ಓಪನ್ ಸೋರ್ಸ್ ಲೇಖನಗಳ ಹೆಸರಲ್ಲಿ ಗೂಢಚರ್ಯೆ: ಭಾರತದ ಸಂಶೋಧಕರ ಮೇಲೆ ಚೀನಾ ಗುರಿ!
ಬೇಹುಗಾರಿಕೆ ಆರೋಪದ ಮೇಲೆ ಸೇನಾ ಅಧಿಕಾರಿಯ ಪತ್ನಿಯೊಬ್ಬರ ವಿರುದ್ಧ ಜಮ್ಮು ಪೊಲೀಸರು ಇತ್ತೀಚೆಗೆ ಎಫ್ಐಆರ್ ದಾಖಲಿಸಿದ್ದಾರೆ. ಈ ಪ್ರಕರಣವು ಬೇಹುಗಾರಿಕೆ ಜಗತ್ತಿನ ಹೊಸ ಪ್ರವೃತ್ತಿಯೊಂದನ್ನು ತೆರೆದಿಟ್ಟಿದೆ. ಶತ್ರು ದೇಶಗಳ ಗುಪ್ತಚರ ಸಂಸ್ಥೆಗಳು ವಿದೇಶದ ನೆಲದಿಂದ ನೇರವಾಗಿ ಮಾಹಿತಿ ಸಂಗ್ರಹಿಸುವುದು ಕಷ್ಟ. ಹೀಗಾಗಿ, ಇಂತಹ ಕೆಲಸಕ್ಕೆ ಸಂಶೋಧನಾ ವೃತ್ತಿಪರರನ್ನು ಬಳಸಿಕೊ

ಬೇಹುಗಾರಿಕೆ ಆರೋಪದ ಮೇಲೆ ಸೇನಾ ಅಧಿಕಾರಿಯ ಪತ್ನಿಯೊಬ್ಬರ ವಿರುದ್ಧ ಜಮ್ಮು ಪೊಲೀಸರು ಇತ್ತೀಚೆಗೆ ಎಫ್ಐಆರ್ ದಾಖಲಿಸಿದ್ದಾರೆ. ಈ ಪ್ರಕರಣವು ಬೇಹುಗಾರಿಕೆ ಜಗತ್ತಿನ ಹೊಸ ಪ್ರವೃತ್ತಿಯೊಂದನ್ನು ತೆರೆದಿಟ್ಟಿದೆ. ಶತ್ರು ದೇಶಗಳ ಗುಪ್ತಚರ ಸಂಸ್ಥೆಗಳು ವಿದೇಶದ ನೆಲದಿಂದ ನೇರವಾಗಿ ಮಾಹಿತಿ ಸಂಗ್ರಹಿಸುವುದು ಕಷ್ಟ. ಹೀಗಾಗಿ, ಇಂತಹ ಕೆಲಸಕ್ಕೆ ಸಂಶೋಧನಾ ವೃತ್ತಿಪರರನ್ನು ಬಳಸಿಕೊಳ್ಳುತ್ತಿವೆ.ಜಮ್ಮು ಪ್ರಕರಣದಲ್ಲಿ ಅರುಣಾಚಲ ಪ್ರದೇಶದ ನಿರ್ಣಾಯಕ ಮೂಲಸೌಕರ್ಯಗಳು, ಗಡಿ ನಿಯಂತ್ರಣ ರೇಖೆ ಹಾಗೂ ಡ್ರೋನ್ ನಿಯೋಜನೆಗೆ ಸಂಬಂಧಿಸಿದ ಸಾಕಷ್ಟು ವರದಿಗಳು ಪತ್ತೆಯಾಗಿವೆ. ಪ್ರಾದೇಶಿಕ ಅಧ್ಯಯನ ಅಥವಾ ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಕೆಲಸ ಮಾಡುವ ಸಾಕಷ್ಟು ಸಂಶೋಧರಕರನ್ನು ಇದೇ ರೀತಿ ಸಂಪರ್ಕಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಸಂಶೋಧನೆಯ ಹೆಸರಲ್ಲಿ ಹೀಗೆ ವೃತ್ತಿಪರರನ್ನು ಸಂಪರ್ಕಿಸುವುದು ನ್ಯಾಯಸಮ್ಮತವೇ? ಎಂಬುದನ್ನು ಗುರುತಿಸುವುದು ಸವಾಲು ಎಂದೂ ಅವರು ಹೇಳಿದ್ದಾರೆ.