‘3 ಈಡಿಯಟ್ಸ್’ ಸೀಕ್ವೆಲ್ ಕುರಿತು ಮಹತ್ವದ ಮಾಹಿತಿ ಬಿಚ್ಚಿಟ್ಟ ನಟ ಅಮಿರ್ ಖಾನ್
ಬಾಲಿವುಡ್ ನಟ ಅಮಿರ್ ಖಾನ್ ಅಭಿನಯದ ‘3 ಈಡಿಯಟ್ಸ್’ ಸಿನಿಮಾ, 2009ರಲ್ಲಿ ಬಿಡುಗಡೆಗೊಂಡು ವಿಶ್ವದಾದ್ಯಂತ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತ್ತು. ಸದ್ಯ ಈ ಸಿನಿಮಾ ಬಿಡುಗಡೆಯಾಗಿ ಒಂದೂವರೆ ದಶಕವೇ ಕಳೆದಿದೆ. ಈ ಸಿನಿಮಾದ ಎರಡನೇ ಭಾಗವು ನಿರ್ಮಾಣವಾಗುವುದಾಗಿ ಈಗಾಗಲೇ ಘೋಷಿಸಲಾಗಿದೆ. ಇದೀಗ ನಟ ಅಮಿರ್ ಖಾನ್ ಅವರು ಮತ್ತೊಂದು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.ವಿಡಿಯೊ

ಬಾಲಿವುಡ್ ನಟ ಅಮಿರ್ ಖಾನ್ ಅಭಿನಯದ ‘3 ಈಡಿಯಟ್ಸ್’ ಸಿನಿಮಾ, 2009ರಲ್ಲಿ ಬಿಡುಗಡೆಗೊಂಡು ವಿಶ್ವದಾದ್ಯಂತ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತ್ತು. ಸದ್ಯ ಈ ಸಿನಿಮಾ ಬಿಡುಗಡೆಯಾಗಿ ಒಂದೂವರೆ ದಶಕವೇ ಕಳೆದಿದೆ. ಈ ಸಿನಿಮಾದ ಎರಡನೇ ಭಾಗವು ನಿರ್ಮಾಣವಾಗುವುದಾಗಿ ಈಗಾಗಲೇ ಘೋಷಿಸಲಾಗಿದೆ. ಇದೀಗ ನಟ ಅಮಿರ್ ಖಾನ್ ಅವರು ಮತ್ತೊಂದು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.ವಿಡಿಯೊ ಕರೆ ಮೂಲಕ ಹೆರಿಗೆ ಮಾಡಿಸಿದ ವ್ಯಕ್ತಿ: ಇದು ‘3 ಈಡಿಯಟ್ಸ್’ ಕಥೆಯಲ್ಲ, ಅಸಲಿಸಿಂಗಪುರದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ‘3 ಈಡಿಯಟ್ಸ್’ ಸಿನಿಮಾದ ಎರಡನೇ ಭಾಗದ ಕುರಿತು ಮಾತನಾಡಿದ ಅಮಿರ್ ಖಾನ್, ‘ನಿರ್ದೇಶಕ ರಾಜ್ಕುಮಾರ್ ಹಿರಾನಿ ಅವರು ‘3 ಈಡಿಯಟ್ಸ್’ ಸೀಕ್ವೆಲ್ನ ಸ್ಕ್ರಿಪ್ಟ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಶೀಘ್ರದಲ್ಲೇ, ಅವರಿಂದ ಅಧಿಕೃತ ಮಾಹಿತಿ ಸಿಗಲಿದೆ’ ಎಂದು ಹೇಳಿದ್ದಾರೆ.‘3 ಈಡಿಯಟ್ಸ್’ ಸಿನಿಮಾ ಮರುಬಿಡುಗಡೆ? ನಿರ್ಮಾಣ ಸಂಸ್ಥೆ ಹೇಳಿದ್ದಿಷ್ಟು...‘ಈ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ನನಗೆ ಅನುಮತಿಯಿಲ್ಲ. ಆದರೆ, ಮುಂದಿನ ಎರಡು ವಾರಗಳಲ್ಲಿ ನಾನು ಭಾರತಕ್ಕೆ ಹಿಂತಿರುಗಿದ ನಂತರ, ಅವರು ಅಂತಿಮ ಸ್ಕ್ರಿಪ್ಟ್ನ ವಿವರಣೆಯನ್ನು ನೀಡಲಿದ್ದಾರೆ’ ಎಂದು ಹೇಳಿದ್ದಾರೆ. View this post on Instagram ಈ ಹಿಂದೆ ನಿರ್ದೇಶಕ ರಾಜ್ಕುಮಾರ್ ಹಿರಾನಿ ಅವರು ‘ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ’ಕ್ಕೆ ಸಂದರ್ಶನ ನೀಡಿದ್ದರು. ಇದರಲ್ಲಿ ಅವರು, ‘ಸಿನಿಮಾದ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ. ಮೊದಲ ಭಾಗದಲ್ಲಿದ್ದ ಪಾತ್ರಗಳು 10 ರಿಂದ 15 ವರ್ಷಗಳ ನಂತರ ಹೇಗೆ ಬದಲಾಗಿರುತ್ತವೆ ಎಂಬ ಕಥಾಹಂದರವನ್ನು ಕಟ್ಟುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಹೇಳಿಕೊಂಡಿದ್ದರು. ‘3 ಈಡಿಯಟ್ಸ್’ ಸಿನಿಮಾವನ್ನು ವಿಧು ವಿನೋದ್ ಚೋಪ್ರಾ ನಿರ್ಮಿಸಿದ್ದರು. ಸುಮಾರು ₹55 ಕೋಟಿ ಬಜೆಟ್ನ ಈ ಚಿತ್ರವು ಭಾರತದಲ್ಲಿ ₹202.95 ಕೋಟಿ ಗಳಿಸಿದರೆ, ವಿಶ್ವದಾದ್ಯಂತ ಸುಮಾರು ₹400 ಕೋಟಿಗೂ ಅಧಿಕ ಸಂಗ್ರಹಿಸಿ ದಾಖಲೆ ಬರೆದಿತ್ತು.