ಗುರ್ಲಾಪುರದಲ್ಲಿ ಪ್ರತಿಭಟನೆ ಮುಂದುವರಿಯುತ್ತೆ: ಚೂನಪ್ಪ
ಬೆಳಗಾವಿ: 'ನಮ್ಮ ಹೋರಾಟ ಇನ್ನೂ ಮುಗಿದಿಲ್ಲ. ಕಬ್ಬಿಗೆ ದರ ನಿಗದಿಗೆ ಸಕ್ಕರೆ ಕಾರ್ಖಾನೆಯವರು ಎರಡು ದಿನ ಸಮಯ ಕೇಳಿದ್ದಾರೆ. ನಮ್ಮ ಬೇಡಿಕೆ ಈಡೇರುವವರೆಗೂ ಗುರ್ಲಾಪುರದಲ್ಲಿ ಪ್ರತಿಭಟನೆ ಮುಂದುವರೆಯುತ್ತದೆ' ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ ಹೇಳಿದರು.ಇಲ್ಲಿ ಸೋಮವಾರ ಮಧ್ಯರಾತ್ರಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, 'ಕಾರ್ಖಾನೆಯವರು ಪ್ರತ

ಬೆಳಗಾವಿ: 'ನಮ್ಮ ಹೋರಾಟ ಇನ್ನೂ ಮುಗಿದಿಲ್ಲ. ಕಬ್ಬಿಗೆ ದರ ನಿಗದಿಗೆ ಸಕ್ಕರೆ ಕಾರ್ಖಾನೆಯವರು ಎರಡು ದಿನ ಸಮಯ ಕೇಳಿದ್ದಾರೆ. ನಮ್ಮ ಬೇಡಿಕೆ ಈಡೇರುವವರೆಗೂ ಗುರ್ಲಾಪುರದಲ್ಲಿ ಪ್ರತಿಭಟನೆ ಮುಂದುವರೆಯುತ್ತದೆ' ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ ಹೇಳಿದರು.ಇಲ್ಲಿ ಸೋಮವಾರ ಮಧ್ಯರಾತ್ರಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, 'ಕಾರ್ಖಾನೆಯವರು ಪ್ರತಿ ಟನ್ ಕಬ್ಬಿಗೆ ₹3,500 ಕೊಡಲು ಒಪ್ಪಿದ್ದಾರೆ. ಆದರೆ, ನಾವು ಪ್ರತಿ ಕೆ.ಜಿ ಸಕ್ಕರೆಗೆ ₹50 ಕನಿಷ್ಠ ಮಾರಾಟ ಬೆಲೆ ನಿಗದಿಪಡಿಸಿ, ಟನ್ ಕಬ್ಬಿಗೆ ₹4 ಸಾವಿರ ನೀಡುವಂತೆ ಕೇಳಿದ್ದೇವೆ.ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು, ನಾಳೆಯೇ ಕಾರ್ಖಾನೆಗಳ ಮಾಲೀಕರ ಸಭೆ ಕರೆದು, ಸಕ್ಕರೆಗೆ ₹50 ಕನಿಷ್ಠ ಮಾರಾಟ ಬೆಲೆ ನಿಗದಿಪಡಿಸುತ್ತೇವೆ ಎಂದು ಹೇಳಲಿ' ಎಂದರು. 'ರಾಜ್ಯ ಸರ್ಕಾರದಿಂದ ಕೂಡ ಟನ್ ಕಬ್ಬಿಗೆ ₹1 ಸಾವಿರ ಪ್ರೋತ್ಸಾಹಧನ ಪಡೆಯುವವರೆಗೂ ನಾವು ಹೋರಾಟ ಬಿಡಲ್ಲ' ಎಂದೂ ತಿಳಿಸಿದರು
Read the complete story at Prajavani