ಗಳಿಕೆಯಲ್ಲಿ ₹100 ಕೋಟಿ ದಾಟಿದ ‘ಪ್ರೇಮದ ಊರಲಿ’: ವಿದೇಶಗಳಲ್ಲೂ ಬಿಡುಗಡೆ
ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದ ‘ಪ್ರೇಮದ ಊರಲಿ’ ಸಿನಿಮಾ ಭರ್ಜರಿ ಯಶಸ್ಸು ಕಂಡಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ ಗಳಿಕೆಯಲ್ಲೂ ಹೊಸ ದಾಖಲೆ ಬರೆದಿದೆ.ಒಂದೆಡೆ ತ್ರಿಕೋನ ಪ್ರೇಮಕಥೆ, ಮತ್ತೊಂದೆಡೆ ಅಪ್ಪ–ಮಗನ ಬಾಂಧವ್ಯ. ಈ ಎರಡೂ ಎಳೆಗಳ ಮೂಲಕ ಸಂಬಂಧ ಗಟ್ಟಿಯಾಗಲು ನಂಬಿಕೆಯ ಅಡಿಪಾಯ ಅಗತ್ಯ ಎಂಬುದನ್ನು ಸರಳವಾಗಿ ನಿರೂಪಿಸುವ ಚಿತ್ರ ‘ಪ್ರೇಮದ ಊರಲಿ’.₹3 ಕೋಟಿಗೂ
ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದ ‘ಪ್ರೇಮದ ಊರಲಿ’ ಸಿನಿಮಾ ಭರ್ಜರಿ ಯಶಸ್ಸು ಕಂಡಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ ಗಳಿಕೆಯಲ್ಲೂ ಹೊಸ ದಾಖಲೆ ಬರೆದಿದೆ.ಒಂದೆಡೆ ತ್ರಿಕೋನ ಪ್ರೇಮಕಥೆ, ಮತ್ತೊಂದೆಡೆ ಅಪ್ಪ–ಮಗನ ಬಾಂಧವ್ಯ. ಈ ಎರಡೂ ಎಳೆಗಳ ಮೂಲಕ ಸಂಬಂಧ ಗಟ್ಟಿಯಾಗಲು ನಂಬಿಕೆಯ ಅಡಿಪಾಯ ಅಗತ್ಯ ಎಂಬುದನ್ನು ಸರಳವಾಗಿ ನಿರೂಪಿಸುವ ಚಿತ್ರ ‘ಪ್ರೇಮದ ಊರಲಿ’.₹3 ಕೋಟಿಗೂ ಕಡಿಮೆ ಬಜೆಟ್ನಲ್ಲಿ ನಿರ್ಮಾಣವಾದ ಸಿನಿಮಾ ಸದ್ಯ ಗಳಿಕೆಯಲ್ಲಿ ₹100 ಕೋಟಿ ದಾಟಿದೆ. ಈ ಮೂಲಕ ಕೆಜಿಎಫ್, ಕಾಂತಾರದಂತಹ ದೊಡ್ಡ ದೊಡ್ಡ ಸಿನಿಮಾಗಳ ಪಟ್ಟಿಗೆ ಸೇರಿದೆ. ಅಲ್ಲದೆ 2026ರಲ್ಲಿ ತೆರೆಕಂಡ ಸಿನಿಮಾಗಳಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಗಳಿಸಿದ ಸಿನಿಮಾ ಎನಿಸಿದೆ. ತಪಸ್ವಿನಿ ಪೂಣಚ್ಚ ಸಂದರ್ಶನ: ಒತ್ತಡ ಹೆಚ್ಚಿಸಿದ 'ಪ್ರೇಮದ ಊರಲಿ' ಸಿನಿಮಾ ಎಂದ ನಟಿಭಾವನೆಗಳನ್ನು ಮೀರಿದ್ದು ಯಾವುದು ಇಲ್ಲ; ‘ಪ್ರೇಮದ ಊರಲಿ‘ ನಿರ್ದೇಶಕ ಮನೋಜ್ ಕುಮಾರ್ರಣವೀರ್ ಸಿಂಗ್ ನಟನೆಯ, ‘ಧುರಂಧರ್: ದಿ ರಿವೇಂಜ್’ ಸಿನಿಮಾ ಕರ್ನಾಟಕದಲ್ಲಿ ಗಳಿಕೆಯಲ್ಲಿ ₹100 ಕೋಟಿ ದಾಟಿತ್ತು. ಆ ಬಳಿಕ ಈಗ ‘ಪ್ರೇಮದ ಊರಲಿ’ ಈ ದಾಖಲೆ ಬರೆದಿದೆ. ಬಾಕ್ಸ್ ಆಫೀಸ್ ಲೆಕ್ಕಾಚಾರವಿಡುವ ‘ಸ್ಯಾಕ್ನಿಲ್ಕ್’ ವೆಬ್ಸೈಟ್ ವರದಿ ಪ್ರಕಾರ, ಸಿನಿಮಾ ಬಿಡುಗಡೆಯಾಗಿ 28 ದಿನಗಳಲ್ಲಿ ವಿಶ್ವದಾದ್ಯಂತ ₹111.07 ಕೋಟಿ ಗಳಿಸಿದೆ. ಇದರಲ್ಲಿ, ಭಾರತದಲ್ಲಿ ₹107.97 ಕೋಟಿ, ವಿದೇಶಗಳಲ್ಲಿ ₹3.10 ಕೋಟಿ ಗಳಿಕೆಯಾಗಿದೆ.ಸಂದರ್ಶನ | ‘ಪ್ರೇಮದ ಊರಲಿ’ ತುಂಟ ಹುಡುಗಿಯಾಗಿ ರಮಿಕಾ ಶಿವು: ‘ವಸಂತ’ಳ ಅಂತರಾಳಸಿನಿಮಾ ವಿಮರ್ಶೆ: ಸಂಬಂಧಗಳ ಭಾವತೀವ್ರತೆಯ ಪ್ರೇಮದ ಊರಲಿರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮನೋಜ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ, ಸೆಪ್ಟೆಂಬರ್ 25ರಂದು ಬಿಡುಗಡೆಯಾಗಿತ್ತು. ‘ಬಿಡುಗಡೆಯಾದ ಮೊದಲ ವಾರ ₹5 ಕೋಟಿ ಗಳಿಕೆ ಮಾಡಿದ್ದ ಸಿನಿಮಾ, ಎರಡನೇ ವಾರದಲ್ಲಿ ಒಟ್ಟು ₹23 ಕೋಟಿ ಗಳಿಸಿತ್ತು. ನಂತರ ನಾಲ್ಕು ವಾರಗಳಲ್ಲಿ ಚಿತ್ರಮಂದಿರಗಳಲ್ಲಿ ಭರ್ಜರಿ ಯಶಸ್ಸು ಕಂಡಿದೆ.ಈ ಸಿನಿಮಾವನ್ನು ಅ.9ರಂದು ವಿದೇಶಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಈಗ ಯುಎಇ, ಜರ್ಮನಿ, ಯುಕೆ, ನೆದರ್ಲೆಂಡ್ನ, ಸಿಂಗಪುರ, ಅಮೆರಿಕ ಮತ್ತು ಆಸ್ಟ್ರಿಯಾದಲ್ಲೂ ಸಿನಿಮಾವನ್ನು ನೋಡಬಹುದು ಎಂದು ಚಿತ್ರತಂಡ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದೆ. View this post on Instagram ಶ್ರೀರಾಮ್ ನಾಯಕರಾಗಿ ನಟಿಸಿರುವ ಚಿತ್ರದಲ್ಲಿ ತಪಸ್ವಿನಿ ಪೂಣಚ್ಚ ಹಾಗೂ ರಮಿಕಾ ಶಿವು ನಾಯಕಿಯರಾಗಿ ಅಭಿನಯಿಸಿದ್ದಾರೆ. ರಂಗಾಯಣ ರಘು ಪ್ರಮುಖ ಪಾತ್ರದಲ್ಲಿದ್ದಾರೆ. ವೆನಿಲ್ಲಾ ಎಂಟರ್ಟೇನ್ಮೆಂಟ್ಸ್ ಹಾಗೂ ಜಾನಕಮ್ಮ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣಗೊಂಡಿದ್ದು, ಸುನಾದ್ ಗೌತಮ್ ಸಂಗೀತ, ರಾಜ್ಕಾಂತ್ ಎಸ್.ಕೆ ಛಾಯಾಚಿತ್ರಗ್ರಹಣ ಹಾಗೂ ಹರ್ಷಿತ್ ಪ್ರಭು ಸಂಕಲನ ಚಿತ್ರಕ್ಕಿದೆ.