ಗದಗ: 40 ದಿನಗಳ ಬಳಿಕ ಕುಟುಂಬ ಸೇರಿದ ಕೆಆರ್ ಡಿಐಎಲ್ ಇಲಾಖೆಯ ಎಇಇ ಫರ್ವೀಜ್
ಗದಗ: ನಾಪತ್ತೆಯಾಗಿದ್ದ ಕೆಆರ್ ಡಿಐಎಲ್ ಇಲಾಖೆಯ ಎಇಇ ಫರ್ವೀಜ್ ಧಾರವಾಡ ಅವರನ್ನು ಮುಂಬೈನಲ್ಲಿ ಪತ್ತೆಮಾಡಿರುವ ಪೊಲೀಸರು ಗದಗ ನಗರಕ್ಕೆ ಕರೆ ತಂದರು. ಅ.22ರಂದು ಮುಂಬೈನ ಬಾಂದ್ರಾ ರೈಲ್ವೆ ನಿಲ್ದಾಣದ ಬಳಿಯಿದ್ದ ಫರ್ವೀಜ್ ಅವರನ್ನು ಪೊಲೀಸರು ಪತ್ತೆ ಮಾಡಿದ್ದರು. ಅವರನ್ನು ಅ.23ರಂದು ಮಧ್ಯರಾತ್ರಿ ಗದಗ ನಗರಕ್ಕೆ ಕರೆ ತಂದ ಮಾಹಿತಿ ಲಭ್ಯವಾಗಿದೆ. 'ಫರ್ವೀಜ್ ಆರೋಗ್ಯವಾಗಿದ್

ಗದಗ: ನಾಪತ್ತೆಯಾಗಿದ್ದ ಕೆಆರ್ ಡಿಐಎಲ್ ಇಲಾಖೆಯ ಎಇಇ ಫರ್ವೀಜ್ ಧಾರವಾಡ ಅವರನ್ನು ಮುಂಬೈನಲ್ಲಿ ಪತ್ತೆಮಾಡಿರುವ ಪೊಲೀಸರು ಗದಗ ನಗರಕ್ಕೆ ಕರೆ ತಂದರು. ಅ.22ರಂದು ಮುಂಬೈನ ಬಾಂದ್ರಾ ರೈಲ್ವೆ ನಿಲ್ದಾಣದ ಬಳಿಯಿದ್ದ ಫರ್ವೀಜ್ ಅವರನ್ನು ಪೊಲೀಸರು ಪತ್ತೆ ಮಾಡಿದ್ದರು. ಅವರನ್ನು ಅ.23ರಂದು ಮಧ್ಯರಾತ್ರಿ ಗದಗ ನಗರಕ್ಕೆ ಕರೆ ತಂದ ಮಾಹಿತಿ ಲಭ್ಯವಾಗಿದೆ. 'ಫರ್ವೀಜ್ ಆರೋಗ್ಯವಾಗಿದ್ದು, ವಿಚಾರಣೆ ಬಳಿಕ ಅವರನ್ನು ಕುಟುಂಬಸ್ಥರೊಂದುಗೆ ಕಳುಹಿಸಲಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.ಶನಿವಾರ ಬೆಳಿಗ್ಗೆವರೆಗೆ ನಗರದ ಪ್ರವಾಸಿ ಮಂದಿರದಲ್ಲಿ ಫರ್ವೀಜ್ ಅವರನ್ನು ಇರಿಸಲಾಗಿತ್ತು. ಅಲ್ಲಿಂದ ಹಾವೇರಿಯಲ್ಲಿರುವ ತಮ್ಮ ಪತ್ನಿ ಮನೆಗೆ ತೆರಳಿದರು ಎಂದು ಫರ್ವೀಜ್ ಕುಟುಂಬಸ್ಥರು ತಿಳಿಸಿದ್ದಾರೆ.'ಮಗನೊಂದಿಗೆ ದೂರವಾಣಿ ಮೂಲಕ ಮಾತನಾಡಿದೆ. ತುಂಬಾ ದುಃಖಿತನಾಗಿದ್ದ. ಪತ್ನಿ ಹಾಗೂ ಮಗನನ್ನು ನೋಡು ಹೋಗಿದ್ದಾರೆ' ಎಂದು ಫರ್ವೀಜ್ ತಂದೆ ಜಾಫರ್ ಧಾರವಾಡ ಸುದ್ದಿಗಾರರಿಗೆ ತಿಳಿಸಿದರು.
Read the complete story at Prajavani