ಗುಟ್ಕಾ ಜಿಗಿದು ಹೈ–ಟೆನ್ಷನ್ ಲೈನ್ಗೆ ಉಗಿದವನಿಗೆ ಎಲೆಕ್ಟ್ರಿಕ್ ಶಾಕ್; ನಿಧನ
ಭೋಪಾಲ್: ಮಧ್ಯಪ್ರದೇಶದ ವಿಧಿಶಾ ಜಿಲ್ಲೆಯ 65 ವರ್ಷದ ವ್ಯಕ್ತಿಯೊಬ್ಬ ಗುಟ್ಕಾ ಜಿಗಿದು ಹೈ–ಟೆನ್ಷನ್ ಲೈನ್ಗೆ ಉಗಿದಾಗ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮೃತ ವ್ಯಕ್ತಿಯನ್ನು ಪ್ರಭು ಲಾಲ್ ಗುಪ್ತಾ ಎಂದು ಗುರುತಿಸಲಾಗಿದೆ. ಅಕ್ಟೋಬರ್ 23ರಂದು ಘಟನೆ ನಡೆದಿದೆ.ಗುಪ್ತಾ ಅವರು ಗಂಜ್ ಬಸೊಡಾದ ಮೋತಿಯಾ ನಾಲಾ ಪರ್ ಬಸ್ತಿ ಎಂಬಲ್ಲ

ಭೋಪಾಲ್: ಮಧ್ಯಪ್ರದೇಶದ ವಿಧಿಶಾ ಜಿಲ್ಲೆಯ 65 ವರ್ಷದ ವ್ಯಕ್ತಿಯೊಬ್ಬ ಗುಟ್ಕಾ ಜಿಗಿದು ಹೈ–ಟೆನ್ಷನ್ ಲೈನ್ಗೆ ಉಗಿದಾಗ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮೃತ ವ್ಯಕ್ತಿಯನ್ನು ಪ್ರಭು ಲಾಲ್ ಗುಪ್ತಾ ಎಂದು ಗುರುತಿಸಲಾಗಿದೆ. ಅಕ್ಟೋಬರ್ 23ರಂದು ಘಟನೆ ನಡೆದಿದೆ.ಗುಪ್ತಾ ಅವರು ಗಂಜ್ ಬಸೊಡಾದ ಮೋತಿಯಾ ನಾಲಾ ಪರ್ ಬಸ್ತಿ ಎಂಬಲ್ಲಿರುವ ಕಟ್ಟಡದ ಮೂರನೇ ಮಹಡಿಯ ಮನೆಯಲ್ಲಿ ಕಪಾಟು ಸಿದ್ಧಪಡಿಸುತ್ತಿದ್ದರು. ಅದೇ ವೇಳೆ ಬಾಯಲ್ಲಿದ್ದ ಗುಟ್ಕಾವನ್ನು ಬಾಲ್ಕನಿ ಮೂಲಕ ಹೊರಗೆ ಉಗಿದಿದ್ದರು. ಅದು 11ಕೆವಿ ಸಾಮರ್ಥ್ಯದ ವಿದ್ಯುತ್ ತಂತಿಗೆ ತಗುಲಿ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ.ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವ ಮನೆ ಮಾಲೀಕ ಪದ್ಮಾ ಚಿಧರ್, ಹಲವು ವರ್ಷಗಳಿಂದ ಗುಪ್ತಾ ಅವರು ಅದೇ ಮನೆಯಲ್ಲಿ ಬಾಡಿಗೆಗೆ ಇದ್ದರು ಎಂದೂ ತಿಳಿಸಿದ್ದಾರೆ.ಪ್ರಕರಣ ಸಂಬಂಧ ಗಂಜ್ ಬಸೋಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹೈಟೆನ್ಷನ್ ಲೈನ್ ಸಮಸ್ಯೆಯ ಬಗ್ಗೆ ವಿದ್ಯುತ್ ನಿಗಮಕ್ಕೆ ಹಲವು ಬಾರಿ ದೂರು ನೀಡಲಾಗಿದೆ. ಹಲವು ಅವಘಡಗಳು ನಡೆದಿದ್ದರೂ ಸಮಸ್ಯೆ ಬಗೆಹರಿಸಿಲ್ಲ ಎಂದು ಸ್ಥಳೀಯ ಪಾಲಿಕೆಯ ಕೌನ್ಸಿಲರ್ ಮನೀಷ್ ವಿಶ್ವಕರ್ಮ ಹೇಳಿದ್ದಾರೆ.ಸಮಸ್ಯೆ ಬಗೆಹರಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.