ಸದ್ಯದ ಪ್ರಕರಣದಲ್ಲಿರುವ ಆರೋಪಿ ಮಹಿಳೆಯು ಯಾವುದೇ ಸಂಸ್ಥೆಯ ಜೊತೆ ಸಂಪರ್ಕ ಹೊಂದಿಲ್ಲದ ಸ್ವತಂತ್ರ ಸಂಶೋಧಕಿ. ಡಿಜಿಟಲ್ ಕಂಟೆಂಟ್ ಕ್ರಿಯೆಟರ್ ಎಂದು ಹೇಳಿಕೊಂಡ ವ್ಯಕ್ತಿಗಳು ಮಹಿಳೆಗೆ ಹಣ ನೀಡಿ, ಭೌಗೋಳಿಕ ರಾಜಕೀಯ, ಪರಿಸರ ಮತ್ತು ಸೇನೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಂಶೋಧನಾ ಲೇಖನಗಳನ್ನು ಬರೆಯಲು ಹಣ ನೀಡಿದ್ದರು ಎಂದು ತಿಳಿದುಬಂದಿದೆ.ಸೂಕ್ಷ್ಮ ಮಾಹಿತಿಗಳನ್ನು ವರ್ಗಾಯಿಸಲಾಗಿದೆಯೇ ಎಂಬುದು ಇಲ್ಲಿಯವರೆಗೆ ಸಾಬೀತಾಗಿಲ್ಲ. ತಾವು ಓಪನ್ ಸೋರ್ಸ್ ಆಧಾರದಲ್ಲಿ ಕೆಲಸ ಮಾಡಿರುವುದಾಗಿ ಮಹಿಳೆಯು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ. ಆರೋಪಗಳು ಸಾಬೀತಾಗುವವರೆಗೂ ಅವರು ನಿರಪರಾಧಿ. ಆದರೂ ಈ ಪ್ರಕರಣವು ಚೀನಾಕ್ಕೆ ಸಂಬಂಧಿಸಿದ್ದು ಎಂದು ಹೇಳುವ ಪ್ರಯತ್ನವನ್ನು ಭಾರತ ಮತ್ತು ವಿದೇಶಗಳ ಗುಪ್ತಚರ ಸಂಸ್ಥೆಗಳು ಮಾಡುತ್ತಿರುವಂತೆ ಕಾಣುತ್ತಿದೆ. ಇದು ಹನಿಟ್ರ್ಯಾಪ್ ಅಲ್ಲ; ಬದಲಾಗಿ, ಹಣ ನೀಡಿ ಲೇಖನ ಬರೆಸುವ ಹೊಸ ಮಾದರಿಯ ಗೂಢಚಾರಿಕೆ. ಜಮ್ಮುವಿನ ಈ ಪ್ರಕರಣದಲ್ಲಿ ಒಂದೇ ಒಂದು ಲೇಖನಕ್ಕೆ ₹ 17,000 ನೀಡಲಾಗಿತ್ತು ಎಂಬುದು ಬಹಿರಂಗವಾಗಿದೆ.