ಮಾಲೂರು: ಹನುಮಂತನಗರದಲ್ಲಿ ಮೂಲಸೌಕರ್ಯ ಮರೀಚಿಕೆ
ಮಾಲೂರು: ಪಟ್ಟಣದ ಹನುಮಂತ ನಗರದಲ್ಲಿನ ಹಲವು ನಿವಾಸಿಗಳು ಇನ್ನೂ ಹೆಂಚಿನ ಮನೆಯಲ್ಲೇ ಜೀವನ ದೂಡುತ್ತಿದ್ದಾರೆ. ಈ ಭಾಗದ ಜನರು ಸುಮಾರು 2–3 ದಶಕಗಳಿಂದ ಸರ್ಕಾರದಿಂದ ಸೂರಿನ ಭಾಗ್ಯ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಆದರೆ, ಅವರಿಗೆ ಈವರೆಗೂ ಸೂರಿನ ಭಾಗ್ಯ ಮಾತ್ರ ಸಿಕ್ಕಿಲ್ಲ.ನಗರದ 12ನೇ ವಾರ್ಡ್ನ ಹನುಮಂತ ನಗರದ ಕೊಳೆಗೇರಿಯ ನಿವಾಸಿಗಳು ಸೂರು ಸೇರಿದಂತೆ ಹಲವು ಮೂಲ

ಮಾಲೂರು: ಪಟ್ಟಣದ ಹನುಮಂತ ನಗರದಲ್ಲಿನ ಹಲವು ನಿವಾಸಿಗಳು ಇನ್ನೂ ಹೆಂಚಿನ ಮನೆಯಲ್ಲೇ ಜೀವನ ದೂಡುತ್ತಿದ್ದಾರೆ. ಈ ಭಾಗದ ಜನರು ಸುಮಾರು 2–3 ದಶಕಗಳಿಂದ ಸರ್ಕಾರದಿಂದ ಸೂರಿನ ಭಾಗ್ಯ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಆದರೆ, ಅವರಿಗೆ ಈವರೆಗೂ ಸೂರಿನ ಭಾಗ್ಯ ಮಾತ್ರ ಸಿಕ್ಕಿಲ್ಲ.ನಗರದ 12ನೇ ವಾರ್ಡ್ನ ಹನುಮಂತ ನಗರದ ಕೊಳೆಗೇರಿಯ ನಿವಾಸಿಗಳು ಸೂರು ಸೇರಿದಂತೆ ಹಲವು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.ಮಾಲೂರು ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಪಥದತ್ತ ದಾಪುಗಾಲಿಡುತ್ತಿದೆ. ಜಿಲ್ಲೆಯಲ್ಲೇ ಹೆಚ್ಚಿನ ಕೈಗಾರಿಕೆಗಳನ್ನು ಹೊಂದಿದ ಹೆಗ್ಗಳಿಕೆಗೆ ತಾಲ್ಲೂಕು ಪಾತ್ರವಾಗಿದೆ. ದೊಡ್ಡ ಬಜೆಟ್ಟಿನ ಕೈಗಾರಿಕೆಗಳು ಇಲ್ಲಿ ನೆಲೆಯೂರಲು ಸಿದ್ಧವಾಗಿವೆ. ಹಾಗಾಗಿ ಈ ಭಾಗದ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಸುತ್ತಮುತ್ತಲಿನ ಯುವ ಜನರಿಗೆ ಉದ್ಯೋಗದ ಅವಕಾಶ ಇದೆ. ಕೈಗಾರಿಕೆಗಳಿಗೆ ತಕ್ಕಂತೆ ನೂತನ ಬಡಾವಣೆಗಳ ಸಂಖ್ಯೆಯು ಹೆಚ್ಚುತ್ತಿದೆ. ಆದರೆ, ಮಾಲೂರು–ಕೋಲಾರ ಮುಖ್ಯ ರಸ್ತೆಗೆ ಅಂಟಿಕೊಂಡಂತಿರುವ ಹನುಮಂತ ನಗರದ ಕೊಳೆಗೇರಿಯಲ್ಲಿನ ನಿವಾಸಿಗಳಿಗೆ ಯಾವುದೇ ಮೂಲಸೌಕರ್ಯಗಳಿಲ್ಲ ಎಂದು ಸ್ಥಳೀಯರು ದೂರಿದರು.ಇಲ್ಲಿನ ಕೊಳೆಗೇರಿ ನಿವಾಸಿಗಳಿಗೆ ನಗರ ಸಭೆಯಿಂದ ಪೈಪ್ಲೈನ್ ಮೂಲಕ 15 ದಿನಗಳಿಗೊಮ್ಮೆ ಕುಡಿಯುವ ನೀರು ಹರಿಸಲಾಗುತ್ತಿದೆ. ಉಳಿದ ಹದಿನೈದು ದಿನ ಕುಡಿಯುವ ನೀರಿನ ಸೌಕರ್ಯ ಇಲ್ಲದೆ ಇಲ್ಲಿನ ನಿವಾಸಿಗಳು ಪರದಾಡುವಂತಾಗಿದೆ. ಅನಿವಾರ್ಯವಾಗಿ ನೀರು ಡ್ರಮ್ಗಳಲ್ಲಿ ಸಂಗ್ರಹಿಸಿಕೊಳ್ಳಬೇಕಾದ ಅಗತ್ಯ ಉಂಟಾಗಿದೆ. ಸಂಗ್ರಹಿಸಿಟ್ಟ ನೀರಿನ ಕಾರಣ ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ.