ ಎಂ. ಲಿಜು ಅವರು ಕುಟುಂಬ ಸಮೇತರಾಗಿ ನಗರದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ಶುಕ್ರವಾರ ಭೇಟಿ ನೀಡಿದರು.ಕ್ಷೇತ್ರದ ವತಿಯಿಂದ ಅವರನ್ನು ಗೌರವಿಸಲಾಯಿತು. ನಂತರ ಮಾತನಾಡಿದ ಅವರು, ‘ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿರುವ ಗೋಕರ್ಣನಾಥ ಕ್ಷೇತ್ರವು ಬೇಡಿದವರಿಗೆ ವರ ನೀಡುವ ಶಕ್ತಿ ಕೇಂದ್ರವಾಗಿದೆ. ಚುನಾವಣೆಗೆ ಸ್ಪರ್ಧಿಸುವ ಪೂರ್ವದಲ್ಲಿ ಇಲ್ಲಿ ಬಂದು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೆ. ಚುನಾವಣೆಯಲ್ಲಿ ಗೆಲುವು ಪಡೆದು, ಸಚಿವನಾಗುವ ಅವಕಾಶವೂ ಒದಗಿಬಂತು. ದೇವರ ಅನುಗ್ರಹದಿಂದ ಇದು ಸಾಧ್ಯವಾಗಿದೆ. ಹೀಗಾಗಿ, ಕ್ಷೇತ್ರಕ್ಕೆ ಬಂದು ಪೂಜೆ ಸಲ್ಲಿಸಿದ್ದೇನೆ’ ಎಂದರು.ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರ್, ಕೋಶಾಧಿಕಾರಿ ಪದ್ಮರಾಜ್ ಆರ್ ಪೂಜಾರಿ, ಅಭಿವೃದ್ಧಿ ಸಮಿತಿ ಸದಸ್ಯ ರಾಧಾಕೃಷ್ಣ, ಕದ್ರಿ ಮಂಜುನಾಥ ದೇವಸ್ಥಾನದ ಟ್ರಸ್ಟಿ ರಾಜೇಂದ್ರ ಚಿಲಿಂಬಿ, ಗೋಕರ್ಣನಾಥ ಕೋ- ಆಪರೇಟಿವ್ ಬ್ಯಾಂಕ್ ನಿರ್ದೇಶಕ ಯೋಗೀಶ್ ಕೋಟ್ಯಾನ್ ಮೂಲ್ಕಿ, ಮಾಜಿ ಮೇಯರ್ ಶಶಿಧರ್ ಹೆಗ್ಡೆ ಹಾಜರಿದ್ದರು.261024-29-545425510
Read the complete story at Prajavani