ಬೇಹುಗಾರಿಕೆಯ ಈ ವಿಧಾನವು ಹಂತ ಹಂತವಾಗಿ ಬೆಳೆಯುತ್ತದೆ. ಮೊದಲು ಹವಾಮಾನ, ಜಲ ಅಥವಾ ಇಂಧನದಂತಹ ಸಾಮಾನ್ಯ ವಿಚಾರಗಳಿಂದ ಕೆಲಸ ಆರಂಭವಾಗುತ್ತದೆ. ಇವುಗಳಿಗೆ ಸಂಬಂಧಿಸಿದಂತೆ ವಿದೇಶಿ ಸಲಹಾ ಸಂಸ್ಥೆಯೊಂದು ಲಿಖಿತ ಪ್ರಶ್ನಾವಳಿ ಕಳುಹಿಸುತ್ತದೆ, ನಂತರ ದೂರವಾಣಿ ಸಂದರ್ಶನ ನಡೆಸುತ್ತದೆ. ವೃತ್ತಿಪರ ಸಂಸ್ಥೆಯಂತೆ ತೋರಿಸಿಕೊಳ್ಳುತ್ತದೆ. ನಂತರ, ನಿಧಾನವಾಗಿ ಮೂಲಸೌಕರ್ಯ ಹಾಗೂ ಗಡಿ ನಿರ್ವಹಣೆಯಂತಹ ಸೂಕ್ಷ್ಮ ವಿಚಾರಗಳ ಸಂಶೋಧನೆಗೆ ಆದ್ಯತೆ ನೀಡುತ್ತದೆ.ಚೀನಾದ ಗುಪ್ತಚರ ಅಧಿಕಾರಿಯೊಬ್ಬರು ಸ್ವತಂತ್ರ ಪತ್ರಕರ್ತ ರಾಜೀವ್ ಶರ್ಮಾ ಅವರನ್ನು 2016ರಲ್ಲಿ ಲಿಂಕ್ಡ್ಇನ್ ಮೂಲಕ ಸಂಪರ್ಕಿಸಿದ್ದರು ಎಂದು ದೆಹಲಿ ಪೊಲೀಸರು 2020ರಲ್ಲಿ ಆರೋಪಿಸಿದ್ದರು. ಅವರಿಗೆ ಹವಾಲಾ ಮತ್ತು ನಕಲಿ ಕಂಪನಿಗಳ ಹೆಸರಿನಲ್ಲಿ ಹಣ ಪಾವತಿಸಲಾಗುತ್ತಿತ್ತು ಎಂಬುದಾಗಿ ಜಾರಿ ನಿರ್ದೇಶನಾಲಯ ನಂತರ ದೂರಿತ್ತು.ಭಾರತ–ಚೀನಾ ಸೇನೆ ಮುಖಾಮುಖಿ: ವಿವರಣೆ ನೀಡಲು ಮೋದಿಗೆ ಕಾಂಗ್ರೆಸ್ ಆಗ್ರಹಪಾಕ್ ವಾಯುಪ್ರದೇಶ ನಿಷೇಧ: ಪರ್ಯಾಯ ಮಾರ್ಗಕ್ಕೆ ಚೀನಾ ಜೊತೆ ಭಾರತ ಮಾತುಕತೆಶರ್ಮಾ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಸ್ಥಾಪಿಸಿದ ದೆಹಲಿಯ ಚಿಂತಕರ ಚಾವಡಿ ‘ವಿವೇಕಾನಂದ ಇಂಟರ್ನ್ಯಾಷನಲ್ ಫೌಂಡೇಶನ್’ ಜೊತೆ ಸಂಬಂಧ ಹೊಂದಿದ್ದರು. ವಿದೇಶಿ ಶಕ್ತಿಗಳು ಈ ರೀತಿಯ ಚಟುವಟಿಕೆಗಳ ಮೂಲಕ ದೇಶದ ಕಾರ್ಯತಂತ್ರದ ಭಾಗವಾದ ಸಮುದಾಯದೊಳಗೆ ಹೇಗೆ ನುಸುಳುತ್ತವೆ ಎಂಬುದನ್ನು ಆ ಪ್ರಕರಣ ಎತ್ತಿತೋರಿಸಿತ್ತು.ಗೂಢಚಾರಿಕೆಯ ವಿಧಾನಗಳಲ್ಲಿ ಬದಲಾವಣೆಗಳು ಆಗುತ್ತಲೇ ಇವೆ. ಲೇಖನ ಬರೆಯಲು ಸ್ವಂತಂತ್ರ ಸಂಶೋಧಕರಿಗೆ ದೊಡ್ಡ ಮೊತ್ತದ ಗೌರವಧನ ನೀಡುವುದು ಅಂತಹ ಒಂದು ಮಾರ್ಗವಷ್ಟೇ.