ಉಡುಪಿ: ‘ನಡಿಗೆ’ ಅಭಿಯಾನ ಸಮಾರೋಪ, 20 ಸಾವಿರ ಪಾದರಕ್ಷೆ ಸಂಗ್ರಹ
ಉಡುಪಿ: ಮನೆಯಲ್ಲಿ ಬಳಸಿದ ಅಥವಾ ಬಳಕೆಯಾಗದ, ಉತ್ತಮ ಗುಣಮಟ್ಟದಲ್ಲಿರುವ ಪಾದರಕ್ಷೆಗಳನ್ನು ಹೊಸ ಪಾದರಕ್ಷೆಗಳಾಗಿ ಪರಿವರ್ತಿಸಿ ಬಡ ಮಕ್ಕಳಿಗೆ ಕೊಡುಗೆ ನೀಡುವ ಉದ್ದೇಶದಿಂದ 3 ದಿನ ಇಲ್ಲಿನ ಎಂ.ಜಿ.ಎಂ. ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ‘ನಡಿಗೆ’ ಸಾಮಾಜಿಕ ಅಭಿಯಾನ ಭಾನುವಾರ ಸಮಾರೋಪಗೊಂಡಿತು.ಅಭಿಯಾನದಲ್ಲಿ 20 ಸಾವಿರ ಜೋಡಿ ಪಾದರಕ್ಷೆಗಳನ್ನು ಸಂಗ್ರಹಿಸಲಾಯಿತು. ಸಮಾರ

ಉಡುಪಿ: ಮನೆಯಲ್ಲಿ ಬಳಸಿದ ಅಥವಾ ಬಳಕೆಯಾಗದ, ಉತ್ತಮ ಗುಣಮಟ್ಟದಲ್ಲಿರುವ ಪಾದರಕ್ಷೆಗಳನ್ನು ಹೊಸ ಪಾದರಕ್ಷೆಗಳಾಗಿ ಪರಿವರ್ತಿಸಿ ಬಡ ಮಕ್ಕಳಿಗೆ ಕೊಡುಗೆ ನೀಡುವ ಉದ್ದೇಶದಿಂದ 3 ದಿನ ಇಲ್ಲಿನ ಎಂ.ಜಿ.ಎಂ. ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ‘ನಡಿಗೆ’ ಸಾಮಾಜಿಕ ಅಭಿಯಾನ ಭಾನುವಾರ ಸಮಾರೋಪಗೊಂಡಿತು.ಅಭಿಯಾನದಲ್ಲಿ 20 ಸಾವಿರ ಜೋಡಿ ಪಾದರಕ್ಷೆಗಳನ್ನು ಸಂಗ್ರಹಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಪರಿಸರ ತಜ್ಞ ದಿನೇಶ್ ಹೊಳ್ಳ ಮಾತನಾಡಿದರು.ಮುಂಬೈ ಗ್ರೀನ್ಸೋಲ್ನ ಸಹ ಸಂಸ್ಥಾಪಕ ರಮೇಶ್ ಧಾಮಿ, ಸಿಎಸ್ಆರ್ ವಿಭಾಗದ ಮುಖ್ಯಸ್ಥೆ ವಿನಿತಾ ಫರ್ನಾಂಡಿಸ್, ಕಾರ್ಕಳ ಕ್ರಿಯೆಟಿವ್ ಎಜುಕೇಷನ್ ಫೌಂಡೇಶನ್ನ ಅಶ್ವತ್ಥ್ ಎಸ್.ಎಲ್., ಶ್ರೀಕೃಷ್ಣ ಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ಟ್ರಿಯ ಚೇರ್ಮನ್ ಸಂಪತ್ ಶೆಟ್ಟಿ, ಮಂಗಳೂರು ಸೇವ್ ಲೈಫ್ ಚಾರಿಟಬಲ್ ಟ್ರಸ್ಟ್ನ ಅರ್ಜುನ್ ಭಂಡಾರ್ಕರ್, ಕುಂದಾಪುರ ಸುಜ್ಞಾನ ಶಿಕ್ಷಣ ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿ, ಅಬಿಗೇಲ್ ಭಾಗವಹಿಸಿದ್ದರು.ಉಡುಪಿಯ ಶಾಲೆಯೊಂದರ 30 ಮಕ್ಕಳಿಗೆ ಮುಂಬೈ ಗ್ರೀನ್ಸೋಲ್ನಲ್ಲಿ ತಯಾರಿಸಲಾದ ಪಾದರಕ್ಷೆ, ಬ್ಯಾಗ್, ಮ್ಯಾಟ್ ವಿತರಿಸಲಾಯಿತು. ಕಾರ್ಯಕ್ರಮದ ಆಯೋಜಕ ಅವಿನಾಶ್ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಸುಜಿತ್ ಕೋಟ್ಯಾನ್ ನಿರೂಪಿಸಿದರು.261027-28-506303351