ಕಿತ್ತೂರು ಉತ್ಸವ: ಸಿಕಂದರ್ ಶೇಖ್ ಕುಸ್ತಿ ಚಾಂಪಿಯನ್
ಚನ್ನಮ್ಮನ ಕಿತ್ತೂರು(ಬೆಳಗಾವಿ ಜಿಲ್ಲೆ): ಇಲ್ಲಿ ಕಿತ್ತೂರು ಉತ್ಸವ ಅಂಗವಾಗಿ ಭಾನುವಾರ ನಡೆದ ಅಂತರರಾಷ್ಟ್ರೀಯ ಜಂಗಿ ನಿಕಾಲಿ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಮಹಾರಾಷ್ಟ್ರದ ಪೈಲ್ವಾನ್ ಸಿಕಂದರ್ ಶೇಖ್ ಅವರು, ಕ್ಯೂಬಾದ ಕಾಸ್ಟ್ ನೇಡಾ ಕಾರ್ಡ್ ನಾಸ್ ಅವರನ್ನು ‘ಚಿತ್’ ಮಾಡಿ ಚಾಂಪಿಯನ್ ಆಗಿ ಹೊರಹೊಮ್ಮಿದರು.ಮತ್ತೊಂದು ಸ್ಪರ್ಧೆಯಲ್ಲಿ ಬೆಳಗಾವಿ ತಾಲ್ಲೂಕಿನ ಕಂಗ್ರಾಳಿಯ ಉಮ
ಚನ್ನಮ್ಮನ ಕಿತ್ತೂರು(ಬೆಳಗಾವಿ ಜಿಲ್ಲೆ): ಇಲ್ಲಿ ಕಿತ್ತೂರು ಉತ್ಸವ ಅಂಗವಾಗಿ ಭಾನುವಾರ ನಡೆದ ಅಂತರರಾಷ್ಟ್ರೀಯ ಜಂಗಿ ನಿಕಾಲಿ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಮಹಾರಾಷ್ಟ್ರದ ಪೈಲ್ವಾನ್ ಸಿಕಂದರ್ ಶೇಖ್ ಅವರು, ಕ್ಯೂಬಾದ ಕಾಸ್ಟ್ ನೇಡಾ ಕಾರ್ಡ್ ನಾಸ್ ಅವರನ್ನು ‘ಚಿತ್’ ಮಾಡಿ ಚಾಂಪಿಯನ್ ಆಗಿ ಹೊರಹೊಮ್ಮಿದರು.ಮತ್ತೊಂದು ಸ್ಪರ್ಧೆಯಲ್ಲಿ ಬೆಳಗಾವಿ ತಾಲ್ಲೂಕಿನ ಕಂಗ್ರಾಳಿಯ ಉಮೇಶ ಪಾಟೀಲ ಅವರು, ಮಹಾರಾಷ್ಟ್ರದ ಸತೀಶ ಮುಡೆ ಅವರನ್ನು ಮಣಿಸಿದರು. ಹರಿಯಾಣದ ಮಹೇಶ ಅವರನ್ನು ರಾಣೆಬೆನ್ನೂರಿನ ಕಾರ್ತಿಕ್ ಕಾಟೆ ಪರಾಭವಗೊಳಿಸಿದರು. ಮಹಾರಾಷ್ಟ್ರದ ಸೋಹೆಲ್ ಅವರನ್ನು ಕಂಗ್ರಾಳಿಯ ಪ್ರಥಮೇಶ ಹಟ್ಟಿಕರ ಸೋಲಿಸಿದರು.ಅಗ್ನಿಶಾಮಕ ಠಾಣೆ ಬಳಿ ಇರುವ ಮೈದಾನದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಕುಸ್ತಿಪ್ರೇಮಿಗಳು, ನಾಡಿನ ಪ್ರಸಿದ್ಧ ಪೈಲ್ವಾನರ ಸೆಣೆಸಾಟವನ್ನು ಕಣ್ತುಂಬಿಕೊಂಡು ಕೇಕೆ ಹಾಕಿದರು.ನಾಡಿನ ವಿವಿಧೆಡೆಯಿಂದ ಬಂದಿದ್ದ ಕುಸ್ತಿಪಟುಗಳು ಗೆದ್ದ ತಕ್ಷಣ, ಘೋಷಣೆ ಹಾಕಿ ಖುಷಿಪಟ್ಟರು. ಗೆದ್ದವರನ್ನು ಹಲಗೆ ಬಾರಿಸಿ ಸಂಘಟಕರು ಅಭಿನಂದಿಸಿದರು.60ಕ್ಕೂ ಅಧಿಕ ಜೋಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಶಾಸಕ ಬಾಬಾಸಾಹೇಬ ಪಾಟೀಲ ಕುಸ್ತಿ ಚಾಂಪಿಯನ್ಶಿಪ್ ಪಂದ್ಯಾವಳಿ ಉದ್ಘಾಟಿಸಿದರು.ಬೆಳಗಾವಿ ತಾಲ್ಲೂಕಿನ ಕಡೋಲಿಯ ಸ್ವಾತಿ ಪಾಟೀಲ ಅವರು, ಕೊಲ್ಹಾಪುರದ ಸುಹಾನಿ ದೇಸಾಯಿ ಅವರನ್ನು ಸೋಲಿಸಿದರು. ಮೈಸೂರಿನ ರೀತು ಅವರು, ಕೊಲ್ಹಾಪುರದ ಪಾಯಲ್ ಪಾಟೀಲ ಅವರನ್ನು ಪರಾಭವಗೊಳಿಸಿದರು.ಮಹಿಳಾ ವಿಭಾಗ