SIR ಮುಕ್ತಾಯ | ಮತದಾರರ ಅಂತಿಮ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
ಬೆಂಗಳೂರು: ಚುನಾವಣಾ ಆಯೋಗದಿಂದ ನಡೆಸಿದ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಅಂತಿಮ ಪಟ್ಟಿಯನ್ನು ಮಂಗಳವಾರ ಪ್ರಕಟಿಸಲಾಗಿದೆ.ರಾಜ್ಯದಾದ್ಯಂತ 4,54,55,689 ಕೋಟಿ ಮತದಾರರ ಹೆಸರು ಅಂತಿಮ ಪಟ್ಟಿಯಲ್ಲಿ ಇರುವುದಾಗಿ ಚುನಾವಣೆ ಆಯೋಗ ತಿಳಿಸಿದೆ. ಈ ಪೈಕಿ 2,25,40,493 ಪುರುಷರು ಮತ್ತು 2,29,12,355 ಮಹಿಳಾ ಮತದಾರರು ಇದ್ದಾರ

ಬೆಂಗಳೂರು: ಚುನಾವಣಾ ಆಯೋಗದಿಂದ ನಡೆಸಿದ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಅಂತಿಮ ಪಟ್ಟಿಯನ್ನು ಮಂಗಳವಾರ ಪ್ರಕಟಿಸಲಾಗಿದೆ.ರಾಜ್ಯದಾದ್ಯಂತ 4,54,55,689 ಕೋಟಿ ಮತದಾರರ ಹೆಸರು ಅಂತಿಮ ಪಟ್ಟಿಯಲ್ಲಿ ಇರುವುದಾಗಿ ಚುನಾವಣೆ ಆಯೋಗ ತಿಳಿಸಿದೆ. ಈ ಪೈಕಿ 2,25,40,493 ಪುರುಷರು ಮತ್ತು 2,29,12,355 ಮಹಿಳಾ ಮತದಾರರು ಇದ್ದಾರೆ. 2,841 ಲಿಂಗತ್ವ ಅಲ್ಪಸಂಖ್ಯಾತರು ಇದ್ದಾರೆ.ಭಾರತೀಯ ಚುನಾವಣಾ ಆಯೋಗವು ರಾಜ್ಯದಲ್ಲಿ ಜೂನ್ 16ರಂದು ಎಸ್ಐಆರ್ಗೆ ಅಧಿಸೂಚನೆ ಹೊರಡಿಸಿತ್ತು. ಅವರೆಗೆ ಚಾಲ್ತಿಯಲ್ಲಿದ್ದ 2025ರ ಮತದಾರರ ಪಟ್ಟಿಯನ್ನು 'ಫ್ರೀಜ್' ಮಾಡಲಾಗಿತ್ತು. ಆಗ ರಾಜ್ಯದಲ್ಲಿ ಒಟ್ಟು 5.54 ಕೋಟಿ ಮತದಾರರು ಇದ್ದರು.ನಿರಂತರ ಪರಿಷ್ಕರಣೆಯ ಅವಧಿಯಲ್ಲಿ ಮತದಾರರ ಪಟ್ಟಿಯಿಂದ ತೆಗೆದು ಹಾಕಬೇಕಾಗಿರುವ ವಿವರ ಉಳಿದುಕೊಂಡಿದ್ದಲ್ಲಿ ಆ ಬಗ್ಗೆ ಆಯೋಗದ ನಿರ್ದೇಶನಗಳ ಅನ್ವಯ ಅಗತ್ಯ ಪೂರಕ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪಟ್ಟಿಯಲ್ಲಿರುವ ಯಾವುದೇ ಮತದಾರರ ಫೋಟೊ ಅಳವಡಿಸದಿದ್ದಲ್ಲಿ, ಫೋಟೊ ಅಸ್ಪಷ್ಟವಾಗಿದ್ದಲ್ಲಿ ಅಥವಾ ಚುನಾವಣಾ ಆಯೋಗವು ನಿಗದಿಪಡಿಸಿರುವ ಮಾನದಂಡಗಳಿಗೆ ಅನುಗುಣವಾಗಿ ಇಲ್ಲದಿದ್ದರೆ, ಇನ್ನಿತರ ದೋಷವಿರುವ ಫೋಟೊಗಳನ್ನು ಹಾಗೂ ಮತದಾರರ ಗುರುತಿನ ಚೀಟಿಯಲ್ಲಿರುವ ಯಾವುದೇ ವಿವರಗಳ ತಿದ್ದುಪಡಿಗಾಗಿ ಅಗತ್ಯ ಪೂರಕ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.