ಕ್ರಿಕೆಟ್: ದೇವದತ್ತ–ಸಾಯಿ ಜೊತೆಯಾಟದ ಆಸರೆ
ಲಿಂಕನ್: ದೇವದತ್ತ ಪಡಿಕ್ಕಲ್ ಮತ್ತು ಸಾಯಿ ಸುದರ್ಶನ್ ಅವರು ಇಲ್ಲಿ ನಡೆಯುತ್ತಿರುವ ‘ಟೆಸ್ಟ್’ ಪಂದ್ಯದಲ್ಲಿ ಭಾರತ ಎ ತಂಡಕ್ಕೆ ಆಸರೆಯಾದರು. ನ್ಯೂಜಿಲೆಂಡ್ ಎ ತಂಡದ ಎದುರಿನ ಪಂದ್ಯದಲ್ಲಿ ಭಾರತ ಎ ಬಳಗವು ಮೊದಲ ಇನಿಂಗ್ಸ್ನಲ್ಲಿ 204 ರನ್ ಹಿನ್ನಡೆ ಅನುಭವಿಸಿತ್ತು. ಎರಡನೇ ಇನಿಂಗ್ಸ್ನಲ್ಲಿ ಕೇವಲ 10 ರನ್ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತು. ಯಶಸ್ವಿ ಜೈಸ್ವಾಲ

ಲಿಂಕನ್: ದೇವದತ್ತ ಪಡಿಕ್ಕಲ್ ಮತ್ತು ಸಾಯಿ ಸುದರ್ಶನ್ ಅವರು ಇಲ್ಲಿ ನಡೆಯುತ್ತಿರುವ ‘ಟೆಸ್ಟ್’ ಪಂದ್ಯದಲ್ಲಿ ಭಾರತ ಎ ತಂಡಕ್ಕೆ ಆಸರೆಯಾದರು. ನ್ಯೂಜಿಲೆಂಡ್ ಎ ತಂಡದ ಎದುರಿನ ಪಂದ್ಯದಲ್ಲಿ ಭಾರತ ಎ ಬಳಗವು ಮೊದಲ ಇನಿಂಗ್ಸ್ನಲ್ಲಿ 204 ರನ್ ಹಿನ್ನಡೆ ಅನುಭವಿಸಿತ್ತು. ಎರಡನೇ ಇನಿಂಗ್ಸ್ನಲ್ಲಿ ಕೇವಲ 10 ರನ್ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತು. ಯಶಸ್ವಿ ಜೈಸ್ವಾಲ್ (5 ರನ್) ಮತ್ತು ಕೆ.ಎಲ್. ರಾಹುಲ್ (4 ರನ್) ಅವರು ಪೆವಿಲಿಯನ್ಗೆ ಮರಳಿದರು. ಈ ಪಂದ್ಯದಲ್ಲಿ ಸತತ ಎರಡೂ ಇನಿಂಗ್ಸ್ಗಳಲ್ಲಿ ಯಶಸ್ವಿ, ರಾಹುಲ್ ಜೋಡಿಯು ವಿಫಲವಾಯಿತು. ಇದರಿಂದಾಗಿ ತಂಡದಲ್ಲಿ ಅತಂಕ ಮೂಡಿತ್ತು. ಈ ಹಂತದಲ್ಲಿ ಜೊತೆಯಾದ ಕರ್ನಾಟಕದ ದೇವದತ್ತ ಪಡಿಕ್ಕಲ್ (ಬ್ಯಾಟಿಂಗ್ 56; 89ಎ) ಮತ್ತು ಸಾಯಿ (ಬ್ಯಾಟಿಂಗ್ 39; 104ಎ) ಅವರ 96 ರನ್ಗಳ ಜೊತೆಯಾಟದಿಂದಾಗಿ ತಂಡವು ಚೇತರಿಸಿಕೊಂಡಿತು. ಎಡಗೈ ಬ್ಯಾಟರ್ ಪಡಿಕ್ಕಲ್ ಅವರು 9 ಹಾಗೂ ಸಾಯಿ 5 ಬೌಂಡರಿ ಹೊಡೆದರು. ಇದರಿಂದಾಗಿ ಎರಡನೇ ದಿನದಾಟದ ಮುಕ್ತಾಯಕ್ಕೆ ಪ್ರವಾಸಿ ಬಳಗವು 36 ಓವರ್ಗಳಲ್ಲಿ 2 ವಿಕೆಟ್ಗಳಿಗೆ 106 ರನ್ ಗಳಿಸಿತು. ಮುನ್ನಡೆಯ ಅಂತರವನ್ನು ಚುಕ್ತಾ ಮಾಡಲು ತಂಡಕ್ಕೆ ಇನ್ನೂ 98 ರನ್ಗಳ ಅವಶ್ಯಕತೆ ಇದೆ. ಅದರ ನಂತರ ಎದುರಾಳಿಗೆ ಕಠಿಣ ಗುರಿಯೊಡ್ಡುವ ಸವಾಲು ಇದೆ. ಪಂದ್ಯದಲ್ಲಿ ಇನ್ನೂ ಎರಡು ದಿನಗಳ ಆಟ ಬಾಕಿ ಇದೆ. ಸಂಕ್ಷಿಪ್ತ ಸ್ಕೋರು: ಭಾರತ ಎ: 113 ಮತ್ತು 36 ಓವರ್ಗಳಲ್ಲಿ 2 ವಿಕೆಟ್ಗಳಿಗೆ 106 (ದೇವದತ್ತ ಪಡಿಕ್ಕಲ್ ಬ್ಯಾಟಿಂಗ್ 56, ಸಾಯಿ ಸುದರ್ಶನ್ ಬ್ಯಾಟಿಂಗ್ 39, ಸಿಮೊನ್ ಕೀನಿ 19ಕ್ಕೆ1, ಫ್ರೆಸರ್ ಶೀಟ್ 26ಕ್ಕೆ1) ನ್ಯೂಜಿಲೆಂಡ್ ಎ: 89.3 ಓವರ್ಗಳಲ್ಲಿ 317 (ರೈಸ್ ಮಾರಿಯು 76, ಡೀನ್ ಫಾಕ್ಸ್ಕ್ರಾಫ್ಟ್ 51, ಅನ್ಷುಲ್ ಕಂಬೋಜ್ 52ಕ್ಕೆ3, ಅಕೀಬ್ ನಬಿ 69ಕ್ಕೆ3)