ಬ್ರಹ್ಮಪುತ್ರ ನದಿಗೆ ಬೃಹತ್ ಅಣೆಕಟ್ಟು: ಅಪಾಯಕ್ಕೆ ಆಹ್ವಾನ ಎಂದ ಚೀನಾ ಸಂಶೋಧಕರು
ಬೀಜಿಂಗ್: ಟಿಬೆಟ್ನಲ್ಲಿರುವ ಬ್ರಹ್ಮಪುತ್ರ ನದಿಗೆ ಚೀನಾವು ವಿಶ್ವದ ಅತಿ ದೊಡ್ಡ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿರುವುದು ಮುಂದಿನ ಶತಮಾನದಲ್ಲಿ ಪ್ರವಾಹಕ್ಕೆ ಆಹ್ವಾನ ನೀಡಿದಂತಾಗಲಿದೆ ಎಂದು ಚೀನಾದ ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.1325ರಿಂದ 2020ರವರೆಗಿನ ನದಿ ಇತಿಹಾಸ ಅರಿಯಲು ಮರದ ಕಾಂಡದ ವೃತ್ತಗಳನ್ನು ಅಧ್ಯಯನದ ಪರಿಕರಗಳಾಗಿ ಯುನಾನ್ ವಿಶ್ವವಿದ್ಯಾಲಯ ಹಾಗೂ

ಬೀಜಿಂಗ್: ಟಿಬೆಟ್ನಲ್ಲಿರುವ ಬ್ರಹ್ಮಪುತ್ರ ನದಿಗೆ ಚೀನಾವು ವಿಶ್ವದ ಅತಿ ದೊಡ್ಡ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿರುವುದು ಮುಂದಿನ ಶತಮಾನದಲ್ಲಿ ಪ್ರವಾಹಕ್ಕೆ ಆಹ್ವಾನ ನೀಡಿದಂತಾಗಲಿದೆ ಎಂದು ಚೀನಾದ ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.1325ರಿಂದ 2020ರವರೆಗಿನ ನದಿ ಇತಿಹಾಸ ಅರಿಯಲು ಮರದ ಕಾಂಡದ ವೃತ್ತಗಳನ್ನು ಅಧ್ಯಯನದ ಪರಿಕರಗಳಾಗಿ ಯುನಾನ್ ವಿಶ್ವವಿದ್ಯಾಲಯ ಹಾಗೂ ಚೀನಾ ಅಕಾಡೆಮಿ ಸೈನ್ಸಸ್ನ ಸಂಶೋಧಕರು ಬಳಸಿಕೊಂಡಿದ್ದಾರೆ. ಆನಂತರ ವರದಿ ನೀಡಿದ್ದಾರೆ.ಭವಿಷ್ಯದಲ್ಲಿ ನದಿ ಹರಿವಿನ ಪ್ರಮಾಣವು ಹೆಚ್ಚಾಗಲಿದ್ದು, ಪ್ರವಾಹ ಉಂಟಾಗಲಿದೆ ಎಂದು ಎರಡು ದತ್ತಾಂಶಗಳನ್ನು ಸಯೋಜಿಸಿದ ಮಾದರಿಯೊಂದನ್ನು ಬಿಡುಗಡೆಗೊಳಿಸಿದ್ದಾರೆ. ಯರ್ಲಿಂಗ್ ಝಿಂಗ್ಬೊ (ಭಾರತದಲ್ಲಿ ಬ್ರಹ್ಮಪುತ್ರ) ನದಿ ಹರಿವಿನ ಮೇಲಿನ ದೀರ್ಘಕಾಲೀನ ಪರಿಣಾಮ ಹಾಗೂ ಭವಿಷ್ಯದ ಜಲಸಂಪನ್ಮೂಲದ ಅಪಾಯ ನಿರ್ಧರಿಸಲು ನಡೆಸಿದ ವೈಜ್ಞಾನಿಕ ಅಧ್ಯಯನದ ವರದಿಯು ‘ಚೀನಾ ಸೈನ್ಸ್ ಬುಲೆಟಿನ್ ಜರ್ನಲ್’ನಲ್ಲಿ ಅಕ್ಟೋಬರ್ 8ರಂದು ಪ್ರಕಟಗೊಂಡಿದೆ ಎಂದು ಹಾಂಗ್ಕಾಂಗ್ ಮೂಲದ ‘ಸೌತ್ ಚೀನಾ ಮಾರ್ನಿಂಗ್ ಫೋಸ್ಟ್’ ವರದಿ ಮಾಡಿದೆ.ಟಿಬೆಟ್ನ ಪ್ರಸ್ಥಭೂಮಿಯಲ್ಲಿ ಜಾಗತಿಕ ಸರಾಸರಿಗಿಂತಲೂ ಎರಡು ಪಟ್ಟು ವೇಗದಲ್ಲಿ ತಾಪಮಾನ ಏರಿಕೆಯಾಗುತ್ತಿದ್ದು, ಅದು ಹಿಮದ ಹೊದಿಕೆ, ಜಲಜನಕ ಜೀವನಚಕ್ರದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.ಬ್ರಹ್ಮಪುತ್ರ ನದಿಗೆ ಕಟ್ಟಲಿರುವ ಅಣೆಕಟ್ಟು, ಭೂಮಿ ಮೇಲಿನ ಅತ್ಯಂತ ದೊಡ್ಡ ಯೋಜನೆ ಇದಾಗಿದ್ದು, 137 ಬಿಲಿಯನ್ ಡಾಲರ್ (₹11.67 ಲಕ್ಷ ಕೋಟಿ) ವೆಚ್ಚದಲ್ಲಿ ನಿರ್ಮಾಣವಾಗಲಿದೆ.ಬ್ರಹ್ಮಪುತ್ರ ನದಿಗೆ ಈ ಅಣೆಕಟ್ಟು ನಿರ್ಮಿಸಲು ಉದ್ದೇಶಿಸಿದ್ದು, ಈ ನದಿ ನೀರಿನಲ್ಲಿ ಪಾಲು ಹೊಂದಿರುವ ಭಾರತ ಹಾಗೂ ಬಾಂಗ್ಲಾದೇಶ ಈಗಾಗಲೇ ಕಳವಳ ವ್ಯಕ್ತಪಡಿಸಿವೆ.