ಇ100 ಇಂಧನ ಬಳಸುವ ವಾಹನಗಳಿಗೆ ಕೇಂದ್ರ ಅವಕಾಶ
ನವದೆಹಲಿ : ಕೇಂದ್ರ ಮೋಟರು ವಾಹನಗಳ ನಿಯಮದಲ್ಲಿ ತಂದಿರುವ ಬದಲಾವಣೆಗಳನ್ನು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಸೋಮವಾರ ಅಧಿಸೂಚನೆಯಲ್ಲಿ ಪ್ರಕಟಿಸಿದ್ದು, ‘ಇ100’ವರೆಗಿನ ಇಂಧನವನ್ನು (ಸಂಪೂರ್ಣವಾಗಿ ಎಥೆನಾಲ್) ಬಳಸುವ ವಾಹನಗಳಿಗೆ ಅವಕಾಶ ಕಲ್ಪಿಸಿದೆ.ಪೆಟ್ರೋಲ್ನಲ್ಲಿ ಶೇ 20ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಇರುವ ಅಥವಾ ಶೇ 100ರಷ್ಟು ಎಥೆನಾಲ್ ಇರು

ನವದೆಹಲಿ : ಕೇಂದ್ರ ಮೋಟರು ವಾಹನಗಳ ನಿಯಮದಲ್ಲಿ ತಂದಿರುವ ಬದಲಾವಣೆಗಳನ್ನು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಸೋಮವಾರ ಅಧಿಸೂಚನೆಯಲ್ಲಿ ಪ್ರಕಟಿಸಿದ್ದು, ‘ಇ100’ವರೆಗಿನ ಇಂಧನವನ್ನು (ಸಂಪೂರ್ಣವಾಗಿ ಎಥೆನಾಲ್) ಬಳಸುವ ವಾಹನಗಳಿಗೆ ಅವಕಾಶ ಕಲ್ಪಿಸಿದೆ.ಪೆಟ್ರೋಲ್ನಲ್ಲಿ ಶೇ 20ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಇರುವ ಅಥವಾ ಶೇ 100ರಷ್ಟು ಎಥೆನಾಲ್ ಇರುವ ಇಂಧನದ ಬಳಕೆಯು ಅಂತಹ ಇಂಧನಕ್ಕಾಗಿ ವಿನ್ಯಾಸಗೊಂಡಿರುವ ವಾಹನಗಳಿಗೆ ಸೀಮಿತ, ಇತರ ವಾಹನಗಳಿಗೆ ಅದು ಅನ್ವಯವಾಗುವುದಿಲ್ಲ ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಇ20 (ಶೇ 20ರಷ್ಟು ಎಥೆನಾಲ್ ಮಿಶ್ರಣ ಇರುವ ಪೆಟ್ರೋಲ್) ಇಂಧನ ಬಳಸುವ ವಾಹನಗಳು ಇ85 ಅಥವಾ ಇ100 ಇಂಧನ ಬಳಸಲು ಆಗುವುದಿಲ್ಲ.ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಸಂಪೂರ್ಣವಾಗಿ ಎಥೆನಾಲ್ ಬಳಸಿ ಚಲಿಸುವ (ಫ್ಲೆಕ್ಸ್ ಫ್ಯುಯೆಲ್) ವ್ಯಾಗನ್–ಆರ್ ಮಾದರಿಯನ್ನು ಜೂನ್ ತಿಂಗಳಲ್ಲಿ ಬಿಡುಗಡೆ ಮಾಡಿದೆ. ಈ ಕಾರು ಇ20 ಹಾಗೂ ಅದಕ್ಕಿಂತ ಹೆಚ್ಚಿನ ಯಾವುದೇ ಪ್ರಮಾಣದ ಎಥೆನಾಲ್ ಮಿಶ್ರಣದ ಪೆಟ್ರೋಲ್ ಬಳಸಿ ಚಲಿಸಬಲ್ಲದು.ಟೊಯೊಟ, ಟಾಟಾ ಮೋಟರ್ಸ್, ಹುಂಡೈ ಸೇರಿದಂತೆ ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿಗಳು ಫ್ಲೆಕ್ಸ್ ಫ್ಯುಯೆಲ್ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿವೆ.