ಇರಾನ್ನಲ್ಲಿ ಪಾಕ್, ಸೌದಿ, ಟರ್ಕಿ ಅಧಿಕಾರಿಗಳ ಸಭೆ
ಇಸ್ಲಮಾಬಾದ್: ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್, ಸೌದಿ ಅರೇಬಿಯಾದ ರಕ್ಷಣಾ ಸಚಿವ ಮತ್ತು ಟರ್ಕಿಯ ಗುಪ್ತಚರ ಇಲಾಖೆಯ ಮುಖಸ್ಥರು ಇರಾನ್ನ ಅಧಿಕಾರಿಗಳನ್ನು ಟೆಹರಾನ್ನಲ್ಲಿ ಸೋಮವಾರ ಭೇಟಿ ಮಾಡಲಿದ್ದಾರೆ. ಈ ಸಭೆ ನಡೆಯುವ ಸಂಗತಿಯನ್ನು ಕುರಿತು ಪಾಕಿಸ್ತಾನ, ಟರ್ಕಿ, ಸೌದಿ ಅರೇಬಿಯಾ ಮತ್ತು ಇರಾನ್ ದೇಶಗಳು ಪ್ರತ್ಯೇಕ ಹೇಳಿಕೆಗಳ ಮೂಲಕ ತಿಳಿಸಿವೆ. ಪಾ

ಇಸ್ಲಮಾಬಾದ್: ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್, ಸೌದಿ ಅರೇಬಿಯಾದ ರಕ್ಷಣಾ ಸಚಿವ ಮತ್ತು ಟರ್ಕಿಯ ಗುಪ್ತಚರ ಇಲಾಖೆಯ ಮುಖಸ್ಥರು ಇರಾನ್ನ ಅಧಿಕಾರಿಗಳನ್ನು ಟೆಹರಾನ್ನಲ್ಲಿ ಸೋಮವಾರ ಭೇಟಿ ಮಾಡಲಿದ್ದಾರೆ. ಈ ಸಭೆ ನಡೆಯುವ ಸಂಗತಿಯನ್ನು ಕುರಿತು ಪಾಕಿಸ್ತಾನ, ಟರ್ಕಿ, ಸೌದಿ ಅರೇಬಿಯಾ ಮತ್ತು ಇರಾನ್ ದೇಶಗಳು ಪ್ರತ್ಯೇಕ ಹೇಳಿಕೆಗಳ ಮೂಲಕ ತಿಳಿಸಿವೆ. ಪಾಕಿಸ್ತಾನ, ಸೌದಿ ಅರೇಬಿಯಾ ಮತ್ತು ಟರ್ಕಿ ದೇಶಗಳು ಇದೇ ಆಗಸ್ಟ್ನಲ್ಲಿ ‘ಮಕ್ಕಾ ಜಂಟಿ ರಕ್ಷಣಾ ಒಪ್ಪಂದ’ಕ್ಕೆ ಸಹಿ ಹಾಕಿವೆ. ‘ಈ ಮೂರೂ ದೇಶಗಳ ಪೈಕಿ ಯಾವ ದೇಶದ ಮೇಲೆ, ಯಾರೇ ದಾಳಿ ಮಾಡಿದರೂ ತಮ್ಮ ದೇಶದ ಮೇಲೆಯೇ ದಾಳಿ ನಡೆದಿದೆ ಎಂದು ಪರಿಗಣಿಸಲಾಗುವುದು’ ಎಂದು ಒಪ್ಪಂದದಲ್ಲಿ ಹೇಳಲಾಗಿದೆ. ಸೌದಿ ಅರೇಬಿಯಾದ ಮೇಲೆ ಯೆಮನ್ ಹೂಥಿ ಬಂಡುಕೋರರು ದಾಳಿ ಮುಂದುವರಿಸಿದ್ದಾರೆ. ‘ಸೌದಿ ವಿಮಾನ ನಿಲ್ದಾಣ, ತೈಲ ಘಟಕಗಳು ಮತ್ತು ಸೇನಾ ನೆಲೆಗಳ ಮೇಲೆ ನಾವೇ ದಾಳಿ ನಡೆಸಿದ್ದೇವೆ’ ಎಂದು ಇರಾನ್ ಬೆಂಬಲಿತ ಹೂಥಿ ಬಂಡುಕೋರರು ಹೇಳಿದ್ದಾರೆ. ಹೀಗಾಗಿ ಈ ಸಭೆಯು ಪ್ರಾಮುಖ್ಯ ಪಡೆದಿದೆ.ಇರಾನ್ ಮೇಲೆ ದಾಳಿ ನಡೆಸಲು ಅಮೆರಿಕ ಸಿದ್ಧತೆ ನಡೆಸುತ್ತಿರಬಹುದು ಎಂಬ ಸುದ್ದಿ ಹಬ್ಬುತ್ತಿರುವ ಈ ಹೊತ್ತಿನಲ್ಲಿ, ಪಾಕಿಸ್ತಾನ ಸೇನಾ ಮುಖ್ಯಸ್ಥ ಮುನೀರ್ ಅವರು ಒಂದೇ ವಾರದಲ್ಲಿ ಎರಡನೇ ಬಾರಿ ಇರಾನ್ಗೆ ಭೇಟಿ ನೀಡಿದ್ದಾರೆ.