ಜಪಾನ್ ಮಾಜಿ ಪ್ರಧಾನಿ, ಚೀನಾದ ‘ಹಳೆಯ ಗೆಳೆಯ’ ಯಸುವೊ ಫುಕುದಾ ನಿಧನ
ಟೊಕಿಯೊ: ಜಪಾನ್ ಮಾಜಿ ಪ್ರಧಾನಿ ಯಸುವೊ ಫುಕುದಾ ಅವರು ತಮ್ಮ 90ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ (ಎಲ್ಡಿಪಿ) ತಿಳಿಸಿದೆ.ಫುಕುದಾ ಅವರು ಅಕ್ಟೋಬರ್ 22ರಂದು ಮೃತಪಟ್ಟಿದ್ದಾರೆ ಎಂದು ಹೇಳಿದೆ.2007ರ ಸೆಪ್ಟೆಂಬರ್ನಿಂದ 2008ರ ಸೆಪ್ಟೆಂಬರ್ವರೆಗೆ ಪ್ರಧಾನಿಯಾಗಿದ್ದ ಫುಕುದಾ, ಚೀನಾ ಜೊತೆಗಿನ ಸಂಬಂಧ ಸುಧಾರಿಸಲು ಪ
ಟೊಕಿಯೊ: ಜಪಾನ್ ಮಾಜಿ ಪ್ರಧಾನಿ ಯಸುವೊ ಫುಕುದಾ ಅವರು ತಮ್ಮ 90ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ (ಎಲ್ಡಿಪಿ) ತಿಳಿಸಿದೆ.ಫುಕುದಾ ಅವರು ಅಕ್ಟೋಬರ್ 22ರಂದು ಮೃತಪಟ್ಟಿದ್ದಾರೆ ಎಂದು ಹೇಳಿದೆ.2007ರ ಸೆಪ್ಟೆಂಬರ್ನಿಂದ 2008ರ ಸೆಪ್ಟೆಂಬರ್ವರೆಗೆ ಪ್ರಧಾನಿಯಾಗಿದ್ದ ಫುಕುದಾ, ಚೀನಾ ಜೊತೆಗಿನ ಸಂಬಂಧ ಸುಧಾರಿಸಲು ಪ್ರಯತ್ನಿಸಿದ್ದರು.ಫುಕುದಾ ಆಹ್ವಾನದ ಮೇರೆಗೆ ಚೀನಾದ ಆಗಿನ ಅಧ್ಯಕ್ಷ ಹು ಜಿಂಟಾವೊ ಅವರು 2008ರ ಮೇ ತಿಂಗಳಲ್ಲಿ ಜಪಾನ್ಗೆ ಭೇಟಿ ನೀಡಿದ್ದರು. ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದ ಉಭಯ ನಾಯಕರು, ಸಾಮಾನ್ಯ ಕಾರ್ಯತಂತ್ರದ ಹಿತಾಸಕ್ತಿಗಳ ಆಧಾರದಲ್ಲಿ ಪರಸ್ಪರ ಲಾಭದಾಯಕ ಸಂಬಂಧ ಹೊಂದುವ ಬದ್ಧತೆಯನ್ನು ಪ್ರತಿಪಾದಿಸಿದ್ದರು.ದೇಶದಲ್ಲಿ ತಮ್ಮ ಜನಪ್ರಿಯತೆ ಕುಸಿಯುತ್ತಿರುವುದನ್ನು ಮನಗಂಡು 2008ರ ಸೆಪ್ಟೆಂಬರ್ನಲ್ಲಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಫುಕುದಾ, 2012ರಲ್ಲಿ ರಾಜಕೀಯ ನಿವೃತ್ತಿಯನ್ನೂ ಘೋಷಿಸಿದ್ದರು.ಆದಾಗ್ಯೂ, ದ್ವೀಪ ಸಮೂಹದ ವಿಚಾರವಾಗಿ ಉಭಯ ರಾಷ್ಟ್ರಗಳ ನಡುವೆ ವಿವಾದ ಉಂಟಾದಾಗ 2014ರಲ್ಲಿ ಸ್ವತಃ ಚೀನಾಗೆ ಭೇಟಿ ನೀಡಿ, ಅಧ್ಯಕ್ಷ ಷಿ ಜಿನ್ಪಿಂಗ್ ಜೊತೆ ಮಾತುಕತೆ ನಡೆಸಿದ್ದರು. ಇದು, ಶಿಂಜೊ ಅಬೆ ಅವರ ಎರಡನೇ ಅವಧಿಯ ಆಡಳಿತದ ವೇಳೆ ಷಿ ಜೊತೆ ದ್ವಿಪಕ್ಷೀಯ ಸಭೆಗೆ ದಾರಿ ಮಾಡಿಕೊಟ್ಟಿತ್ತು.‘ಹಳೆಯ ಗೆಳೆಯ’ ಎಂದ ಚೀನಾಫುಕುದಾ ಅವರನ್ನು ತನ್ನ ಹಳೆಯ ಗೆಳೆಯ ಎಂದು ಚೀನಾ ಸ್ಮರಿಸಿದೆ.‘ಯಸುವೊ ಫುಕುದಾ ಅವರು ಚೀನಾ ಜನರ ಹಳೇ ಸ್ನೇಹಿತರಾಗಿದ್ದರು. ಉಭಯ ರಾಷ್ಟ್ರಗಳ ಸಂಬಂಧ ಸುಧಾರಣೆ ಹಾಗೂ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಸಕಾರಾತ್ಮಕ ಕೊಡುಗೆಗಳನ್ನು ನೀಡಿದ್ದರು’ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ.China expressed deep condolences over the passing of former Japanese Prime Minister Yasuo Fukuda and offered sincere sympathies to his family, Chinese Foreign Ministry spokesperson Guo Jiakun said on Monday.Calling Fukuda "an old friend of the Chinese people," Guo said he had… pic.twitter.com/jFdKcCNSC8— CGTN (@CGTNOfficial) October 26, 2026