ರಾಮಾಯಣ ಎಲ್ಲರಿಗೂ ದಾರಿ ದೀಪ: ಶಾಸಕ ಡಿ.ಜಿ. ಶಾಂತನಗೌಡ
ಹೊನ್ನಾಳಿ: ‘ಸುಂಕದಕಟ್ಟೆಯಲ್ಲಿರುವ ವಾಲ್ಮೀಕಿ ಭವನದ ಸುತ್ತ ಆವರಣ ಗೋಡೆ ನಿರ್ಮಿಸಲು ಸಮುದಾಯದ ಅಧ್ಯಕ್ಷರು, ಮುಖಂಡರು ಅನುದಾನ ಕೇಳಿದ್ದು, ಸರ್ಕಾರದ ಹಂತದಲ್ಲಿ ಪ್ರಯತ್ನ ಮಾಡುತ್ತೇನೆ’ ಎಂದು ಶಾಸಕ ಡಿ.ಜಿ. ಶಾಂತನಗೌಡ ಭರವಸೆ ನೀಡಿದರು.ಪಟ್ಟಣದ ಕನಕದಾಸ ರಂಗಮಂದಿರದಲ್ಲಿ ಸೋಮವಾರ ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ

ಹೊನ್ನಾಳಿ: ‘ಸುಂಕದಕಟ್ಟೆಯಲ್ಲಿರುವ ವಾಲ್ಮೀಕಿ ಭವನದ ಸುತ್ತ ಆವರಣ ಗೋಡೆ ನಿರ್ಮಿಸಲು ಸಮುದಾಯದ ಅಧ್ಯಕ್ಷರು, ಮುಖಂಡರು ಅನುದಾನ ಕೇಳಿದ್ದು, ಸರ್ಕಾರದ ಹಂತದಲ್ಲಿ ಪ್ರಯತ್ನ ಮಾಡುತ್ತೇನೆ’ ಎಂದು ಶಾಸಕ ಡಿ.ಜಿ. ಶಾಂತನಗೌಡ ಭರವಸೆ ನೀಡಿದರು.ಪಟ್ಟಣದ ಕನಕದಾಸ ರಂಗಮಂದಿರದಲ್ಲಿ ಸೋಮವಾರ ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಮಾತನಾಡಿದರು.‘ವಾಲ್ಮೀಕಿ ರಾಮಾಯಣ ನಮಗೆ ದಾರಿ ದೀಪವಾಗಿದ್ದು, ಅವರ 10 ಅಡಿ ಎತ್ತರದ ಪುತ್ಥಳಿ ನಿರ್ಮಾಣಕ್ಕೆ ಈಗಾಗಲೇ ಮುಂಗಡ ಅನುದಾನ ಕೊಡಲಾಗಿದೆ. ನಿರ್ಮಾಣ ಕೆಲಸ ಮುಗಿದ ಕೂಡಲೇ ಅದನ್ನು ದೇವನಾಯಕನಹಳ್ಳಿಯ ಒಂದು ಸರ್ಕಲ್ನಲ್ಲಿ ಸ್ಥಾಪಿಸುವ ಪ್ರಯತ್ನ ಮಾಡೋಣ’ ಎಂದು ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಚ್.ಬಿ. ಮಂಜಪ್ಪ ತಿಳಿಸಿದರು.ತಾಲ್ಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಎಂ.ಆರ್. ಹನುಮಂತಪ್ಪ, ‘ರಾಮಾಯಣವನ್ನು ಪ್ರತಿಯೊಬ್ಬರೂ ಓದಿ ತಿಳಿದುಕೊಳ್ಳಬೇಕು’ ಎಂದು ಹೇಳಿದರು.ದಾಗಿನಕಟ್ಟೆ ಸರ್ಕಾರಿ ಶಾಲೆಯ ಶಿಕ್ಷಕ ಎಂ.ಆರ್. ಹನುಮಂತಪ್ಪ ಉಪನ್ಯಾಸ ನೀಡಿದರು.ವಾಲ್ಮೀಕಿ ಸಮುದಾಯದ ಮುಖಂಡರಾದ ಕೋಣನತಲೆ ನಾಗಪ್ಪ, ಮಾರಿಕೊಪ್ಪ ತಿಮ್ಮಪ್ಪ, ಬೇಲಿಮಲ್ಲೂರು ಶಿವಾನಂದ್, ಚಂದ್ರಪ್ಪ, ಕುಳಗಟ್ಟೆ ರಂಗಪ್ಪ, ಬೆನಕನಹಳ್ಳಿ ವೀರಣ್ಣ ಪಟ್ಟಣಶೆಟ್ಟಿ, ಎಚ್.ಎ. ಗದ್ದಿಗೇಶ್, ಆರ್. ನಾಗಪ್ಪ, ಪಿಎಸ್ಐ ಗುರುಶಾಂತಯ್ಯ ಉಪಸ್ಥಿತರಿದ್ದರು. ಬಿಇಒ ಕೆ.ಟಿ. ನಿಂಗಪ್ಪ ವಂದಿಸಿ, ಸಮಾಜ ಕಲ್ಯಾಣ ಇಲಾಖೆಯ ಉಮಾ ಕಾರ್ಯಕ್ರಮ ನಡೆಸಿಕೊಟ್ಟರು.261027-43-714819916