ಬೆಂಗಳೂರು | ಪ್ರೇಯಸಿ ದೂರ: ಮನನೊಂದು ಸ್ಕೂಟರ್ಗೆ ಬೆಂಕಿ ಹಚ್ಚಿದ ಯುವಕ
ಬೆಂಗಳೂರು: ಪ್ರೀತಿಸುತ್ತಿದ್ದ ಯುವತಿ ದೂರವಾದಳು ಎಂಬ ಕಾರಣಕ್ಕೆ ಮನನೊಂದ ಯುವಕ, ಆಕೆಯ ಸಂಬಂಧಿಕರ ಮನೆ ಮುಂದಿದ್ದ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಕೋಣನಕುಂಟೆ ಠಾಣೆ ವ್ಯಾಪ್ತಿಯ ಬೀರೇಶ್ವರ ನಗರದಲ್ಲಿ ನಡೆದಿದೆ.ಘಟನೆ ಸಂಬಂಧ ಯುವತಿಯ ಸಂಬಂಧಿ ಸುನಿಲ್ ಅವರು ನೀಡಿದ ದೂರಿನ ಅನ್ವಯ ಎನ್ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಾಗಿದೆ.‘ಯುವತಿಯು ತ

ಬೆಂಗಳೂರು: ಪ್ರೀತಿಸುತ್ತಿದ್ದ ಯುವತಿ ದೂರವಾದಳು ಎಂಬ ಕಾರಣಕ್ಕೆ ಮನನೊಂದ ಯುವಕ, ಆಕೆಯ ಸಂಬಂಧಿಕರ ಮನೆ ಮುಂದಿದ್ದ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಕೋಣನಕುಂಟೆ ಠಾಣೆ ವ್ಯಾಪ್ತಿಯ ಬೀರೇಶ್ವರ ನಗರದಲ್ಲಿ ನಡೆದಿದೆ.ಘಟನೆ ಸಂಬಂಧ ಯುವತಿಯ ಸಂಬಂಧಿ ಸುನಿಲ್ ಅವರು ನೀಡಿದ ದೂರಿನ ಅನ್ವಯ ಎನ್ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಾಗಿದೆ.‘ಯುವತಿಯು ತನ್ನ ಸಂಬಂಧಿ ಸುನಿಲ್ ಮನೆಯಲ್ಲಿ ವಾಸವಿದ್ದಳು. ಯುವತಿ ಹಾಗೂ ನಂದನ್ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಆತನಿಂದ ಅಂತರ ಕಾಯ್ದುಕೊಂಡಿದ್ದಳು. ಆದರೂ ಆಕೆಯೊಂದಿಗೆ ಮಾತನಾಡುವ ಸಲುವಾಗಿ ಕರೆ ಮಾಡಲು ಪ್ರಯತ್ನಿಸುತ್ತಿದ್ದ. ಯುವತಿ ನಿರಾಕರಿಸಿದ್ದರಿಂದ ಬೇಸರಗೊಂಡಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ. ‘ನಂದನ್ ಆಕೆ ವಾಸವಿದ್ದ ಮನೆ ಬಳಿ ಬಂದು ಮಾತನಾಡಲು ಹೊರಗೆ ಬರುವಂತೆ ಗಲಾಟೆ ಮಾಡಿದ್ದ. ಈತನ ವರ್ತನೆಯಿಂದ ಭಯಗೊಂಡ ಮನೆಯವರು ಬಾಗಿಲು ತೆರೆದಿರಲಿಲ್ಲ. ಇದರಿಂದ ಆಕ್ರೋಶಗೊಂಡು ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟರ್ಗೆ ಬೆಂಕಿ ಹಚ್ಚಿದ್ದಾನೆ. ಈ ಕೃತ್ಯದಿಂದಾಗಿ ಸ್ಕೂಟರ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಅದರ ಪಕ್ಕದಲ್ಲೇ ನಿಲ್ಲಿಸಿದ್ದ ಮತ್ತೊಂದು ಸ್ಕೂಟರ್ಗೂ ಹಾನಿಯಾಗಿದೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಸದ್ಯ ಎನ್ಸಿಆರ್ ದಾಖಲಿಸಿಕೊಂಡು, ಮುಂದಿನ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.