ಹೆಂಚಿನ ಮನೆಗಳ ಮುಂದೆ 2 ಅಡಿಗಳಷ್ಟು ಅಗಲವಾದ ರಸ್ತೆ ಇದೆ. ಬೀದಿದೀಪವಿಲ್ಲದ ಕಾರಣ ಸಂಜೆಯಾಗುತ್ತಲೇ, ಕಗ್ಗತ್ತಲು ಉಂಟಾಗುತ್ತದೆ. ಮಕ್ಕಳನ್ನು ಹೊರಬಿಡಲು ಹಿಂದೇಟು ಹಾಕುವಂತಾಗಿದೆ. ಹನುಮಂತ ನಗರದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ಸಂಗ್ರಹವಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರಿಂದ ಸಾಂಕ್ರಮಿಕ ರೋಗಗಳು ವ್ಯಾಪಿಸುವ ಭೀತಿ ಎದುರಾಗಿದೆ ಎಂದು ಇಲ್ಲಿನ ನಿವಾಸಿಗಳು ಅಲವತ್ತುಕೊಳ್ಳುತ್ತಾರೆ.ನಗರಸಭೆಯಿಂದ ನಿರ್ಮಿಸಿರುವ ಶೌಚಾಲಯಕ್ಕೆ ಬೀಗ ಜಡಿದು ವರ್ಷಗಳೇ ಕಳೆದಿದೆ. ನೀರಿನ ಕೊರತೆಯಿಂದ ಬಂದ್ ಮಾಡಿರುವುದಾಗಿ ನಗರಸಭೆ ಅಧಿಕಾರಿಗಳು ತಾತ್ಸರದ ಉತ್ತರ ನೀಡುತ್ತಾರೆ ಎಂದು ಸ್ಥಳೀಯ ನಿವಾಸಿಗಳು ಅಸಹಾಯಕತೆ ವ್ಯಕ್ತಪಡಿಸಿದರು.ಮನೆಗಳ ನಿರ್ಮಾಣ ಅವೈಜ್ಞಾನಿಕ2005ರಲ್ಲಿ ಹನುಮಂತ ನಗರದಲ್ಲಿ ವಾಲ್ಮೀಕಿ–ಅಂಬೇಡ್ಕರ್ ವಸತಿ ಯೋಜನೆ ಅಡಿ 12*18 ವಿಸ್ತಿರ್ಣದಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ. ಇಷ್ಟು ಸಣ್ಣ ಮನೆಗಳಲ್ಲೇ ಶೌಚಾಲಯ ವ್ಯವಸ್ಥೆಯನ್ನೂ ಮಾಡಲಾಗಿತ್ತು.ಈ ಮನೆಗಳನ್ನು ಇಲ್ಲಿನ 42 ಕುಟುಂಬಗಳಿಗೆ ಹಂಚಿಕೆ ಮಾಡಲಾಗಿತ್ತು. ಚಿಕ್ಕ ಮನೆಗಳಾಗಿದ್ದರಿಂದ ಬಹುತೇಖ ಕುಟುಂಬಗಳು ಶೌಚಾಲಯದ ಜಾಗವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುತ್ತಿವೆ. ಹಾಗಾಗಿ, ಮನೆ ಮುಂದಿನ ರಸ್ತೆಯಲ್ಲೇ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಇದರಿಂದ 30 ಅಡಿ ರಸ್ತೆ ಕೇವಲ 4 ಅಡಿ ರಸ್ತೆಯಾಗಿ ಪರಿವರ್ತನೆಗೊಂಡಿದೆ. ಯಾವುದೇ ವಾಹನ ಓಡಾಡಲು ಅವಕಾಶ ಇಲ್ಲದಂತಾಗಿದೆ.ಕೊಳೆಗೇರಿಯಲ್ಲಿರುವ ಅನೇಕ ಕುಟುಂಬಗಳಿಗೆ ವಾಸಕ್ಕೆ ಮನೆಗಳಿಲ್ಲ. ಹಾಗಾಗಿ, ಈ ನಿವಾಸಿಗಳು ಸುಮಾರು 40 ವರ್ಷಗಳಿಂದ ಹೆಂಚಿನ ಮನೆಗಳಲ್ಲೇ ವಾಸಿಸುತ್ತಿದ್ದಾರೆ. ಈ ಕುಟುಂಬಗಳಿಗೆ ಶೌಚಾಲಯದ ವ್ಯವಸ್ಥೆ ಇಲ್ಲದ ಕಾರಣ ಬಯಲು ಶೌಚಕ್ಕೆ ಅವಲಂಬನೆಯಾಗಿದ್ದಾರೆ.ಗುಲಾಬ್ ಜಾನ್, ಕೊಳೆಗೇರಿ ನಿವಾಸಿನಾನು ಮದುವೆಯಾಗಿ 40 ವರ್ಷ ಕಳೆಯಿತು. ಅವರು ಇತ್ತೀಚೆಗೆ ತೀರಿಕೊಂಡರು. ಇಂದಿಗೂ ಹೆಂಚಿನ ಮನೆಯಲ್ಲೇ ವಾಸ ಮಾಡುತ್ತಿದ್ದೇನೆ. ಶೌಚಾಲಯ ಇಲ್ಲ. ಗರ್ಭಿಣಿ, ಬಾಣಂತಿಯರ ಕಷ್ಟ ಕೇಳುವವರಿಲ್ಲ261025-18-722223655