ಈ ಪ್ರಕರಣಗಳು ಎರಡು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಮೊದಲನೆಯದ್ದು, ಸಂಸ್ಥೆಗಳು ವ್ಯಕ್ತಿಗಳಿಗಿಂತ ದೊಡ್ಡವಾದರೂ, ಒಬ್ಬ ವ್ಯಕ್ತಿ ಅವ್ಯವಹಾರದಲ್ಲಿ ತೊಡಗಿದಾಗ ಇಡೀ ಸಂಸ್ಥೆಯೇ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಲೋಪ–ದೋಷಗಳ ಮೇಲೆ ನಿಗಾ ಇಡುವವರು ಯಾರು? ಎಂಬುದು. ಎರಡನೇಯದ್ದು, ಸ್ವತಂತ್ರ ಸಂಶೋಧಕರ ಕಥೆ ಏನು? ಅವರನ್ನು ತಲುಪಲು ಯಾವುದೇ ಭದ್ರತಾ ಅನುಮತಿಗಳು ಬೇಕಾಗುವುದಿಲ್ಲ. ಯಾವುದಾದರೂ ಸಂಸ್ಥೆಗೆ ವರದಿ ಮಾಡಬೇಕಾದ ಬಾಧ್ಯತೆಯೂ ಆ ಸಂಶೋಧಕರಿಗೆ ಇರುವುದಿಲ್ಲ. ಹೊರಗಿನಿಂದ ಬರುವ ಯಾವುದೇ ಆಫರ್ಗಳ ಬಗ್ಗೆ ಯಾರಿಗಾದರೂ ಹೇಳಬೇಕಾದ ಅನಿವಾರ್ಯವೂ ಇರದು. ಹೀಗಾಗಿ, ಅವರು ವಿದೇಶಿ ಶಕ್ತಿಗಳಿಗೆ ಸುಲಭ ಗುರಿ.ಭಾರತವಷ್ಟೇ ಅಲ್ಲ. ಬೇರೆ ದೇಶಗಳಿಗೂ ಇಂತಹ ಕಾರ್ಯಾಚರಣೆಯ ಆತಂಕವಿದೆ. ಚೀನಾದ ಸೇನಾ ಗುಪ್ತಚರ ಅಧಿಕಾರಿಗಳು LinkedIn, Indeed ಮತ್ತು Upworkನಲ್ಲಿ ಸಲಹೆಗಾರರಂತೆ ಗುರುತಿಸಿಕೊಂಡು ಸಂಪನ್ಮೂಲ ವ್ಯಕ್ತಿಗಳನ್ನು ಗುರಿಯಾಗಿಸುತ್ತಿದ್ದಾರೆ ಎಂಬ ಎಚ್ಚರಿಕೆಯನ್ನು ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್ಬಿಐ) ಮತ್ತು ಇಂಗ್ಲೆಂಡ್, ಆಸ್ಟ್ರೇಲಿಯಾ, ಕೆನಡಾ, ನ್ಯೂಜಿಲೆಂಡ್ನಲ್ಲಿರುವ ಎಫ್ಬಿಐನ ಸಹ ಸಂಸ್ಥೆಗಳು ಜೂನ್ನಲ್ಲಿ ಜಂಟಿಯಾಗಿ ನೀಡಿದ್ದವು.ಸಂಶೋಧಕರಿಗೆ ಸಾಮಾನ್ಯವಾಗಿ ಅಧಿಕಾರಿ ವರ್ಗದೊಂದಿಗೆ, ನೀತಿ ರೂಪಿಸುವವರೊಂದಿಗೆ ಸಂಪರ್ಕವಿರುತ್ತದೆ. ಹೀಗಾಗಿ ಸರ್ಕಾರಿ ಸಂಸ್ಥೆಗಳು, ಆಡಳಿತದ ಸುತ್ತಲೇ ಸಂಶೋಧನಾ ಲೇಖನಗಳನ್ನು ಬರೆಸುವುದರಿಂದ ಎರಡು ಉದ್ದೇಶಗಳು ಈಡೇರುತ್ತವೆ. ಮೊದಲನೆಯದ್ದು, ಚೀನಾ ಪರವಾದ ದೃಷ್ಟಿಕೋನವನ್ನು ಸಾರ್ವಜನಿಕ ಚರ್ಚೆಗೆ ಒಡ್ಡುವ ಮೂಲಕ, ಯಾವ ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತವೆ ಎಂದು ತಿಳಿಯುವುದು. ಎರಡನೇ ಉದ್ದೇಶವೇನೆಂದರೆ, ಲೇಖನವನ್ನು ಬರೆಯುವ ಸಂಶೋಧಕರ ಸಂಪರ್ಕ ಜಾಲ ಹೇಗಿದೆ? ಅವರಿಗೆ ಯಾರೆಲ್ಲ ಗೊತ್ತಿದ್ದಾರೆ? ಅವರ ಮೂಲಕ ಯಾರನ್ನೆಲ್ಲ ಸಂಪರ್ಕಿಸಬಹುದು ಎಂಬುದನ್ನು ತಿಳಿಯುವುದು. ಮೊದಲನೇ ಉದ್ದೇಶದ ಬಗ್ಗೆ, ಸ್ಟ್ಯಾನ್ಫೋರ್ಡ್ ವಿವಿಯ ಹೂವರ್ ಇನ್ಸ್ಟಿಟ್ಯೂಷನ್ನ ತಂಡ 2018ರಲ್ಲಿ ಹೇಳಿತ್ತು. ಚೀನಾದ ರಾಜತಾಂತ್ರಿಕರು ವಿವಿಧ ದೇಶಗಳ ಚಿಂತಕರ ಚಾವಡಿಗಳು ಏನು ಹೇಳುತ್ತವೆ ಎಂಬುದನ್ನು ತಿಳಿಯುವ ಪ್ರಯತ್ನವನ್ನು ನಿಯಮಿತವಾಗಿ ಮಾಡುತ್ತಾರೆ ಎಂದಿತ್ತು.ಚೀನಾದ ಈ ಯತ್ನವು ಕೇವಲ ಮಾಹಿತಿ ಸಂಗ್ರಹಣೆಗೆ ಸೀಮಿತ ಎಂದುಕೊಳ್ಳುವ ಹಾಗಿಲ್ಲ. ಚಿಂತಕರ ಚಾವಡಿಯ ಜಾಲವನ್ನು ಗುರುತಿಸುವುದೂ ಆಗಿದೆ. ಲೇಖನದಲ್ಲಿ ಉಲ್ಲೇಖವಾಗುವ ಹೆಸರುಗಳನ್ನು ಪಟ್ಟಿ ಮಾಡಿ, ಅವರ ವೃತ್ತಿಪರ ವಲಯವನ್ನು ಪತ್ತೆಮಾಡಬಹುದು. ಅದರಲ್ಲಿ, ಪ್ರಭಾವಿಗಳನ್ನು ಹೆಸರಿಸಿ, ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಅವರ ಉಪಸ್ಥಿತಿಯನ್ನು ಗುರುತಿಸಿ, ಸ್ನೇಹಪರ ಆಫರ್ಗಳ ಮೂಲಕ ಸುಲಭವಾಗಿ ಸಂಪರ್ಕಿಸುವುದು ಇದೆಲ್ಲದರ ಹಿಂದಿನ ಲೆಕ್ಕಾಚಾರ ಎನ್ನಲಾಗುತ್ತದೆ.