ಬೆಂಗಳೂರು: ಮಾಂಜಾ ದಾರ ಸಿಲುಕಿ ಸವಾರನಿಗೆ ಗಾಯ
ಬೆಂಗಳೂರು: ಗಾಳಿಪಟ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ದ್ವಿಚಕ್ರ ವಾಹನ ಸವಾರ ಗಾಯಗೊಂಡಿರುವ ಘಟನೆ ಹೆಗಡೆ ನಗರ ಮೇಲ್ಸೇತುವೆ ಮೇಲೆ ನಡೆದಿದೆ.ಐದು ದಿನಗಳ ಹಿಂದೆ ಮಕ್ಕಳು ಮಾಂಜಾ ದಾರದಿಂದ ಕೂಡಿದ ಗಾಳಿಪಟವನ್ನು ಹಾರಿಸುತ್ತಿದ್ದರು. ದ್ವಿಚಕ್ರ ವಾಹನ ಸವಾರ ಹೋಗುತ್ತಿದ್ದಾಗ ರಸ್ತೆಗೆ ಅಡ್ಡಲಾಗಿದ್ದ ಮಾಂಜಾ ದಾರ ತಗುಲಿ ಅವರ ಕುತ್ತಿಗೆ ಹಾಗೂ ಕೈಗೆ ಗಾಯವಾಗಿದ್ದು, ನಡು ರಸ್ತ

ಬೆಂಗಳೂರು: ಗಾಳಿಪಟ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ದ್ವಿಚಕ್ರ ವಾಹನ ಸವಾರ ಗಾಯಗೊಂಡಿರುವ ಘಟನೆ ಹೆಗಡೆ ನಗರ ಮೇಲ್ಸೇತುವೆ ಮೇಲೆ ನಡೆದಿದೆ.ಐದು ದಿನಗಳ ಹಿಂದೆ ಮಕ್ಕಳು ಮಾಂಜಾ ದಾರದಿಂದ ಕೂಡಿದ ಗಾಳಿಪಟವನ್ನು ಹಾರಿಸುತ್ತಿದ್ದರು. ದ್ವಿಚಕ್ರ ವಾಹನ ಸವಾರ ಹೋಗುತ್ತಿದ್ದಾಗ ರಸ್ತೆಗೆ ಅಡ್ಡಲಾಗಿದ್ದ ಮಾಂಜಾ ದಾರ ತಗುಲಿ ಅವರ ಕುತ್ತಿಗೆ ಹಾಗೂ ಕೈಗೆ ಗಾಯವಾಗಿದ್ದು, ನಡು ರಸ್ತೆಯಲ್ಲಿಯೇ ಅವರು ನರಳಾಡಿದ್ದಾರೆ.ಸ್ಥಳೀಯರು ಕೂಡಲೇ ವಾಹನ ಸವಾರನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಘಟನೆ ಬಳಿಕ ಗಾಳಿಪಟ ಹಾರಿಸುತ್ತಿದ್ದ ಮಕ್ಕಳು ಸ್ಥಳದಿಂದ ಪರಾರಿಯಾಗಿದ್ದಾರೆ.ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಯಾವುದೇ ದೂರು ದಾಖಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಂಜಾ ದಾರವನ್ನು ನಿಷೇಧಿಸಿದ್ದರೂ ಕೆಲವರು ಬಳಸಿ ಗಾಳಿಪಟ ಹಾರಿಸುತ್ತಿದ್ದಾರೆ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Read the complete story at Prajavani