ರಾಮಾಯಣವು ಜೀವನ ಮೌಲ್ಯಗಳ ಮಾರ್ಗದರ್ಶಿ - ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಹೆಚ್.ಟಿ.
ದಾವಣಗೆರೆ: ‘ರಾಮಾಯಣವು ಒಂದು ಗ್ರಂಥ ಮಾತ್ರವಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಜೀವನ ಮೌಲ್ಯಗಳ ಮಾರ್ಗದರ್ಶಿಯಾಗಿದೆ. ಸಮಾಜದಲ್ಲಿ ಅಂಚಿಗೆ ಸರಿದವರ ಧ್ವನಿಯಾಗಿ, ಅವರ ಬದುಕಿಗೆ ದಾರಿದೀಪವಾಗುವ ನಿಟ್ಟಿನಲ್ಲಿ ಮಹರ್ಷಿ ವಾಲ್ಮೀಕಿ ಅವರ ತತ್ವಗಳು ಸದಾ ಪ್ರಸ್ತುತ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಎಚ್.ಟಿ. ಅಭಿಪ್ರಾಯಪಟ್ಟರು.ಜಿ

ದಾವಣಗೆರೆ: ‘ರಾಮಾಯಣವು ಒಂದು ಗ್ರಂಥ ಮಾತ್ರವಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಜೀವನ ಮೌಲ್ಯಗಳ ಮಾರ್ಗದರ್ಶಿಯಾಗಿದೆ. ಸಮಾಜದಲ್ಲಿ ಅಂಚಿಗೆ ಸರಿದವರ ಧ್ವನಿಯಾಗಿ, ಅವರ ಬದುಕಿಗೆ ದಾರಿದೀಪವಾಗುವ ನಿಟ್ಟಿನಲ್ಲಿ ಮಹರ್ಷಿ ವಾಲ್ಮೀಕಿ ಅವರ ತತ್ವಗಳು ಸದಾ ಪ್ರಸ್ತುತ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಎಚ್.ಟಿ. ಅಭಿಪ್ರಾಯಪಟ್ಟರು.ಜಿಲ್ಲಾಡಳಿತ ಮತ್ತು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.‘ಮಹರ್ಷಿ ವಾಲ್ಮೀಕಿ ಅವರು ಮಹಾಕಾವ್ಯ ರಾಮಾಯಣದ ಮೂಲಕ ಸಮಾಜದಲ್ಲಿ ಸಮಾನತೆ, ನ್ಯಾಯ ಮತ್ತು ನೀತಿ ಎಂಬ ಮೌಲ್ಯಗಳನ್ನು ಮಾನವ ಕುಲಕ್ಕೆ ತಿಳಿಸಿಕೊಟ್ಟರು’ ಎಂದರು.‘ಚುನಾವಣಾ ನೀತಿ ಸಂಹಿತೆ ಇರುವ ಕಾರಣಕ್ಕೆ ಕಾರ್ಯಕ್ರಮವನ್ನು ಸರಳವಾಗಿ ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾ ಆಡಳಿತದ ವತಿಯಿಂದ ಈ ಜಯಂತಿಯನ್ನು ಮತ್ತಷ್ಟು ಅರ್ಥಪೂರ್ಣವಾಗಿ ಹಾಗೂ ಜನಪರ ಕಾಳಜಿಯೊಂದಿಗೆ ಆಚರಿಸಲಾಗುವುದು’ ಎಂದು ತಿಳಿಸಿದರು.‘ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳು ಎಲ್ಲರಿಗೂ ಮಾದರಿ. ರಾಮಾಯಣದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜಗತ್ತು ಮರೆಯಲಾರದಂತಹ ಮಹಾನ್ ಗ್ರಂಥ ರಾಮಾಯಣವನ್ನು ರಚಿಸಿದ ಮಹರ್ಷಿ ವಾಲ್ಮೀಕಿ ಅವರ ಹೆಸರು ಜಗತ್ತು ಇರುವವರೆಗೆ ಸದಾ ಸ್ಮರಣೀಯವಾಗಿರುತ್ತದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಅಭಿಪ್ರಾಯಪಟ್ಟರು.‘ರಾಮಾಯಣ ಮಹಾಗ್ರಂಥದಲ್ಲಿ ಕುಟುಂಬ ವ್ಯವಸ್ಥೆ ಮತ್ತು ಮಾನವೀಯ ಮೌಲ್ಯಗಳ ಕುರಿತಾದ ಅಮೂಲ್ಯ ಸಂದೇಶಗಳಿವೆ. ರಾಮ 14 ವರ್ಷಗಳ ವನವಾಸಕ್ಕೆ ತೆರಳುವಾಗ ಭರತನಿಗೆ ಆ ಸ್ಥಾನವನ್ನು ಬಿಟ್ಟುಕೊಟ್ಟರೂ, ಭರತನು ಆ ಸ್ಥಾನವನ್ನು ಸ್ವೀಕರಿಸದೆ ರಾಮನ ಪಾದುಕೆಗಳನ್ನಿಟ್ಟು ಆಡಳಿತ ನಡೆಸಿ ಅಣ್ಣನ ಮೇಲಿನ ನಿಷ್ಠೆಯನ್ನು ಮೆರೆದನು’ ಎಂದು ಹೇಳಿದರು.