ಕೋಲ್ಕತ್ತ: ಖ್ಯಾತ ಚಿತ್ರಕಾರ ಜೋಗೇನ್ ಚೌಧುರಿ ನಿಧನ
ಕೋಲ್ಕತ್ತ(ಪಿಟಿಐ): ಪ್ರಖ್ಯಾತ ಚಿತ್ರಕಾರ ಜೋಗೇನ್ ಚೌಧುರಿ (87) ಅವರು ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾದರು. ರಕ್ತದ ಕ್ಯಾನ್ಸರ್ನಿಂದ ಅವರು ಬಳಲುತ್ತಿದ್ದರು.ಚೌಧುರಿಯವರು ಟಿಎಂಸಿಯ ಮಾಜಿ ಸಂಸದರೂ ಆಗಿದ್ದರು. ಆಗ್ನೇಯ ಕೋಲ್ಕತ್ತದಲ್ಲಿರುವ ಆಸ್ಪತ್ರೆಗೆ ಅ.18ರಂದು ದಾಖಲಾಗಿದ್ದರು ಎಂದು ರೂಬಿ ಜನರಲ್ ಆಸ್ಪತ್ರೆಯ ತಿಳಿಸಿದೆ.‘ರಾಷ್ಟ್ರಪತಿ ಭವನ ಸೇರಿದಂತೆ ಅನೇಕ

ಕೋಲ್ಕತ್ತ(ಪಿಟಿಐ): ಪ್ರಖ್ಯಾತ ಚಿತ್ರಕಾರ ಜೋಗೇನ್ ಚೌಧುರಿ (87) ಅವರು ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾದರು. ರಕ್ತದ ಕ್ಯಾನ್ಸರ್ನಿಂದ ಅವರು ಬಳಲುತ್ತಿದ್ದರು.ಚೌಧುರಿಯವರು ಟಿಎಂಸಿಯ ಮಾಜಿ ಸಂಸದರೂ ಆಗಿದ್ದರು. ಆಗ್ನೇಯ ಕೋಲ್ಕತ್ತದಲ್ಲಿರುವ ಆಸ್ಪತ್ರೆಗೆ ಅ.18ರಂದು ದಾಖಲಾಗಿದ್ದರು ಎಂದು ರೂಬಿ ಜನರಲ್ ಆಸ್ಪತ್ರೆಯ ತಿಳಿಸಿದೆ.‘ರಾಷ್ಟ್ರಪತಿ ಭವನ ಸೇರಿದಂತೆ ಅನೇಕ ಸರ್ಕಾರಿ ಕಟ್ಟಡಗಳಲ್ಲಿ ಚೌಧುರಿ ಅವರ ಕೊಡುಗೆ ಇದೆ. ಯುಗಗಳು ಕಳೆದರೂ ಅವರ ಕೃತಿಗಳು ಉಳಿಯುತ್ತವೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಹೇಳಿದರು.‘ಅವರು ಬಂಗಾಳ ಮತ್ತು ಭಾರತದ ಹೆಮ್ಮೆ’ ಎಂದು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ಸಂತಾಪ ಸೂಚಿಸಿದ್ದಾರೆ.261026-51-71741200
Read the complete story at Prajavani