ಕಬ್ಬು ದರ ನಿಗದಿ ಹೋರಾಟ: ನಾವು ರೈತರ ಬೆನ್ನಿಗೆ ನಿಲ್ಲುತ್ತೇವೆ ಎಂದ ಡಿಕೆಶಿ
ಬೆಳಗಾವಿ: 'ಕಬ್ಬು ದರ ನಿಗದಿ ಹೋರಾಟ ಸುಖಾಂತ್ಯ ಹಂತಕ್ಕೆ ಬಂದಿದೆ. ದರ ನಿಗದಿಗೆ ಸಂಬಂಧಿಸಿ ಒಂದು ನಿರ್ಣಯಕ್ಕೆ ಬರಲು ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ರೈತರು ಎರಡು ದಿನಗಳ ಸಮಯಾವಕಾಶ ಕೇಳಿದ್ದಾರೆ' ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.ಇಲ್ಲಿ ಸೋಮವಾರ ಮಧ್ಯರಾತ್ರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ದರ ನಿಗದಿ ವಿಚಾರವಾಗಿ ರೈತರು ಹಾಗೂ ಸಕ್ಕರ

ಬೆಳಗಾವಿ: 'ಕಬ್ಬು ದರ ನಿಗದಿ ಹೋರಾಟ ಸುಖಾಂತ್ಯ ಹಂತಕ್ಕೆ ಬಂದಿದೆ. ದರ ನಿಗದಿಗೆ ಸಂಬಂಧಿಸಿ ಒಂದು ನಿರ್ಣಯಕ್ಕೆ ಬರಲು ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ರೈತರು ಎರಡು ದಿನಗಳ ಸಮಯಾವಕಾಶ ಕೇಳಿದ್ದಾರೆ' ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.ಇಲ್ಲಿ ಸೋಮವಾರ ಮಧ್ಯರಾತ್ರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ದರ ನಿಗದಿ ವಿಚಾರವಾಗಿ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಮಧ್ಯೆ ಮಾತುಕತೆಯಾಗಿದೆ. ನಿರ್ಣಯ ಪ್ರಕಟಿಸಲು ಎರಡು ದಿನಗಳ ಸಮಯ ಕೇಳಿದ್ದಾರೆ' ಎಂದರು.'ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ರೈತರು ಇಬ್ಬರೂ ಉಳಿಯಬೇಕು.ನಮಗೆ ಮೊದಲು ರೈತರು ಮುಖ್ಯ' ಎಂದು ತಿಳಿಸಿದರು.'ಸೋಮವಾರ ಬೆಳಿಗ್ಗೆ 11 ಗಂಟೆಯಿಂದ ಮಧ್ಯರಾತ್ರಿ 12.30ರವರೆಗೆ ಸಭೆ ಮಾಡಿದ್ದೇನೆ. ರಾಜ್ಯದ ವಿವಿಧೆಡೆಯಿಂದ ರೈತರು ಬಂದಿದ್ದಾರೆ. 9 ಮಂದಿ ಸಚಿವರು, 70 ಶಾಸಕರು ಸೇರಿಕೊಂಡು ಚರ್ಚಿಸಿದ್ದೇವೆ. ನಾವು ರೈತರ ಬೆನ್ನಿಗೆ ನಿಲ್ಲುತ್ತೇವೆ' ಎಂದರು.ಬೆಳಗಾವಿಯಲ್ಲೇ ವಾಸ್ತವ್ಯ ಹೂಡಿದ ಡಿಕೆಶಿಸಿ.ಎಂ ಡಿ.ಕೆ.ಶಿವಕುಮಾರ್ ಅವರು, ಸೋಮವಾರ ರಾತ್ರಿ ವಿಶೇಷ ವಿಮಾನದಲ್ಲಿ ಬೆಳಗಾವಿಯಿಂದ ಬೆಂಗಳೂರಿಗೆ ತೆರಳುವವರಿದ್ದರು. ಮಧ್ಯರಾತ್ರಿಯವರೆಗೆ ಸಭೆ ನಡೆದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲೇ ವಾಸ್ತವ್ಯ ಹೂಡಿದ್ದಾರೆ.ಮಂಗಳವಾರ ಬೆಳಿಗ್ಗೆ 8ಕ್ಕೆ ಬೆಂಗಳೂರಿಗೆ ತೆರಳುವರು.