ಹುನಗುಂದ | ಪ್ರಯಾಣ ದರ ಹೆಚ್ಚಳ: ಪ್ರಯಾಣಿಕರ ಆಕ್ರೋಶ
ಹುನಗುಂದ: ಪಟ್ಟಣದಿಂದ ಬೆಂಗಳೂ ರಿಗೆ ಹೋಗುವ ಸಾಮಾನ್ಯ ಸಾರಿಗೆ ಬಸ್ ದರ ಏರಿಕೆಯಾಗಿದ್ದು, ಹೆಚ್ಚಿನ ದರ ನಿಗದಿ ಪಡಿಸಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.ಹುನಗುಂದದಿಂದ ಬೆಂಗಳೂರಿಗೆ ಹೋಗುವ ಸಾರಿಗೆಯ ಸಾಮನ್ಯ ಬಸ್ ದರ ₹ 640 ದರವಿದೆ. ಆದರೆ ದಸರಾ ಹಬ್ಬದ ಹಿನ್ನೆಲೆಯಲ್ಲಿ ಏಕಾಎಕಿ ಸಾಮನ್ಯ ಬಸ್ ದರವನ್ನು ವಿಶೇಷ ಬಸ್ ಹೆಸರಿನಲ್ಲಿ ₹ 840 ಏರಿಕೆ ಮಾಡಲಾಗಿದೆ.ಹ

ಹುನಗುಂದ: ಪಟ್ಟಣದಿಂದ ಬೆಂಗಳೂ ರಿಗೆ ಹೋಗುವ ಸಾಮಾನ್ಯ ಸಾರಿಗೆ ಬಸ್ ದರ ಏರಿಕೆಯಾಗಿದ್ದು, ಹೆಚ್ಚಿನ ದರ ನಿಗದಿ ಪಡಿಸಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.ಹುನಗುಂದದಿಂದ ಬೆಂಗಳೂರಿಗೆ ಹೋಗುವ ಸಾರಿಗೆಯ ಸಾಮನ್ಯ ಬಸ್ ದರ ₹ 640 ದರವಿದೆ. ಆದರೆ ದಸರಾ ಹಬ್ಬದ ಹಿನ್ನೆಲೆಯಲ್ಲಿ ಏಕಾಎಕಿ ಸಾಮನ್ಯ ಬಸ್ ದರವನ್ನು ವಿಶೇಷ ಬಸ್ ಹೆಸರಿನಲ್ಲಿ ₹ 840 ಏರಿಕೆ ಮಾಡಲಾಗಿದೆ.ಹಬ್ಬದ ನೆಪ ಮಾಡಿಕೊಂಡು ಒಂದು ಕಡೆ ಖಾಸಗಿ ಬಸ್ ದರ ಎರಡು ಮೂರು ಪಟ್ಟು ಹೆಚ್ಚಿಸಲಾಗಿದೆ. ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿವೆ. ಇದರೊಂದಿಗೆ ಆದರೆ ಇಂತಹ ಸಂದರ್ಭದಲ್ಲಿ ಸಾಮಾನ್ಯ ಜನರಿಗೆ ಆಸರೆಯಾಗ ಬೇಕಾದ ಸಾರಿಗೆ ಬಸ್ ದರ ಏರಿಕೆ ಮಾಡಿರುವುದು ಸಾರ್ವಜನಿಕರ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.ಬುಧವಾರ ಸಂಜೆ ಪಟ್ಟಣದಿಂದ ಎರಡು ಬಸ್ ಬೆಂಗಳೂರು ನಗರಕ್ಕೆ ಹೋಗುತ್ತಿವೆ.ಈಗಾಗಲೇ ಎರಡು ಬಸ್ ಗಳ ಟಿಕೆಟ್ ಸೋಲ್ಡ್ ಔಟ್ ಆಗಿವೆ. ಈಗ ವಿಶೇಷ ಬಸ್ ಟಿಕೆಟ್ ಸಹ ಸೋಲ್ಡ್ ಔಟ್ ಆಗಿದ್ದು , ಪ್ರಯಾಣಿಕರು ಪರದಾಡುವಂತಾಗಿದೆ.ಹಬ್ಬದ ನೆಪ ಮಾಡಿಕೊಂಡು ಖಾಸಗಿ ಮತ್ತು ಸಾರಿಗೆ ಬಸ್ ದರ ನಿರಂತರ ಏರಿಕೆ ಮಾಡುತ್ತಿರುವುದು ನಮ್ಮಂತಹ ಕೂಲಿ ಕಾರ್ಮಿಕರಿಗೆ ಹೊರೆಯಾಗುತ್ತಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹೆಚ್ಚಿನ ದರ ವಿಧಿಸುವುದಕ್ಕೆ ಕಡಿವಾಣ ಹಾಕಬೇಕು ಎಂದು ಪಟ್ಟಣದ ಬಸ್ ನಿಲ್ದಾಣದಲ್ಲಿ ಬೆಂಗಳೂರು ಹೋಗಲು ಬಸ್ ಗಾಗಿ ಕಾಯುತ್ತಿದ್ದ ಪ್ರಕಾಶ ಎಂಬ ಯುವಕ ನೋವು ತೋಡಿಕೊಂಡರು.ಆಲಂಪಾಷಾ, ಹುನಗುಂದ ಘಟಕ ವ್ಯವಸ್ಥಾಪಕಪ್ರಯಾಣದ ದರ ಶೇ 20 ರಷ್ಟು ಹೆಚ್ಚಿಗೆ ಮಾಡಿ ವಿಭಾಗೀಯ ಕಚೇರಿಯಿಂದ ಆದೇಶ ಹೋರಾಡಿಸಲಾಗಿದೆ. ಹೀಗಾಗಿ ವಿಶೇಷ ಬಸ್ ದರ ಹೆಚ್ಚಿಸಲಾಗಿದೆ. 261026-19-2015207730