ಮನೆಯಲ್ಲಿ ಮಾಡಿ ಹೈದರಾಬಾದಿ ಶೈಲಿಯ ಖೀಮಾ ಬಾಲ್ಸ್
ಹೈದರಾಬಾದ್ನ ಕೆಲ ಸಮುದಾಯಗಳ ಮದುವೆ ಹಾಗೂ ಶುಭ ಸಮಾರಂಭಗಳ ಮಧ್ಯಾಹ್ನದ ಊಟದಲ್ಲಿ ಖೀಮಾ ಉಂಡೆಗಳು ಇಲ್ಲದಿದ್ದರೆ ಆ ಊಟವೇ ಅಪೂರ್ಣ. ವಿಶಿಷ್ಟ ರುಚಿ ಹಾಗೂ ಗರಿಗರಿಯಾದ ವಿನ್ಯಾಸ ಹೊಂದಿರುವ ಈ ಸ್ವಾದಿಷ್ಟ ಖೀಮಾ ಬಾಲ್ಸ್ ತಯಾರಿಸುವ ಸರಳ ವಿಧಾನ ಇಲ್ಲಿದೆ ಬೇಕಾಗುವ ಮುಖ್ಯ ಪದಾರ್ಥಗಳು: ಮಟನ್ ಖೀಮಾ ಕಡಲೆ ಹಿಟ್ಟು ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಶುಂಠಿ-ಬೆಳ್ಳುಳ್ಳಿ ಪೇಸ್ಟ

ಹೈದರಾಬಾದ್ನ ಕೆಲ ಸಮುದಾಯಗಳ ಮದುವೆ ಹಾಗೂ ಶುಭ ಸಮಾರಂಭಗಳ ಮಧ್ಯಾಹ್ನದ ಊಟದಲ್ಲಿ ಖೀಮಾ ಉಂಡೆಗಳು ಇಲ್ಲದಿದ್ದರೆ ಆ ಊಟವೇ ಅಪೂರ್ಣ. ವಿಶಿಷ್ಟ ರುಚಿ ಹಾಗೂ ಗರಿಗರಿಯಾದ ವಿನ್ಯಾಸ ಹೊಂದಿರುವ ಈ ಸ್ವಾದಿಷ್ಟ ಖೀಮಾ ಬಾಲ್ಸ್ ತಯಾರಿಸುವ ಸರಳ ವಿಧಾನ ಇಲ್ಲಿದೆ ಬೇಕಾಗುವ ಮುಖ್ಯ ಪದಾರ್ಥಗಳು: ಮಟನ್ ಖೀಮಾ ಕಡಲೆ ಹಿಟ್ಟು ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅರಿಶಿನ, ಖಾರದ ಪುಡಿ, ಉಪ್ಪು ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ನಿಂಬೆಹಣ್ಣಿನ ರಸ ಕರಿಯಲು ಎಣ್ಣೆ ತಯಾರಿಸುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಅದಕ್ಕೆ ಹೆಚ್ಚಿದ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಹುರಿಯಬೇಕು. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಬಾಡಿಸಿ, ಅರಿಶಿನ, ಖಾರದ ಪುಡಿ ಮತ್ತು ಉಪ್ಪು ಸೇರಿಸಬೇಕು. ಇದಕ್ಕೆ ತೊಳೆದು ನೀರು ಬಸಿದುಕೊಂಡ ಖೀಮಾವನ್ನು ಸೇರಿಸಿ, ಸಂಪೂರ್ಣವಾಗಿ ಡ್ರೈ ಆಗುವವರೆಗೆ ಚೆನ್ನಾಗಿ ಬೇಯಿಸಿ ಪಕ್ಕಕ್ಕೆ ಇಡಬೇಕು. ಇನ್ನೊಂದು ಬಟ್ಟಲಿನಲ್ಲಿ ಕಡಲೆ ಹಿಟ್ಟಿಗೆ ಸ್ವಲ್ಪ ಉಪ್ಪು, ಒಂದು ಚಮಚ ಎಣ್ಣೆ ಹಾಗೂ ಹಂತಹಂತವಾಗಿ ನೀರು ಸೇರಿಸಿ, ಗಂಟುಗಳಿಲ್ಲದಂತೆ ಹದಕ್ಕೆ ಕಲಸಿಕೊಂಡು ಸುಮಾರು 10 ನಿಮಿಷ ನೆನೆಯಲು ಬಿಡಬೇಕು. ಬಿಸಿ ಎಣ್ಣೆಯಲ್ಲಿ ಈ ಹಿಟ್ಟಿನಿಂದ ಸಣ್ಣ ಸಣ್ಣ ಪಕೋಡಾಗಳನ್ನು ಹಾಕಿ, ಸಣ್ಣ ಉರಿಯಲ್ಲಿ ಹೊಂಬಣ್ಣ ಹಾಗೂ ಗರಿಗರಿಯಾಗುವವರೆಗೆ ಕರಿದು ತಣ್ಣಗಾಗಲು ಬಿಡಬೇಕು. ತಣ್ಣಗಾದ ಪಕೋಡಾಗಳನ್ನು ಮಿಕ್ಸಿ ಜಾರ್ಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಬಳಿಕ ಬೇಯಿಸಿದ ಖೀಮಾವನ್ನು ಸಹ ಮಿಕ್ಸಿಯಲ್ಲಿ ರುಬ್ಬಿಕೊಂಡು, ಪುಡಿ ಮಾಡಿದ ಪಕೋಡಾ ಮಿಶ್ರಣದೊಂದಿಗೆ ಬೆರೆಸಬೇಕು. ಈ ಮಿಶ್ರಣಕ್ಕೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ ಹಾಗೂ ನಿಂಬೆಹಣ್ಣಿನ ರಸವನ್ನು ಹಿಂಡಿ, ಕೈಯಿಂದ ಚೆನ್ನಾಗಿ ನಾದಿ ಸಣ್ಣ ಸಣ್ಣ ಉಂಡೆಗಳಾಗಿ (ಬಾಲ್ಸ್) ಕಟ್ಟಿಕೊಳ್ಳಬೇಕು. ಕಾದ ಎಣ್ಣೆಯಲ್ಲಿ ಈ ಉಂಡೆಗಳನ್ನು ಹಾಕಿ, ಎರಡೂ ಬದಿಗಳಲ್ಲಿ ಕೆಂಪಾಗುವಂತೆ ಗರಿಗರಿಯಾಗಿ ಹೊಂಬಣ್ಣ ಬರುವವರೆಗೆ ಕರಿದು ತೆಗೆಯಬೇಕು. ಹೊರಗಡೆ ಗರಿಗರಿಯಾಗಿ, ಒಳಗಡೆ ಮೃದು ಹಾಗೂ ಹುಳಿ-ಖಾರದ ರುಚಿ ನೀಡುವ ಈ ಉಂಡೆಗಳನ್ನು ಬಿಸಿಬಿಸಿಯಾಗಿ ಅತಿಥಿಗಳಿಗೆ ಅಥವಾ ಸಂಜೆಯ ತಿಂಡಿಯಾಗಿ ಸವಿಯಲು ನೀಡಬಹುದು.