‘ಕಲಿಯುಗದಲ್ಲಿಯೂ ಇಂತಹ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ. ಮಹರ್ಷಿ ವಾಲ್ಮೀಕಿ ಅವರು ತೋರಿದ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕಿದೆ’ ಎಂದು ತಿಳಿಸಿದರು.ಸಮುದಾಯದ ಮುಖಂಡರಾದ ಹಾಲಪ್ಪ, ಅಣಜಿ ಅಂಜನಪ್ಪ, ಹುಚ್ಚವ್ವನಹಳ್ಳಿ ಮಂಜುನಾಥ, ದೇವರಾಜ, ಹನುಮಂತಪ್ಪ, ಹೇಮಣ್ಣ ಹಾಗೂ ಇತರರು ಉಪಸ್ಥಿತರಿದ್ದರು.ವಾಲ್ಮೀಕಿ ಜಯಂತಿ; ಪ್ರಬಂಧ ಸ್ಪರ್ಧೆನಗರದ ಮಾಗನೂರು ಬಸಪ್ಪ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಸೋಮವಾರ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ನಡೆಯಿತು. ಕಾಲೇಜಿನ ಪ್ರಾಚಾರ್ಯ ಎಸ್.ಪ್ರಸಾದ್ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಚೈತ್ರಾ ಡಿ., ಹರ್ಷಿತಾ ಕೆ., ನಿಮಿತಾ ಕೆ.ವಿ., ಸುಜನಾ ಜೆ.ಕೆ., ಉಪಪ್ರಾಚಾರ್ಯರಾದ ಸುರೇಖಾ ಜಗದೀಶ್, ಸಾಂಸ್ಕೃತಿಕ ವೇದಿಕೆಯ ಮುಖ್ಯಸ್ಥ ಯಶವಂತ ಕುಮಾರ್ ಜೆ.ಆರ್. ಉಪಸ್ಥಿತರಿದ್ದರು.ವಾಲ್ಮೀಕಿ ಜಯಂತಿ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.ಜಿಎಂ ವಿಶ್ವವಿದ್ಯಾಲಯದಲ್ಲಿ ವಾಲ್ಮೀಕಿ ಜಯಂತಿ ಆಚರಣೆನಗರದ ಜಿಎಂ ವಿಶ್ವವಿದ್ಯಾಲಯ ಹಾಗೂ ಜಿಎಂ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ವತಿಯಿಂದ ಯೂನಿವರ್ಸಿಟಿ ಭವನದಲ್ಲಿ ಸೋಮವಾರ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ನಡೆಯಿತು.ಜಿಎಂಯು ಕುಲಾಧಿಪತಿ ಜಿ.ಎಂ. ಲಿಂಗರಾಜು, ಕುಲಪತಿ ಎಸ್.ಆರ್. ಶಂಕಪಾಲ್, ಕುಲಸಚಿವ ಸುನಿಲ್ ಕುಮಾರ್ ಬಿ.ಎಸ್. ಅವರ ಮಾರ್ಗದರ್ಶನದಲ್ಲಿ ಆಡಳಿತ ಮಂಡಳಿಯ ಪ್ರತಿನಿಧಿ ವೈ.ಯು. ಸುಭಾಷ್ಚಂದ್ರ ನೇತೃತ್ವದಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಲಾಯಿತು.ಜಿ.ಎಂ. ಹಾಲಮ್ಮ ಪಿಯು ಕಾಲೇಜಿನ ಪ್ರಾಚಾರ್ಯ ಓಂಕಾರಪ್ಪ ಎಚ್.ಎಸ್., ಜಿಎಂಯು ಸಲಹೆಗಾರ ಜಿ. ರುದ್ರಯ್ಯ, ಮುಖ್ಯ ಗ್ರಂಥಪಾಲಕ ಶಶಿಕುಮಾರ್ ಆರ್., ಎನ್ಎಸ್ಎಸ್ ಅಧಿಕಾರಿ ಎಚ್.ಎಸ್. ಅಶೋಕ್ ಸೇರಿದಂತೆ ವಿವಿಧ ವಿಭಾಗಗಳ ಡೀನ್ಗಳು, ನಿರ್ದೇಶಕರು, ಸಂಸ್ಥೆಗಳ ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.261027-43-1350033295