ಆಯುರ್ವೇದ ಜ್ಞಾನ–ನ್ಯಾನೊ ತಂತ್ರಜ್ಞಾನ ಸಮನ್ವಯದ ಅಗತ್ಯವಿದೆ: ಅನಂತಕುಮಾರ್ ಹೆಗಡೆ
ಮೈಸೂರು: ‘ಆಯುರ್ವೇದದ ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ನ್ಯಾನೊ ತಂತ್ರಜ್ಞಾನದೊಂದಿಗೆ ಸಮನ್ವಯಗೊಳಿಸುವ ಅಗತ್ಯವಿದೆ’ ಎಂದು ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಹೆಗಡೆ ಹೇಳಿದರು.ಇಲ್ಲಿನ ಕೃಷ್ಣಮೂರ್ತಿಪುರಂನ ಬಿಎಸ್ಎಸ್ ಶಾಲೆಯಲ್ಲಿ ಭಾನುವಾರ ಜಿಎಸ್ಎಸ್ ಚಿರಾಯು ಆಯುರ್ವೇದ ಮತ್ತು ಯೋಗ ಸಂಸ್ಥೆ ಹಾಗೂ ಕದಂಬ ನ್ಯಾನೋಕೇರ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ‘ಟೆಕ
ಮೈಸೂರು: ‘ಆಯುರ್ವೇದದ ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ನ್ಯಾನೊ ತಂತ್ರಜ್ಞಾನದೊಂದಿಗೆ ಸಮನ್ವಯಗೊಳಿಸುವ ಅಗತ್ಯವಿದೆ’ ಎಂದು ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಹೆಗಡೆ ಹೇಳಿದರು.ಇಲ್ಲಿನ ಕೃಷ್ಣಮೂರ್ತಿಪುರಂನ ಬಿಎಸ್ಎಸ್ ಶಾಲೆಯಲ್ಲಿ ಭಾನುವಾರ ಜಿಎಸ್ಎಸ್ ಚಿರಾಯು ಆಯುರ್ವೇದ ಮತ್ತು ಯೋಗ ಸಂಸ್ಥೆ ಹಾಗೂ ಕದಂಬ ನ್ಯಾನೋಕೇರ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ‘ಟೆಕ್ನೋ ಆಯುರ್ವೇದ’ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.‘ಆಯುರ್ವೇದ ಕೇವಲ ಔಷಧ ಪದ್ಧತಿಯಲ್ಲ, ಅದು ದೈಹಿಕ ಮತ್ತು ಮಾನಸಿಕ ಆರೋಗ್ಯ ಒಳಗೊಂಡ ಸಮಗ್ರ ಜೀವನ ವಿಜ್ಞಾನವಾಗಿದೆ. ಆ ಔಷಧಗಳು ದೇಹದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತವೆ. ಅವುಗಳಿಂದ ಉಂಟಾಗುವ ಪ್ರಯೋಜನಗಳೇನು ಹಾಗೂ ಅವುಗಳ ಸುರಕ್ಷತೆ ಹೇಗಿದೆ ಎಂಬುದನ್ನು ಆಧುನಿಕ ಸಂಶೋಧನೆ ಮತ್ತು ವೈದ್ಯಕೀಯ ಪ್ರಯೋಗಗಳ ಮೂಲಕ ಪರಿಶೀಲಿಸಬೇಕಿದೆ’ ಎಂದು ಅಭಿಪ್ರಾಯಪಟ್ಟರು. ‘ಕ್ಯಾನ್ಸರ್ ಸೇರಿದಂತೆ ವಿವಿಧ ಕಾಯಿಲೆಗಳಲ್ಲಿ ಔಷಧಗಳ ಪರಿಣಾಮಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ವಿಶ್ವಾಸಾರ್ಹ ಪುರಾವೆಗಳನ್ನು ಒದಗಿಸಿದರೆ ಆಯುರ್ವೇದಕ್ಕೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಮನ್ನಣೆ ದೊರೆಯಲಿದೆ’ ಎಂದರು.ಆಯುರ್ವೇದ ತಜ್ಞ ಡಾ.ಚಂದ್ರಶೇಖರ್, ಕದಂಬ ನ್ಯಾನೋಕೇರ್ ಸಂಸ್ಥೆಯ ಡಾ.ವಿಜಯ್ ಕುಮಾರ್ ಮಾತನಾಡಿದರು. ಡಾ.ವಿ.ಎನ್. ಕೃಷ್ಣಮೂರ್ತಿ, ಡಾ.ಆಂಜನೇಯ, ಡಾ.ಭರತ್, ಡಾ.ಗಣೇಶ್ ಉಪನ್ಯಾಸ ನೀಡಿದರು.ಆಯುಷ್ ಇಲಾಖೆ ನಿವೃತ್ತ ಉಪ ನಿರ್ದೇಶಕ ಡಾ.ನಾಗೇಶ್ ಎನ್. ಪಾಟೀಲ್, ಮೈಸೂರು ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಲಕ್ಷ್ಮೀನಾರಾಯಣ ಶೆಣೈ, ಜಿಎಸ್ಎಸ್ ಚಿರಾಯು ಆಯುರ್ವೇದ ಮತ್ತು ಯೋಗ ಸಂಸ್ಥೆ ಮುಖ್ಯಸ್ಥ ಶ್ರೀಹರಿ ದ್ವಾರಕನಾಥ್ ಪಾಲ್ಗೊಂಡಿದ್ದರು.