ಭಾರತ ತಂಡದಲ್ಲಿ ದಿನಿಧಿ, ಸಿಂಡ್ರೆಲಾ
ನವದೆಹಲಿ: ಟೇಬಲ್ ಟೆನಿಸ್ ಯುವ ಆಟಗಾರ್ತಿ ಸಿಂಡ್ರೆಲಾ ದಾಸ್ ಮತ್ತು ಕರ್ನಾಟಕದ ಈಜುಪಟು ದಿನಿಧಿ ದೇಸಿಂಗು ಅವರು ಇದೇ 31ರಂದು ಸೆನೆಗಲ್ನಲ್ಲಿ ಪ್ರಾರಂಭವಾಗಲಿರುವ ‘ಬೇಸಿಗೆ ಯೂತ್ ಒಲಿಂಪಿಕ್ಸ್’ನಲ್ಲಿ ಭಾರತದ 17 ಮಂದಿಯ ತಂಡವನ್ನು ಮುನ್ನಡೆಸಲಿದ್ದಾರೆ.ಈ ಕ್ರೀಡಾಕೂಟವು ನವೆಂಬರ್ 13ರವರೆಗೆ ನಡೆಯಲಿದ್ದು, ಭಾರತ 11 ಕ್ರೀಡೆಗಳಲ್ಲಿ ಸ್ಪರ್ಧಿಸಲಿದೆ. 207 ದೇಶಗಳ ಸುಮಾರು

ನವದೆಹಲಿ: ಟೇಬಲ್ ಟೆನಿಸ್ ಯುವ ಆಟಗಾರ್ತಿ ಸಿಂಡ್ರೆಲಾ ದಾಸ್ ಮತ್ತು ಕರ್ನಾಟಕದ ಈಜುಪಟು ದಿನಿಧಿ ದೇಸಿಂಗು ಅವರು ಇದೇ 31ರಂದು ಸೆನೆಗಲ್ನಲ್ಲಿ ಪ್ರಾರಂಭವಾಗಲಿರುವ ‘ಬೇಸಿಗೆ ಯೂತ್ ಒಲಿಂಪಿಕ್ಸ್’ನಲ್ಲಿ ಭಾರತದ 17 ಮಂದಿಯ ತಂಡವನ್ನು ಮುನ್ನಡೆಸಲಿದ್ದಾರೆ.ಈ ಕ್ರೀಡಾಕೂಟವು ನವೆಂಬರ್ 13ರವರೆಗೆ ನಡೆಯಲಿದ್ದು, ಭಾರತ 11 ಕ್ರೀಡೆಗಳಲ್ಲಿ ಸ್ಪರ್ಧಿಸಲಿದೆ. 207 ದೇಶಗಳ ಸುಮಾರು 2,700 ಕ್ರೀಡಾಪಟುಗಳು 25 ಕ್ರೀಡಾ ವಿಭಾಗಗಳಲ್ಲಿ ಕಣಕ್ಕಿಳಿಯಲಿದ್ದಾರೆ.17 ವರ್ಷದ ಸಿಂಡ್ರೆಲಾ ಈಚೆಗೆ ಜಪಾನ್ನಲ್ಲಿ ನಡೆದ ಏಷ್ಯನ್ ಗೇಮ್ಸ್ನ ಮಹಿಳಾ ತಂಡ ಹಾಗೂ ಡಬಲ್ಸ್ ವಿಭಾಗಗಳಲ್ಲಿ ಸ್ಪರ್ಧಿಸಿದ್ದರು. ಅವರಿದ್ದ ಮಹಿಳಾ ತಂಡವು ಕ್ವಾರ್ಟರ್ ಫೈನಲ್ನಲ್ಲಿ ಹೊರಬಿತ್ತು. ಸಿಂಡ್ರೆಲಾ ಮತ್ತು ಶ್ರೀಜಾ ಅಕುಲಾ ಜೋಡಿ ಡಬಲ್ಸ್ನಲ್ಲಿ ಪ್ರಿ ಕ್ವಾರ್ಟರ್ ಫೈನಲ್ ತಲುಪಿತ್ತು.ಒಲಿಂಪಿಯನ್, 16 ವರ್ಷದ ದಿನಿಧಿ ಅವರು ಬ್ಯಾಂಕಾಕ್ನಲ್ಲಿ ಜುಲೈನಲ್ಲಿ ನಡೆದ 2026ರ ಏಷ್ಯನ್ ವಯೋವರ್ಗ ಈಜು ಚಾಂಪಿಯನ್ಷಿಪ್ನ 200 ಮೀಟರ್ ಫ್ರೀಸ್ಟೈಲ್ನಲ್ಲಿ ಚಿನ್ನದ ಪದಕ ಗೆದ್ದಿದ್ದಲ್ಲದೆ, ರಾಷ್ಟ್ರೀಯ ದಾಖಲೆಯನ್ನೂ ನಿರ್ಮಿಸಿದ್ದರು.ಯೂತ್ ಒಲಿಂಪಿಕ್ಸ್ ಯುವ ಪ್ರತಿಭೆಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅನುಭವ ಪಡೆಯಲು ಉತ್ತಮ ವೇದಿಕೆಯಾಗಿದೆ. ಕ್ರೀಡೆ ಮತ್ತು ಕೂಟದ ನಿಯಮಗಳಿಗೆ ಅನುಗುಣವಾಗಿ 15 ರಿಂದ 18 ವರ್ಷದ ಕ್ರೀಡಾಪಟುಗಳಿಗೆ ಮಾತ್ರ ಭಾಗವಹಿಸಲು ಅವಕಾಶ ಇರುತ್ತದೆ.‘ಈ ಕೂಟವು ನಮ್ಮ ಯುವ ಕ್ರೀಡಾಪಟುಗಳಿಗೆ ಪ್ರಮುಖ ಮೈಲಿಗಲ್ಲಾಗಿದೆ. 2032ರ ಬ್ರಿಸ್ಬೇನ್ ಒಲಿಂಪಿಕ್ಸ್ ಹಾಗೂ ಅದರಾಚೆಗೆ ಭಾರತವನ್ನು ಪ್ರತಿನಿಧಿಸುವ ಚಾಂಪಿಯನ್ನರು ಇವರಲ್ಲೇ ಇರಬಹುದು’ ಎಂದು ಭಾರತ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷೆ ಪಿ.ಟಿ. ಉಷಾ ಹೇಳಿದ್ದಾರೆ.ಭಾರತ ತಂಡ ಹೀಗಿದೆ: ದಿನಿಧಿ ದೇಸಿಂಗು (ಮಹಿಳೆಯರ 100 ಮೀ. ಫ್ರೀಸ್ಟೈಲ್, 200 ಮೀ. ಫ್ರೀಸ್ಟೈಲ್, 200 ಮೀ. ವೈಯಕ್ತಿಕ ಮೆಡ್ಲೆ), ಸಿಂಡ್ರೆಲಾ ದಾಸ್ (ಮಹಿಳೆಯರ ಟೇಬಲ್ ಟೆನಿಸ್ ಸಿಂಗಲ್ಸ್), ಅವಿನಾಶ್ ಶೌರ್ಯ (ಮಹಿಳೆಯರ 100 ಮೀ. ಹರ್ಡಲ್ಸ್), ಅಂತ್ರಾ (ಮಹಿಳೆಯರ ಬೀಚ್ ಕುಸ್ತಿ 65 ಕೆಜಿ), ಅನುಜ್ (ಪುರುಷರ ಬೀಚ್ ಕುಸ್ತಿ 70 ಕೆಜಿ), ಖುಷ್ಬು ರಜಾಕ್ (ಮಹಿಳೆಯರ ಜುಡೊ 63 ಕೆಜಿ), ಗುಂಜನ್ (ಮಹಿಳೆಯರ ಬಾಕ್ಸಿಂಗ್ 48 ಕೆಜಿ), ಗಾಥಾ ಖಾಡ್ಕೆ (ಮಹಿಳೆಯರ ವೈಯಕ್ತಿಕ ಆರ್ಚರಿ), ದೀಪಾಂಶು ಖೋಕರ್ (ಪುರುಷರ ಬೀಚ್ ಕುಸ್ತಿ 80 ಕೆಜಿ), ಲೈರೇನ್ಲಕ್ಪಮ ಅಂಬೇಕರ್ (ಪುರುಷರ ಬಾಕ್ಸಿಂಗ್ 50 ಕೆಜಿ), ಶ್ರೇಷ್ಠ ರಾಜು (ಪುರುಷರ ವೈಯಕ್ತಿಕ ಈಕ್ವೆಸ್ಟ್ರೀಯನ್ ಜಂಪಿಂಗ್), ಪ್ರಿಯಾಂಶಿ ಪಾಟೀಲ (ಮಹಿಳೆಯರ ವಿಂಡ್ಸರ್ಫಿಂಗ್), ತನ್ವಿ ಪತ್ರಿ (ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್), ತಿರ್ಹಾಂಕ್ ಪೆಗು (ಪುರುಷರ 100 ಮೀ. ಬಟರ್ಫ್ಲೈ, 200 ಮೀ. ಬಟರ್ಫ್ಲೈ), ರಾಜಕುಮಾರಿ ಲಾಂಚೆನ್ಬಿ ಚಾನು (ಮಹಿಳೆಯರ ಚಾಂಗ್ಕ್ವಾನ್ ಕಂಬೈನ್ಡ್), ರೂಪರೇಲಿಯಾ ದೇವ್ (ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್), ತಾನಿಯಾ (ಮಹಿಳೆಯರ ಬೀಚ್ ಕುಸ್ತಿ 75 ಕೆಜಿ).ಸಿಂಡ್ರೆಲಾ ದಾಸ್