‘ಕಸದಲ್ಲಿ ₹133 ಕೋಟಿ ಅಕ್ರಮ’
ಬೆಂಗಳೂರು: ‘ಕಸದಿಂದ ಕಾಸು ಮಾಡಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರ, ತ್ಯಾಜ್ಯ ವರ್ಗಾವಣೆ ಕೇಂದ್ರಗಳ (ಎಸ್ಟಿಎಸ್) ಟೆಂಡರ್ನಲ್ಲಿ ಅನರ್ಹ ಕಂಪನಿಗೆ ಟೆಂಡರ್ಗಳನ್ನು ನೀಡಿ ₹133 ಕೋಟಿಗಳ ಅಕ್ರಮ ಎಸಗಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಟೀಕಿಸಿದರು.‘ಕಸದ ಟೆಂಡರ್ನಲ್ಲಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಅನರ್ಹ ಕಂಪನಿಗೆ ಟೆಂಡರ್ ನೀಡಿ

ಬೆಂಗಳೂರು: ‘ಕಸದಿಂದ ಕಾಸು ಮಾಡಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರ, ತ್ಯಾಜ್ಯ ವರ್ಗಾವಣೆ ಕೇಂದ್ರಗಳ (ಎಸ್ಟಿಎಸ್) ಟೆಂಡರ್ನಲ್ಲಿ ಅನರ್ಹ ಕಂಪನಿಗೆ ಟೆಂಡರ್ಗಳನ್ನು ನೀಡಿ ₹133 ಕೋಟಿಗಳ ಅಕ್ರಮ ಎಸಗಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಟೀಕಿಸಿದರು.‘ಕಸದ ಟೆಂಡರ್ನಲ್ಲಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಅನರ್ಹ ಕಂಪನಿಗೆ ಟೆಂಡರ್ ನೀಡಿ ಕಿಕ್ಬ್ಯಾಕ್ ಪಡೆಯಲಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಶನಿವಾರ ದೂರಿದ ಅವರು, ಜಿಬಿಎ– ಬಿಎಸ್ಡಬ್ಲ್ಯುಎಂಎಲ್ ವತಿಯಿಂದ ಕಸ ಹಾಗೂ ತ್ಯಾಜ್ಯ ವರ್ಗಾವಣೆ ಸ್ಟೇಷನ್ಗಳ ಟೆಂಡರ್ಗಳಲ್ಲಿ ನಡೆದಿರುವ ಹಗರಣದ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಿದರು.‘₹133 ಕೋಟಿ ಮೊತ್ತದ ಟೆಂಡರ್ಗಳನ್ನು ಮುನಿಯಪ್ಪ ಎಂಟರ್ಪ್ರೈಸಸ್ಗೆ ನೀಡಲಾಗಿದೆ. ಜಿಎಸ್ಟಿ ಸಂಖ್ಯೆ ಇಲ್ಲದ ಈ ಕಂಪನಿ ಬೇನಾಮಿಯಾಗಿದೆ. ಇಂತಹ ಟೆಂಡರ್ ಪಡೆಯಬೇಕೆಂದರೆ ₹10 ಕೋಟಿ ವಾರ್ಷಿಕ ವಹಿವಾಟು ಮಾಡಿರಬೇಕೆಂಬ ನಿಯಮವನ್ನು 2018ರಲ್ಲಿ ರಾಜ್ಯ ಸರ್ಕಾರ ಜಾರಿ ಮಾಡಿತ್ತು. ಈ ಕಂಪನಿ 2023-24 ರಲ್ಲಿ ₹3.34 ಕೋಟಿ ಮಾತ್ರ ವಹಿವಾಟು ನಡೆಸಿದೆ. ಅದಕ್ಕೂ ಮೊದಲು ₹1 ಕೋಟಿಯಿಂದ ₹2 ಕೋಟಿ ಮಾತ್ರ ವಾರ್ಷಿಕ ವಹಿವಾಟು ನಡೆಸಿದೆ. ಅರ್ಹತಾ ಷರತ್ತು ಉಲ್ಲಂಘಿಸಿ ಶೇ 40 ಕಮಿಷನ್ ಪಡೆಯಲು ಹೀಗೆ ಮಾಡಲಾಗಿದೆ’ ಎಂದು ದೂರಿದರು.‘ತ್ಯಾಜ್ಯ ವರ್ಗಾವಣೆ ಸ್ಟೇಷನ್ ಸ್ಥಾಪನೆಯಲ್ಲಿ ಟೆಂಡರ್ ಮೊತ್ತಕ್ಕಿಂತ ಕಡಿಮೆ ಮೊತ್ತಕ್ಕೆ ಬಿಡ್ ಮಾಡಿದ ಗುತ್ತಿಗೆದಾರರು ವ್ಯತ್ಯಾಸ ಮೊತ್ತವನ್ನು ಭದ್ರತಾ ಠೇವಣಿಯಾಗಿ ನೀಡಬೇಕು ಎಂಬ ನಿಯಮವನ್ನು ಉಲ್ಲಂಘಿಸಲಾಗಿದೆ. ಆರ್ಥಿಕ ಇಲಾಖೆ ಎಚ್ಚರಿಸಿದ್ದರೂ ಬಿಎಸ್ಡಬ್ಲ್ಯುಎಂಎಲ್ನಿಂದ ಎಲ್ಒಎ ನೀಡಿ, ಕಾರ್ಯಾದೇಶವನ್ನೂ ನೀಡಲಾಗಿದೆ. ಈ ಕಂಪನಿ ಸರ್ಕಾರದ ಅಳಿಯನದೇ? ಪ್ಯಾಕೇಜ್ 2 ರಲ್ಲಿ ₹55.04 ಕೋಟಿ ಅಂದಾಜು ವೆಚ್ಚವಾಗಿದ್ದು, ಹೆಚ್ಚುವರಿ ಠೇವಣಿ ₹6.79 ಕೋಟಿ ಕೊಡಬೇಕಾಗಿತ್ತು. ಆದರೆ ಅದನ್ನು ಮನ್ನಾ ಮಾಡಲಾಗಿದೆ. ಪ್ಯಾಕೇಜ್ 5ರಲ್ಲಿ ₹5.99 ಕೋಟಿ ಹೆಚ್ಚುವರಿ ಭದ್ರತಾ ಠೇವಣಿ ಕಟ್ಟಿಲ್ಲ. ಒಟ್ಟಾಗಿ ₹12.99 ಕೋಟಿ ಭದ್ರತಾ ಠೇವಣಿ ಪಡೆದಿಲ್ಲ. ನಿಯಮಗಳನ್ನು ಗಾಳಿಗೆ ತೂರಿ ಮುನಿಯಪ್ಪ ಕಂಪನಿಯಿಂದ ಕಿಕ್ಬ್ಯಾಕ್ ಪಡೆದು ಅನುಕೂಲ ಮಾಡಿಕೊಡಲಾಗಿದೆ’ ಎಂದು ಹೇಳಿದರು.‘ಈ ಕಂಪನಿಗಿಂತ ಅರ್ಹ ಕಂಪನಿಗಳು ಬೇರೆ ಇದ್ದರೂ ಅವರನ್ನು ಕರೆದು ಮಾತುಕತೆ ನಡೆಸಿಲ್ಲ. ಜಿಬಿಎ ಮುಖ್ಯ ಆಯುಕ್ತರು ಕರೆದು ಮಾತಾಡಿ ದರವನ್ನು ಕಡಿಮೆ ಮಾಡಿಕೊಳ್ಳಬೇಕು. ಲೂಟಿ ಹೊಡೆಯಲು ನಿಯಮಗಳನ್ನು ಮೀರಲಾಗಿದೆ’ ಎಂದರು.ಜಾಗವಿಲ್ಲದೆ ಟೆಂಡರ್: ‘ಕಸದ ವರ್ಗಾವಣೆ ಸ್ಟೇಷನ್ಗಳಿಗೆ (ಎಸ್ಟಿಎಸ್) ಮೊದಲು ಜಾಗ ಹುಡುಕಬೇಕಿತ್ತು. ಜಾಗ ಇಲ್ಲದೆ ಇದ್ದರೂ 21 ಪ್ಯಾಕೇಜ್ಗಳ ಟೆಂಡರ್ ಮಾಡಲಾಗಿದೆ. ಆದಷ್ಟು ಬೇಗ ಕಮಿಷನ್ ಹೊಡೆಯಲು ತರಾತುರಿಯಲ್ಲಿ ಟೆಂಡರ್ ರೂಪಿಸಲಾಗಿದೆ. ಯಾರಾದರೂ ಕಾಸು ಕೇಳಿದರೆ ನನಗೆ ಕರೆ ಮಾಡಿ ಎಂದು ರಿಯಲ್ ಎಸ್ಟೇಟ್ ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರೂ, ಈವರೆಗೆ ಫೋನ್ ನಂಬರ್ ನೀಡಿಲ್ಲ. ಆದ್ದರಿಂದ ಇದನ್ನು ಉನ್ನತ ಮಟ್ಟದ ತನಿಖೆಗೆ ಅಥವಾ ಲೋಕಾಯುಕ್ತಕ್ಕೆ ನೀಡಿ ತನಿಖೆ ಮಾಡಿಸಬೇಕು’ ಎಂದು ಆಗ್ರಹಿಸಿದರು.‘ಕೇಂದ್ರ ಸರ್ಕಾರ ಸ್ವಚ್ಛ ಭಾರತ್ ಯೋಜನೆಯಡಿ ಇದಕ್ಕೆ ಹಣ ನೀಡುತ್ತದೆ. ಕೇಂದ್ರ ಸರ್ಕಾರ ಹಣ ನೀಡಿಲ್ಲವೆಂದು ಮುಖ್ಯಮಂತ್ರಿ ಹೇಳುತ್ತಲೇ ಇರುತ್ತಾರೆ. ಹಣ ಕೊಟ್ಟರೆ ಹೀಗೆ ಕಮಿಷನ್ ಹೊಡೆಯುತ್ತಾರೆ’ ಎಂದರು.‘ಬಿಎಸ್ಡಬ್ಲ್ಯುಎಂಎಲ್: ತ್ಯಾಜ್ಯ ವರ್ಗಾವಣೆ ಸ್ಟೇಷನ್ ಸ್ಥಾಪನೆಯಲ್ಲಿ ಠೇವಣಿ ನಷ್ಟ- ನಿಯಮ ಮೀರಿ ಕಾರ್ಯಾದೇಶ’ ವಿಶೇಷ ವರದಿ ಪ್ರಜಾವಾಣಿಯಲ್ಲಿ 2026ರ ಆಗಸ್ಟ್ 12ರಂದು ಪ್ರಕಟವಾಗಿತ್ತುಆರ್.ಅಶೋಕ ವಿಧಾನಸಭೆ ವಿರೋಧ ಪಕ್ಷದ ನಾಯಕಅನರ್ಹರಿಗೆ ಕಸ ವಿಲೇವಾರಿ ಟೆಂಡರ್ ನೀಡಿರುವ ಬಗ್ಗೆ ನಾನು ಮುಖ್ಯಮಂತ್ರಿಗೆ ಪತ್ರ ಬರೆದು ಅದನ್ನು ರದ್ದು ಮಾಡಲು ಆಗ್ರಹಿಸುತ್ತೇನೆ. ರದ್ದು ಮಾಡದಿದ್ದರೆ ಇದರಲ್ಲಿ ಮುಖ್ಯಮಂತ್ರಿಗೂ ಪಾಲಿದೆ ಎಂಬುದು ದೃಢವಾಗುತ್ತದೆ ‘ನಗರದ ಸಚಿವರೊಬ್ಬರ ಪಾತ್ರ’ ‘ಈ ಟೆಂಡರ್ನ ಪ್ಯಾಕೇಜ್ 2 ಮತ್ತು 5ಕ್ಕೆ ಸಂಬಂಧಿಸಿದ ಎಲ್ಲ ಕಡತಗಳನ್ನು ಕೂಡಲೇ ಸೀಜ್ ಮಾಡಬೇಕು. ಟೆಂಡರ್ ಪಡೆದ ಕಂಪನಿಗೆ ಯಾವ ಅರ್ಹತೆ ಇದೆ ಎಂದು ಸ್ಪಷ್ಟಪಡಿಸಬೇಕು. ಸ್ಟೇಷನ್ಗಳನ್ನು ನಿರ್ಮಿಸಲು ಎಲ್ಲಿ ಜಾಗ ಗುರುತಿಸಲಾಗಿದೆ? ಎಂದು ತಿಳಿಸಬೇಕು. ಇದರಲ್ಲಿ ಒಬ್ಬ ಸಚಿವರ ಪಾತ್ರವಿದ್ದು ಅವರಿಗಾಗಿ ಆ ಕಂಪನಿಗೆ ಟೆಂಡರ್ ನೀಡಿದ್ದಾರೆ’ ಎಂದು ಆರ್. ಅಶೋಕ ದೂರಿದರು. ‘ಮನಿ ಫ್ರಂ ವೇಸ್ಟ್ ಸ್ಕೀಮ್’: ‘ಕಾಂಗ್ರೆಸ್ ಸರ್ಕಾರ ಕಸದಿಂದ ಕಾಸು ಮಾಡಿಕೊಳ್ಳುತ್ತಿದೆ. ಖಾಲಿ ನಿವೇಶನಗಳನ್ನೂ ಬಿಡದೆ ಅಲ್ಲಿನ ಕಸಕ್ಕೂ ದಂಡ ವಿಧಿಸಲಾಗುತ್ತಿದೆ. ಕೃಷ್ಣ ಬೈರೇಗೌಡರು ಹೊಸದಾಗಿ ಸಚಿವರಾದಾಗ ‘ಫ್ರೀಡಂ ಫ್ರಂ ವೇಸ್ಟ್’ ಅಭಿಯಾನ ಮಾಡಿದ್ದರು. ಆದರೆ ಅದರ ಬದಲು ‘ಮನಿ ಫ್ರಂ ವೇಸ್ಟ್ ಸ್ಕೀಮ್’ ಮಾಡಲಾಗಿದೆ’ ಎಂದರು.