ಯಾವುದೇ ಅರ್ಹ ಮತದಾರರು, ಯುವ ಮತದಾರರು ಪಟ್ಟಿಯಲ್ಲಿ ಹೆಸರು ಕೈಬಿಟ್ಟುಹೋಗದಂತೆ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಆಯೋಗ ಕೋರಿದೆ.ಪಟ್ಟಿ ಎಲ್ಲೆಲ್ಲಿ ಲಭ್ಯ?* ಇಆರ್ಒ/ ಎಇಆರ್ಒ ಕಚೇರಿಗಳು.* ಅಂತಿಮ ಮತದಾರರ ಪಟ್ಟಿಯನ್ನು ನೋಂದಾಯಿತ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ವಿತರಣೆ ಮಾಡಲಾಗುವುದು.ಮುಖ್ಯ ಚುನಾವಣಾಧಿಕಾರಿ ಅಧಿಕೃತ ಜಾಲತಾಣ https://ceo.karnataka.gov.in/ ನಲ್ಲಿಯೂ ಮತದಾರರ ಪಟ್ಟಿ ಲಭ್ಯವಿದೆ. https://ceo.karnataka.gov.in/ ಜಾಲತಾಣಕ್ಕೆ ಭೇಟಿ ನೀಡಿ, ಅಲ್ಲಿ ಎಪಿಕ್ ಕಾರ್ಡ್ (ಮತ ಚೀಟಿ) ನಂಬರ್ ಮತ್ತು ರಾಜ್ಯವನ್ನು ಆಯ್ಕೆ ಮಾಡಿದರೆ, ನಿಮ್ಮ ವಿವರ ತೆರೆದುಕೊಳ್ಳುತ್ತದೆ.https://voters.eci.gov.in/download-eroll?stateCode=S10 ಜಾಲತಾಣಕ್ಕೆ ಭೇಟಿ ನೀಡಿ ನಿಮ್ಮ ಮತಗಟ್ಟೆಯ ಸಂಪೂರ್ಣ ಮತದಾರರ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದುhttps://voters.eci.gov.in/home/track ಜಾಲತಾಣಕ್ಕೆ ಭೇಟಿ ಸೇರ್ಪಡೆ/ತಿದ್ದುಪಡಿಗಾಗಿ ಸಲ್ಲಿಸಿದ ಅರ್ಜಿ ಬಾಕಿ ಇದೆಯೇ ಅಥವಾ ಹೆಸರು ಕಾಣೆಯಾಗಿದೆಯೇ ಎಂಬುದನ್ನು ಪರಿಶೀಲಿಸಬಹುದುಹೆಸರು ಕಾಣೆಯಾಗಿದೆ ಅಥವಾ ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ನೀವು ಭಾವಿಸಿದರೆ, ನಮೂನೆ 6 ಅನ್ನು ಬಳಸಿಕೊಂಡು ಅರ್ಜಿ ಸಲ್ಲಿಸಬಹುದು. ತಿದ್ದುಪಡಿಗಳಿಗಾಗಿ ನಮೂನೆ 8 ಅನ್ನು ಬಳಸಬಹುದು.ರಾಜ್ಯದಲ್ಲಿ ಎಸ್ಐಆರ್ ಅಂತಿಮ ಪಟ್ಟಿ ಪ್ರಕಟ; 4.54 ಕೋಟಿ ಮತದಾರರು