ಉಪ್ಪಿನಂಗಡಿ | ರಸ್ತೆಯಲ್ಲೇ ಹರಿದ ಚರಂಡಿ ನೀರು, ಹೆದ್ದಾರಿ ಸಂಚಾರಕ್ಕೆ ತಡೆ
ಉಪ್ಪಿನಂಗಡಿ: ಬಜತ್ತೂರು ಗ್ರಾಮದ ಕಾಂಚನ, ನೀರಕಟ್ಟೆ, ವಳಾಲು, ಬಜತ್ತೂರು ಭಾಗದಲ್ಲಿ ಶುಕ್ರವಾರ ಸಂಜೆ ಭಾರಿ ಮಳೆಯಾಗಿದ್ದು, ಚರಂಡಿ ಮೂಲಕ ಹರಿಯಬೇಕಾದ ಮಳೆ ನೀರು ಹೆದ್ದಾರಿ ಜಲಾವೃತಗೊಂಡು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸುಮಾರು 2 ತಾಸಿಗೂ ಅಧಿಕ ಹೊತ್ತು ವಾಹನ ಸಂಚಾರಕ್ಕೆ ತಡೆ ಉಂಟಾಯಿತು.ಹೆದ್ದಾರಿಯಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಯಿತು. ಬೆದ್ರೋಡಿ ಯಿಂದ ಕಾ

ಉಪ್ಪಿನಂಗಡಿ: ಬಜತ್ತೂರು ಗ್ರಾಮದ ಕಾಂಚನ, ನೀರಕಟ್ಟೆ, ವಳಾಲು, ಬಜತ್ತೂರು ಭಾಗದಲ್ಲಿ ಶುಕ್ರವಾರ ಸಂಜೆ ಭಾರಿ ಮಳೆಯಾಗಿದ್ದು, ಚರಂಡಿ ಮೂಲಕ ಹರಿಯಬೇಕಾದ ಮಳೆ ನೀರು ಹೆದ್ದಾರಿ ಜಲಾವೃತಗೊಂಡು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸುಮಾರು 2 ತಾಸಿಗೂ ಅಧಿಕ ಹೊತ್ತು ವಾಹನ ಸಂಚಾರಕ್ಕೆ ತಡೆ ಉಂಟಾಯಿತು.ಹೆದ್ದಾರಿಯಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಯಿತು. ಬೆದ್ರೋಡಿ ಯಿಂದ ಕಾಂಚನ ಕ್ರಾಸ್ವರೆಗಿನ ಪ್ರದೇಶ ದಲ್ಲಿ ಹೆದ್ದಾರಿಯ ಮೇಲೆ ನೀರು ಹರಿದು ರಸ್ತೆ ಜಲಾವೃತಗೊಂಡಿದೆ. ಹೆದ್ದಾರಿ ಬದಿಯ ಚರಂಡಿಗಳು ತುಂಬಿ ಹರಿದ ಕಾರಣ ಮಳೆಯ ನೀರು ರಸ್ತೆಗೆ ನುಗ್ಗಿದೆ.ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಅಡ್ಡಹೊಳೆಯಿಂದ ಬಿ.ಸಿ.ರೋಡ್ ವರೆಗಿನ ಚತುಷ್ಫಥ ಕಾಮಗಾರಿ ಮುಕ್ತಾಯದ ಹಂತಕ್ಕೆ ತಲುಪಿದೆ. ಆದರೆ, ಕಾಮಗಾರಿ ಆರಂಭವಾದ ದಿನಗಳಿಂದಲೇ ಹೆದ್ದಾರಿ ನಿರ್ಮಾಣದ ವೈಜ್ಞಾನಿಕತೆ, ಅವಾಂತರದ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಮಳೆನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸದಿರುವ ಬಗ್ಗೆಯೂ ಆರೋಪ ವ್ಯಕ್ತವಾಗಿತ್ತು.ಚತುಷ್ಪಥ ಹೆದ್ದಾರಿ ಕಾಮಗಾರಿ ಮುಕ್ತಾಯದ ಹಂತದಲ್ಲಿರುವಾಗಲೇ ಸಾಮಾನ್ಯ ಮಳೆಗೆ ರಸ್ತೆ ಜಲಾವೃತಗೊಳ್ಳುತ್ತಿದೆ. ಹೆದ್ದಾರಿ ನಿರ್ಮಾಣದ ವೇಳೆ ಸ್ಥಳೀಯ ಭೌಗೋಳಿಕ ಪರಿಸ್ಥಿತಿ, ನೀರಿನ ಹರಿವಿನ ದಿಕ್ಕು ಹಾಗೂ ಮಳೆನೀರು ಹೊರಹೋಗುವ ವ್ಯವಸ್ಥೆಗೆ ಸೂಕ್ತ ಆದ್ಯತೆ ನೀಡಲಾಗಿದೆಯೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ನೀರು ನಿಲ್ಲುತ್ತಿರುವ ಪ್ರದೇಶಗಳನ್ನು ಗುರುತಿಸಿ, ಚರಂಡಿ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಸುಧಾರಿಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಮುಂದಿನ ದಿನಗಳಲ್ಲಿ ಇಂಥ ಪರಿಸ್ಥಿತಿ ಮರುಕಳಿಸದಂತೆ ಕ್ರಮ ಕೈಗೊ ಳ್ಳಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.261024-29-983443613