ಭಾರತ-ಚೀನಾ ಉತ್ತಮ ಸಂಬಂಧಕ್ಕೆ ಗಡಿಯಲ್ಲಿ ಶಾಂತಿ ಅತ್ಯಗತ್ಯ: ಜಿನ್ಪಿಂಗ್ಗೆ ಮೋದಿಭಾರತ, ಚೀನಾ ಬಯಸಿದರೆ ಪಶ್ಚಿಮ ಏಷ್ಯಾ ಬಿಕ್ಕಟ್ಟು ಶಮನ: ಹಿಲರಿ ಕ್ಲಿಂಟನ್ಹೀಗಾಗಿ, ಸಂಶೋಧಕರು ಎಚ್ಚರಿಕೆ ವಹಿಸುವುದು ಅಗತ್ಯ. ತಾವು ಕೆಲಸ ಮಾಡುವ ಸಂಸ್ಥೆಯ ಒಡೆತನ ಯಾರದ್ದು? ಹಣ ನೀಡುವವರು ಯಾರು? ಅದರಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಸಂಸ್ಥೆಯ ಹಿನ್ನೆಲೆಯನ್ನು ತಿಳಿಯಬೇಕು. ಗೋಪ್ಯವಾಗಿ ಕೆಲಸ ಮಾಡುವಂತೆ, ಅದರ (ಕೆಲಸದ) ಬಗ್ಗೆ ಎಲ್ಲಿಯೂ ಮಾಹಿತಿ ಹಂಚಿಕೊಳ್ಳದಂತೆ ಅಥವಾ ಇನ್ನಿತರ ಅಸಹಜ ಕಟ್ಟುಪಾಡುಗಳನ್ನು ರೂಪಿಸಿದಾಗ ಅವುಗಳನ್ನು ಎಚ್ಚರಿಕೆಯ ಸಂಕೇತವೆಂದು ಪರಿಗಣಿಸಬೇಕು.ತನಿಖೆ, ವಿಚಾರಣೆಗಳು ಇದ್ದದ್ದೇ. ಆದರೆ, ಸಂಶೋಧಕರು ಅನುಮಾನಾಸ್ಪದ ಸಂಪರ್ಕಗಳ ಬಗ್ಗೆ ವರದಿ ಮಾಡಿದಾಗ ಅವರನ್ನು ಶಂಕಿತರಂತೆ ನಡೆಸಿಕೊಳ್ಳುವ ಬದಲು ಸುರಕ್ಷತೆಯ ಖಾತ್ರಿ ನೀಡುವ ಕಾರ್ಯವನ್ನು ಸರ್ಕಾರ ಮಾಡಬೇಕು. ಸುರಕ್ಷತೆಯ ಖಾತ್ರಿ ಇಲ್ಲವಾದರೆ, ಉಳಿದವರು ಇಂತಹ ವಿಚಾರಗಳನ್ನು ಬಚ್ಚಿಡುವ ಕೆಲಸ ಮಾಡಬಹುದು.ಮಾಹಿತಿ ಸಂಘರ್ಷದ ಈ ಯುಗದಲ್ಲಿ, ಈ ರೀತಿಯ ಸಂಶೋಧನಾ ವರದಿಗಳು ಶತ್ರು ರಾಷ್ಟ್ರಗಳಿಗೆ ಪ್ರಮುಖ ಗುಪ್ತಚರ ಮಾಹಿತಿಯಾಗುವ ಸಾಧ್ಯತೆ ಇದೆ. ಭಾರತದ ಚಿಂತಕರ ಚಾವಡಿ ವ್ಯವಸ್ಥೆಯಲ್ಲಿನ ಅಂತರವನ್ನು ಜಮ್ಮು ಪ್ರಕರಣವು ಬಹಿರಂಗಪಡಿಸಿದೆ. ಒಂಟಿಯಾಗಿ ಕೆಲಸ ಮಾಡುವ ಸ್ವತಂತ್ರ ಸಂಶೋಧಕರನ್ನು ತಲುಪುವುದು ವಿದೇಶಿ ಶಕ್ತಿಗಳಿಗೂ ಸುಲಭವಾಗುತ್ತದೆ.(ಬೆಂಗಳೂರಿನಲ್ಲಿರುವ ಸಮಕಾಲಿನ ವಿದ್ಯಮಾನಗಳ ಕುರಿತ ಸಂಶೋಧನಾ ಸಂಸ್ಥೆಯೊಂದರ ಸಂಶೋಧಕಿ. ಇಲ್ಲಿ ವ್ಯಕ್ತವಾಗಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ)