ಶಾಂತಿಗಾಗಿ 36 ಸಮುದಾಯಗಳ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚನೆ: ಮಣಿಪುರ ಸಿಎಂ
Manipur to form committee comprising representatives of all 36 communities: CMಇಂಫಾಲ: ರಾಜ್ಯದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಎಲ್ಲರನ್ನೂ ಒಳಗೊಂಡು ಅಭಿವೃದ್ಧಿ ಸಾಧಿಸಲು 36 ಸಮುದಾಯಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ರಚಿಸಲಾಗುವುದು ಎಂದು ಮಣಿಪುರ ಮುಖ್ಯಮಂತ್ರಿ ವೈ ಖೇಮ್ಚಂದ್ ಸಿಂಗ್ ಹೇಳಿದ್ದಾರೆ.ಎಲ್ಲ ಸಮುದಾಯಗಳನ್ನು ಒಗ್ಗೂಡಿಸಲು ಸಮುದಾಯಗಳ

Manipur to form committee comprising representatives of all 36 communities: CMಇಂಫಾಲ: ರಾಜ್ಯದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಎಲ್ಲರನ್ನೂ ಒಳಗೊಂಡು ಅಭಿವೃದ್ಧಿ ಸಾಧಿಸಲು 36 ಸಮುದಾಯಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ರಚಿಸಲಾಗುವುದು ಎಂದು ಮಣಿಪುರ ಮುಖ್ಯಮಂತ್ರಿ ವೈ ಖೇಮ್ಚಂದ್ ಸಿಂಗ್ ಹೇಳಿದ್ದಾರೆ.ಎಲ್ಲ ಸಮುದಾಯಗಳನ್ನು ಒಗ್ಗೂಡಿಸಲು ಸಮುದಾಯಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ಅಸ್ತಿತ್ವದಲ್ಲಿದೆಯೇ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕೇಳಿದ ಹಿನ್ನೆಲೆಯಲ್ಲಿ ಈ ಪ್ರಸ್ತಾವನೆಯನ್ನು ಮುಂದಿಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.ಮಣಿಪುರಕ್ಕೆ ಎಲ್ಲ ಸಮುದಾಯಗಳು ಕೊಡುಗೆ ನೀಡಿವೆ ಎಂದ ಅವರು, ಆಂಗ್ಲೊ ಮಣಿಪುರ ಸಂಘರ್ಷವನ್ನು ನೆನಪಿಸಿಕೊಂಡರು.'ಮೆರಾ ಹೌ ಚೊಂಗ್ಬಾ' ಹಬ್ಬದ ಅಂಗವಾಗಿ, ಅರಮನೆ ಆವರಣದಲ್ಲಿ ಗಿರಿಜನ ಮುಖ್ಯಸ್ಥರ ಅತಿಥಿ ಗೃಹದ ಉದ್ಘಾಟನೆಯ ನಂತರ ಅವರು ಮಾತನಾಡಿದರು.ಈ ಹಬ್ಬವು ರಾಜ್ಯದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಹೋದರತ್ವದ ಭಾವನೆಯನ್ನು ಬಲಪಡಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.ಈ ಅತಿಥಿ ಗೃಹವು ಕೇವಲ ಒಂದು ಭೌತಿಕ ರಚನೆಯಲ್ಲ, ಬದಲಾಗಿ ಬೆಟ್ಟಗಳು ಮತ್ತು ಕಣಿವೆಯ ನಡುವಿನ ಭ್ರಾತೃತ್ವದ ಸಂಕೇತವಾಗಿದೆ ಎಂದು ಅವರು ಹೇಳಿದ್ದಾರೆ.'ಮೆರಾ ಹೌ ಚೊಂಗ್ಬಾ' ಹಬ್ಬವು ಮಣಿಪುರದ ವಿವಿಧ ಬುಡಕಟ್ಟು ಸಮುದಾಯಗಳ ನಡುವೆ ಶಾಂತಿ ಹಾಗೂ ಭ್ರಾತೃತ್ವವನ್ನು ಬಿಂಬಿಸುಸುತ್ತದೆ.