ಶ್ರೀಲಂಕಾ ತಲುಪಿದ ಭಾರತೀಯ ನೌಕಾಪಡೆಯ ತರಬೇತಿ ದಳ
ಕೊಲಂಬೊ : ಮೂರು ದಿನಗಳ ಸದ್ಭಾವನಾ ಭೇಟಿಗಾಗಿ ಭಾರತೀಯ ನೌಕಾಪಡೆಯ ಮೊದಲ ತರಬೇತಿ ದಳ ಸೋಮವಾರ ಶ್ರೀಲಂಕಾಕ್ಕೆ ತಲುಪಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.ನೌಕಾಪಡೆಯ ಎರಡು ಯುದ್ಧ ನೌಕೆಗಳು ಮತ್ತು ಒಂದು ಕರಾವಳಿ ರಕ್ಷಣಾ ನೌಕೆ ದಳದಲ್ಲಿದ್ದು, ಭೇಟಿಯು ದ್ವಿಪಕ್ಷೀಯ ಕಡಲ ಸಹಕಾರ ಉತ್ತೇಜಿಸುವ ಗುರಿ ಹೊಂದಿದೆ.ದೂರ ವ್ಯಾಪ್ತಿಯ ತರಬೇತಿ ನಿಯೋಜನೆಯ ಭಾಗವಾಗಿ ಈ ಭೇಟಿ ನ

ಕೊಲಂಬೊ : ಮೂರು ದಿನಗಳ ಸದ್ಭಾವನಾ ಭೇಟಿಗಾಗಿ ಭಾರತೀಯ ನೌಕಾಪಡೆಯ ಮೊದಲ ತರಬೇತಿ ದಳ ಸೋಮವಾರ ಶ್ರೀಲಂಕಾಕ್ಕೆ ತಲುಪಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.ನೌಕಾಪಡೆಯ ಎರಡು ಯುದ್ಧ ನೌಕೆಗಳು ಮತ್ತು ಒಂದು ಕರಾವಳಿ ರಕ್ಷಣಾ ನೌಕೆ ದಳದಲ್ಲಿದ್ದು, ಭೇಟಿಯು ದ್ವಿಪಕ್ಷೀಯ ಕಡಲ ಸಹಕಾರ ಉತ್ತೇಜಿಸುವ ಗುರಿ ಹೊಂದಿದೆ.ದೂರ ವ್ಯಾಪ್ತಿಯ ತರಬೇತಿ ನಿಯೋಜನೆಯ ಭಾಗವಾಗಿ ಈ ಭೇಟಿ ನಡೆಯುತ್ತಿದೆ. ತನ್ನ ನೆಲೆಯಾದ ಕೊಚ್ಚಿಗೆ ಹಿಂತಿರುಗುವ ಮೊದಲು ಸೆಷೆಲ್ಸ್ನ ಪೋರ್ಟ್ ವಿಕ್ಟೋರಿಯಾ, ಮಾಲ್ದೀವ್ಸ್ನ ಮಾಲೆಗು ಭೇಟಿ ನೀಡಲಿದೆ.ಈ ದಳವು ಭಾರತೀಯ ನೌಕಾಪಡೆ, ಭಾರತೀಯ ಕರಾವಳಿ ರಕ್ಷಣಾ ಪಡೆ ಮತ್ತು ಸ್ನೇಹಪರ ವಿದೇಶಿ ನೌಕಾಪಡೆಗಳ ಟ್ರೈನಿ ಅಧಿಕಾರಿಗಳಿಗೆ ಆರಂಭಿಕ ಕಡಲ ತರಬೇತಿಯನ್ನು ನೀಡುತ್ತದೆ.
Read the complete story at Prajavani