ಅಕ್ರಮ ಸಿಮ್ ಕಾರ್ಡ್ ಮಾರಾಟ: ಕೋರ್ಟ್ ಕಳವಳ
ಬೆಂಗಳೂರು: ಅನುಮತಿಯಿಲ್ಲದೆ ಆಧಾರ ಕಾರ್ಡ್ ಸಂಖ್ಯೆ ಹಾಗೂ ಗ್ರಾಹಕರ ದಾಖಲೆಗಳನ್ನು ಬಳಸಿಕೊಂಡು ಅಕ್ರಮವಾಗಿ ಸಿಮ್ ಕಾರ್ಡ್ಗಳನ್ನು ಸಕ್ರಿಯಗೊಳಿಸಿ ಮಾರಾಟ ಮಾಡುವ ಜಾಲದ ಬಗ್ಗೆ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.‘ನನ್ನ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ನಗರದ ಅಬ್ಬಾರೆಡ್ಡಿ ಲೇ ಔಟ್ನ ಮಲ್ಲಿಕಾರ್ಜುನ ಬಿನ್ ಪರ್ವತ ರೆಡ್ಡಿ ಸಲ್ಲಿಸಿದ್
ಬೆಂಗಳೂರು: ಅನುಮತಿಯಿಲ್ಲದೆ ಆಧಾರ ಕಾರ್ಡ್ ಸಂಖ್ಯೆ ಹಾಗೂ ಗ್ರಾಹಕರ ದಾಖಲೆಗಳನ್ನು ಬಳಸಿಕೊಂಡು ಅಕ್ರಮವಾಗಿ ಸಿಮ್ ಕಾರ್ಡ್ಗಳನ್ನು ಸಕ್ರಿಯಗೊಳಿಸಿ ಮಾರಾಟ ಮಾಡುವ ಜಾಲದ ಬಗ್ಗೆ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.‘ನನ್ನ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ನಗರದ ಅಬ್ಬಾರೆಡ್ಡಿ ಲೇ ಔಟ್ನ ಮಲ್ಲಿಕಾರ್ಜುನ ಬಿನ್ ಪರ್ವತ ರೆಡ್ಡಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.‘ಈ ರೀತಿಯ ಪ್ರಕರಣಗಳ ತನಿಖೆ ನಡೆಸುವುದಕ್ಕಾಗಿ ಅಗತ್ಯ ಮಾರ್ಗಸೂಚಿ ರೂಪಿಸಿ’ ಎಂದು ಸೈಬರ್ ಕಮಾಂಡ್ ಪೊಲೀಸ್ ಮಹಾ ನಿರ್ದೇಶಕರಿಗೆ ಆದೇಶಿಸಿದೆ.ಅರ್ಜಿದಾರರು ಜಿಯೋ ಕಂಪನಿ ಉದ್ಯೋಗಿ. ಇವರು ಸಕ್ರಿಯಗೊಳಿಸಿದ 56 ಜಿಯೋ ಹಾಗೂ 20 ವೊಡಾಫೋನ್ ಕಂಪನಿಯ ಸಿಮ್ ಕಾರ್ಡ್ ಗಳನ್ನು ಅಕ್ರಮವಾಗಿ ಹೊಂದಿದ್ದ ಆರೋಪ ಎದುರಿಸುತ್ತಿದ್ದಾರೆ.ನ್ಯಾಯಪೀಠದ ನಿರ್ದೇಶನಗಳುಅಮಾಯಕರ ಹೆಸರಿನಲ್ಲಿ ನೋಂದಾಯಿಸಿರುವ ಸಿಮ್ ಕಾರ್ಡ್ಗಳ ದುರ್ಬಳಕೆ ತಡೆಯುವ ಸಂಬಂಧ ಪರಿಶೀಲನೆ ನಡೆಸಿ ಸಂಬಂಧಿಸಿದ ಪೊಲೀಸ್ ಪ್ರಾಧಿಕಾರಗಳ ಜೊತೆ ಸಮನ್ವಯ ಸಾಧಿಸಿ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು.ಅನಧಿಕೃತ ಸಿಮ್ ಕಾರ್ಡ್ ಮಾರಾಟದ ಹಿಂದಿರುವ ಜಾಲವನ್ನು ಪತ್ತೆ ಹಚ್ಚಲು ಸೈಬರ್ ಕಮಾಂಡ್ ಡಿಜಿಪಿ ತನಿಖಾ ವಿಧಾನಗಳನ್ನು ತೀವ್ರಗೊಳಿಸಬೇಕು.ಜಿಯೋ ಮತ್ತು ವೊಡಾಫೋನ್ ಸೇರಿದಂತೆ ಸಂಬಂಧಪಟ್ಟ ಮೊಬೈಲ್ ಸೇವಾ ಸಂಸ್ಥೆಗಳು ಸಿಮ್ ಕಾರ್ಡ್ಗಳ ವಿತರಣೆ ಮತ್ತು ಸಕ್ರಿಯಗೊಳಿಸುವಿಕೆಗೆ ಸಂಬಂಧಿಸಿದಂತೆ ಅನುಸರಿಸುತ್ತಿರುವ ಪ್ರಕ್ರಿಯೆಗಳನ್ನು ಪರಿಶೀಲಿಸಬೇಕು.ಸಕ್ರಿಯಗೊಳಿಸದ ಸಿಮ್ ಕಾರ್ಡ್ಗಳ ಸಂಗ್ರಹಣೆ, ಸಾಗಣೆ ಹಾಗೂ ಅವುಗಳನ್ನು ನಿರ್ವಹಿಸಲು ಅನುಮತಿ ಪಡೆದ ವ್ಯಕ್ತಿಗಳ ವಿವರಗಳನ್ನು ದಾಖಲಿಸುವ ವ್ಯವಸ್ಥೆಯನ್ನೂ ಪರಿಶೀಲಿಸಬೇಕು.ವಿತರಕರು ಮತ್ತು ಮಧ್ಯವರ್ತಿಗಳಿಗೆ ಪೂರೈಸಿದ ಸಿಮ್ ಕಾರ್ಡ್ಗಳ ಸಂಖ್ಯೆ, ಮಾರಾಟವಾದ, ಹಿಂದಿರುಗಿಸಲಾದ, ರದ್ದುಗೊಂಡ ಹಾಗೂ ಇನ್ನಿತರ ರೀತಿಯಲ್ಲಿ ವಿಲೇವಾರಿಯಾದ ಕಾರ್ಡ್ಗಳ ವಿವರಗಳ ಸಮನ್ವಯಗೊಳಿಸುವ ವ್ಯವಸ್ಥೆ ಇರುವುದನ್ನು ಮೊಬೈಲ್ ಸೇವಾ ಸಂಸ್ಥೆಗಳು ಪರಿಶೀಲಿಸಬೇಕು.ಗ್ರಾಹಕರಿಗೆ ತಿಳಿಯದಂತೆ ಅಥವಾ ಅವರ ಅನುಮತಿಯಿಲ್ಲದೆ ಗುರುತಿನ ದಾಖಲೆಗಳನ್ನು ಬಳಸಿಕೊಂಡು ಸಿಮ್ ಕಾರ್ಡ್ ಸಕ್ರಿಯಗೊಳಿಸುವುದನ್ನು ತಡೆಯಲು ಸೂಕ್ತ ಪರಿಶೀಲನಾ ಕ್ರಮಗಳನ್ನು ಜಾರಿಗೊಳಿಸಬೇಕು.261026-4-1642880895