ಕೇರಳ ನ್ಯಾಯಾಧೀಶರ ಮಗನ ಬೆಂಝ್ ಕಾರು ಸ್ಕೂಟರ್ಗೆ ಡಿಕ್ಕಿ, ಸವಾರ ಸಾವು
ಕೊಚ್ಚಿ: ಕೇರಳದ ನ್ಯಾಯಾಧೀಶರೊಬ್ಬರ 17 ವರ್ಷದ ಮಗ ಚಲಾಯಿಸುತ್ತಿದ್ದ ಮರ್ಸಿಡಿಸ್ ಬೆಂಝ್ ಕಾರು ಸ್ಕೂಟರ್ಗೆ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಭಾನುವಾರ ನಡೆದಿದೆ. ಭಾನುವಾರ ಚೇರನಲ್ಲೂರ್ ಸಮೀಪದಲ್ಲಿ ನಡೆದ ಈ ಅವಘಡದಲ್ಲಿ 55 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ನ್ಯಾಯಾಧೀಶರ ವಿರುದ್ಧ ಪ್ರಕರಣ ದಾಖಲಿಸಲು ಕೇರಳ ಹೈಕೋರ್ಟ್ ಅನುಮತಿ:ಈ ಘಟನೆ ಸ

ಕೊಚ್ಚಿ: ಕೇರಳದ ನ್ಯಾಯಾಧೀಶರೊಬ್ಬರ 17 ವರ್ಷದ ಮಗ ಚಲಾಯಿಸುತ್ತಿದ್ದ ಮರ್ಸಿಡಿಸ್ ಬೆಂಝ್ ಕಾರು ಸ್ಕೂಟರ್ಗೆ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಭಾನುವಾರ ನಡೆದಿದೆ. ಭಾನುವಾರ ಚೇರನಲ್ಲೂರ್ ಸಮೀಪದಲ್ಲಿ ನಡೆದ ಈ ಅವಘಡದಲ್ಲಿ 55 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ನ್ಯಾಯಾಧೀಶರ ವಿರುದ್ಧ ಪ್ರಕರಣ ದಾಖಲಿಸಲು ಕೇರಳ ಹೈಕೋರ್ಟ್ ಅನುಮತಿ:ಈ ಘಟನೆ ಸಂಬಂಧ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನ ತಂದೆ, ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ವಿರುದ್ಧ ಪ್ರಕರಣ ದಾಖಲಿಸಲು ಕೇರಳ ಹೈಕೋರ್ಟ್ ಸೋಮವಾರ ಪೊಲೀಸರಿಗೆ ಅನುಮತಿ ನೀಡಿದೆ.ನ್ಯಾಯಾಧೀಶರ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರು ಅನುಮತಿ ಕೋರಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ಆದೇಶವನ್ನು ಹೊರಡಿಸಿದೆ ಎಂದು ಮೂಲಗಳು ತಿಳಿಸಿವೆ.ಮೃತ ಜಯಬಾಲಕೃಷ್ಣನ್ (55) ಅವರ ಕುಟುಂಬವು ಚೇರನಲ್ಲೂರ್ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ, ಭಾನುವಾರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ನ್ಯಾಯಾಧೀಶರ ಬಾಲಕನನ್ನು ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ.ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ 105 ಅಡಿಯಲ್ಲಿ ಪ್ರಕರಣ ದಾಖಲಿಸಿ, ಬಾಲನ್ಯಾಯ ಮಂಡಳಿ (ಜೆಜೆಬಿ) ಮುಂದೆ ಹಾಜರುಪಡಿಸಲಾಯಿತು. ಪೊಲೀಸರ ಮಾಹಿತಿಯ ಪ್ರಕಾರ, ನ್ಯಾಯಾಧೀಶರ ಹೆಸರಿನಲ್ಲಿ ನೋಂದಾಯಿಸಲಾದ ಮರ್ಸಿಡಿಸ್-ಬೆಂಝ್ ಕಾರನ್ನು ಅವರ ಮಗ ಚಲಾಯಿಸುತ್ತಿದ್ದ. ಅತಿ ವೇಗದಲ್ಲಿದ್ದ ಕಾರು ಜಯಬಾಲಕೃಷ್ಣನ್ ಅವರ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಹುಲ್ ಗಾಂಧಿ ಬೆಂಗಾವಲು ವಾಹನಗಳ ನಡುವೆ ಅಪಘಾತ: ಕಾಂಗ್ರೆಸ್ ನಾಯಕ ಸುರಕ್ಷಿತಅಪಘಾತ: ಜಾರ್ಖಂಡ್ ಸಚಿವೆ ಪುತ್ರಿ ಸೇರಿ ನಾಲ್ವರ ಸಾವು