ದೀಪಾವಳಿಗೆ ‘ವೋಕಲ್ ಫಾರ್ ಲೋಕಲ್’ ಚಳವಳಿ ಬಲಪಡಿಸಿ: ಜನತೆಗೆ ಪ್ರಧಾನಿ ಮೋದಿ ಕರೆ
ನವದೆಹಲಿ: ಮುಂಬರುವ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಜನರು ಸ್ಥಳೀಯವಾಗಿ ತಯಾರಿಸುವ ಉತ್ಪನ್ನಗಳನ್ನೇ ಹೆಚ್ಚಾಗಿ ಖರೀದಿಸುವ ಮೂಲಕ ‘ವೋಕಲ್ ಫಾರ್ ಲೋಕಲ್’ (ಸ್ಥಳೀಯ ಉತ್ಪನ್ನಗಳು) ಅಭಿಯಾನವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ ಕರೆ ನೀಡಿದ್ದಾರೆ.ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ನಲ್ಲಿ ದೇಶವನ್ನು ಉದ್ದೇಶಿಸಿ

ನವದೆಹಲಿ: ಮುಂಬರುವ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಜನರು ಸ್ಥಳೀಯವಾಗಿ ತಯಾರಿಸುವ ಉತ್ಪನ್ನಗಳನ್ನೇ ಹೆಚ್ಚಾಗಿ ಖರೀದಿಸುವ ಮೂಲಕ ‘ವೋಕಲ್ ಫಾರ್ ಲೋಕಲ್’ (ಸ್ಥಳೀಯ ಉತ್ಪನ್ನಗಳು) ಅಭಿಯಾನವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ ಕರೆ ನೀಡಿದ್ದಾರೆ.ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ನಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಉತ್ಪನ್ನಗಳು ವಿಶೇಷ ಮನ್ನಣೆ ಪಡೆಯುತ್ತಿರುವುದನ್ನು ಪ್ರಸ್ತಾಪಿಸಿ ಅವರು ಮಾತನಾಡಿದರು. ಬಿಹಾರದ 'ಮಖಾನಾ' (ತಾವರೆ ಬೀಜ) ಹಾಗೂ ಕರ್ನಾಟಕದ 'ತೊಗರಿ ಬೇಳೆ' ಇಂದು ವಿದೇಶಿ ಮಾರುಕಟ್ಟೆಗಳಲ್ಲಿ ಪ್ರಮುಖ ಆದ್ಯತೆ ಪಡೆಯುತ್ತಿವೆ. ಅದೇ ರೀತಿ ಮಹಾರಾಷ್ಟ್ರದ ಬುಡಕಟ್ಟು ಜನರ ಉತ್ಪನ್ನಗಳು ಅವರ ಕಲಾತ್ಮಕ ಪ್ಯಾಕಿಂಗ್ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿವೆ ಎಂದು ಮೋದಿ ತಿಳಿಸಿದರು.'ಖಾದಿ ಉತ್ಪನ್ನಗಳ ಜನಪ್ರಿಯತೆ ದಿನೇದಿನೇ ಹೆಚ್ಚುತ್ತಿದ್ದು, ನಮ್ಮ ಪರಂಪರೆಯನ್ನು ಉಳಿಸುತ್ತಿರುವ ಕುಶಲಕರ್ಮಿಗಳಿಗೆ ಇದರಿಂದ ದೊಡ್ಡ ನೆರವು ಸಿಗುತ್ತಿದೆ. ಸ್ಥಳೀಯರು ತಯಾರಿಸಿದ ವಸ್ತುಗಳನ್ನೇ ಆದ್ಯತೆಯ ಮೇರೆಗೆ ಖರೀದಿಸುವ ಮೂಲಕ ‘ವೋಕಲ್ ಫಾರ್ ಲೋಕಲ್’ ಚಳವಳಿಯನ್ನು ನಾವೆಲ್ಲರೂ ಸೇರಿ ಇನ್ನಷ್ಟು ಶಕ್ತಿಶಾಲಿಯಾಗಿಸೋಣ' ಎಂದು ಅವರು ಹೇಳಿದರು.ಸಾವಯವ ಕೃಷಿಗೆ ಮರುಜೀವ: ಇದೇ ವೇಳೆ ಪಂಜಾಬ್ನಲ್ಲಿ ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಮರುಜೀವ ನೀಡಲಾಗುತ್ತಿರುವ ಕುರಿತು ಮಾತನಾಡಿದ ಪ್ರಧಾನಿ, 'ಖೇತಿ ವಿರಾಸತ್ ಮಿಷನ್' ಎಂಬ ಸಂಸ್ಥೆಯು ಸಾವಯವ ಕೃಷಿ ಕ್ಷೇತ್ರಕ್ಕೆ ಹೊಸ ಚೈತನ್ಯ ತುಂಬುತ್ತಿದೆ ಎಂದರು.ಯಾವುದೇ ರಾಸಾಯನಿಕ ಬಳಸದೇ ಸಾವಯವ ಹತ್ತಿ ಬೆಳೆಯಲಾಗುತ್ತಿದೆ. ಅಲ್ಲದೆ, ಸಹಜ ಬಣ್ಣದ ಹತ್ತಿಯನ್ನೇ ಇಲ್ಲಿ ಬೆಳೆಯುತ್ತಿರುವುದರಿಂದ ನೂಲು ಮತ್ತು ಬಟ್ಟೆಗಳಿಗೆ ಪ್ರತ್ಯೇಕ ರಾಸಾಯನಿಕ ಬಣ್ಣ ಸೇರಿಸುವ ಅಗತ್ಯವೇ ಬರುವುದಿಲ್ಲ ಎಂದು ವಿವರಣೆ ನೀಡಿದರು.ಹೆವಾಲ್ ನದಿಯ ಪುನರುಜ್ಜೀವನ: ಉತ್ತರಾಖಂಡದ ತೆಹ್ರಿ ಗರ್ವಾಲ್ ಜಿಲ್ಲೆಯ ಜನರು ಒಗ್ಗೂಡಿ ‘ಹೆವಾಲ್’ ನದಿಗೆ ಹೇಗೆ ಮರುಜೀವ ನೀಡಿದರು ಎಂಬುದನ್ನೂ ಪ್ರಧಾನಿ ಇದೇ ವೇಳೆ ನೆನಪಿಸಿಕೊಂಡರು.