ದೇವೇಗೌಡ ಕುಟುಂಬ ಮುಗಿಸಲು ಮುಖ್ಯಮಂತ್ರಿಯಿಂದ ₹600 ಕೋಟಿ ಸುಪಾರಿ: ಎಚ್ಡಿಕೆ
ಬೆಂಗಳೂರು: ‘ಎಚ್.ಡಿ.ದೇವೇಗೌಡರ ಕುಟುಂಬವನ್ನು ಮುಗಿಸಲು ಹಾಲಿ ಮುಖ್ಯಮಂತ್ರಿ ₹600 ಕೋಟಿಯಷ್ಟು ಬೃಹತ್ ಮೊತ್ತದ ಸುಪಾರಿ ನೀಡಿದ್ದಾರೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ದೇವೇಗೌಡ ಅವರ ಕುಟುಂಬವನ್ನು ಮುಗಿಸಬೇಕು ಎಂದು ಈಗಿನ ಮುಖ್ಯಮಂತ್ರಿ ಸಾಲು– ಸಾಲು ಕುತಂತ್ರ ನಡೆಸುತ್ತಲೇ ಇದ್ದಾರೆ. ಅ

ಬೆಂಗಳೂರು: ‘ಎಚ್.ಡಿ.ದೇವೇಗೌಡರ ಕುಟುಂಬವನ್ನು ಮುಗಿಸಲು ಹಾಲಿ ಮುಖ್ಯಮಂತ್ರಿ ₹600 ಕೋಟಿಯಷ್ಟು ಬೃಹತ್ ಮೊತ್ತದ ಸುಪಾರಿ ನೀಡಿದ್ದಾರೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ದೇವೇಗೌಡ ಅವರ ಕುಟುಂಬವನ್ನು ಮುಗಿಸಬೇಕು ಎಂದು ಈಗಿನ ಮುಖ್ಯಮಂತ್ರಿ ಸಾಲು– ಸಾಲು ಕುತಂತ್ರ ನಡೆಸುತ್ತಲೇ ಇದ್ದಾರೆ. ಅದರ ಭಾಗವಾಗಿಯೇ ₹600 ಕೋಟಿಯ ಸುಪಾರಿ ನೀಡಿದ್ದಾರೆ ಎಂಬುದು ಗೊತ್ತಿದೆ’ ಎಂದರು.‘ಅವರು ನಮ್ಮ ಕುಟುಂಬವಲ್ಲದೆ, ಇನ್ಯಾವ ಕುಟುಂಬದ ವಿರುದ್ಧ ಇಂತಹ ಸಂಚು ನಡೆಸುತ್ತಾರೆ. ಈ ಕುರಿತು ತನಿಖೆಯಾಗಬೇಕು’ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.‘ಸ್ಟಿಂಗ್ ಕಾರ್ಯಚರಣೆ ವಿಚಾರದಲ್ಲಿ ಜೆಡಿಎಸ್ನ ಸಾಮಾಜಿಕ ಜಾಲತಾಣದ ಹುಡುಗರು ತಲೆಮರೆಸಿಕೊಂಡಿದ್ದಾರೆ ಎಂದು ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆ. ನಮ್ಮ ಹುಡುಗರು ವಿಚಾರಣೆಗೆ ಬರುವಾಗ ಬರುತ್ತಾರೆ. ನಮ್ಮ ಹುಡುಗರೂ ಭಯಪಡುವ ಅಗತ್ಯವಿಲ್ಲ. ಅವರ ಬೆನ್ನಿಗೆ ಪಕ್ಷ ನಿಂತಿದೆ’ ಎಂದರು. ‘ಪೊಲೀಸರು ಕರೆದಾಗ ಹೋಗಿ, ಅವರು ಕೇಳಿದ ಉಪಕರಣಗಳನ್ನು ಕೊಡಿ. ನಿಮಗೆ ಗೊತ್ತಿರುವುದನ್ನು ಹೇಳಿ ಎಂದು ನಮ್ಮ ಹುಡುಗರಿಗೆ ಹೇಳಿದ್ದೇನೆ’ ಎಂದು ಮಾಹಿತಿ ನೀಡಿದರು.