ಅಳ್ನಾವರ: ರಸ್ತೆ ಕಾಮಗಾರಿಯಲ್ಲಿ ಪೈಪ್ಲೈನ್ ಅಳವಡಿಸಲು ಆಗ್ರಹ
ಅಳ್ನಾವರ: ಪಟ್ಟಣದ ಕಡಬಗಟ್ಟಿ ಕ್ರಾಸ್ನಿಂದ ನೂತನ ತಾಲ್ಲೂಕು ಆಡಳಿತ ಕಚೇರಿವರೆಗೆ ನಿರ್ಮಿಸಲಾಗುತ್ತಿರುವ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿಯಲ್ಲಿ ಮಳೆನೀರು ಸರಾಗವಾಗಿ ಹರಿದು ಹೋಗಲು ರಸ್ತೆಯ ಎರಡೂ ಬದಿಗಳಲ್ಲಿ ಪೈಪ್ಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ಬಿಜೆಪಿ ಘಟಕ ವತಿಯಿಂದ ಸೋಮವಾರ ತಹಶೀಲ್ದಾರ್ಗೆಮನವಿ ಸಲ್ಲಿಸಲಾಯಿತು.ಪ್ರಸ್ತುತ ನಡೆಯುತ್ತಿರುವ ರಸ್ತೆ

ಅಳ್ನಾವರ: ಪಟ್ಟಣದ ಕಡಬಗಟ್ಟಿ ಕ್ರಾಸ್ನಿಂದ ನೂತನ ತಾಲ್ಲೂಕು ಆಡಳಿತ ಕಚೇರಿವರೆಗೆ ನಿರ್ಮಿಸಲಾಗುತ್ತಿರುವ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿಯಲ್ಲಿ ಮಳೆನೀರು ಸರಾಗವಾಗಿ ಹರಿದು ಹೋಗಲು ರಸ್ತೆಯ ಎರಡೂ ಬದಿಗಳಲ್ಲಿ ಪೈಪ್ಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ಬಿಜೆಪಿ ಘಟಕ ವತಿಯಿಂದ ಸೋಮವಾರ ತಹಶೀಲ್ದಾರ್ಗೆಮನವಿ ಸಲ್ಲಿಸಲಾಯಿತು.ಪ್ರಸ್ತುತ ನಡೆಯುತ್ತಿರುವ ರಸ್ತೆ ಕಾಮಗಾರಿಯಲ್ಲಿ ವೈಜ್ಞಾನಿಕವಾಗಿ ನೀರು ಹರಿದು ಹೋಗುವ ವ್ಯವಸ್ಥೆ ಕಲ್ಪಿಸಿಲ್ಲ. ಇದರಿಂದ ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದ ಮಳೆನೀರು ರಾಜ್ಯ ಹೆದ್ದಾರಿಗೆ ಹರಿದು ಬಂದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ರಸ್ತೆ ಕಾಮಗಾರಿಯಲ್ಲಿ ಸೂಕ್ತ ಒಳಚರಂಡಿ ವ್ಯವಸ್ಥೆ ಕಲ್ಪಿಸಿ, ರಸ್ತೆಯ ಎರಡೂ ಬದಿಗಳಲ್ಲಿ ಪೈಪ್ ಅಳವಡಿಸುವ ಮೂಲಕ ಸಮಸ್ಯೆ ಪರಿಹರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಮಂಡಳದ ಉಪಾಧ್ಯಕ್ಷ ಲಿಂಗರಾಜ ಮೂಲಿಮನಿ, ನಾರಾಯಣ ಮೋರೆ, ಅನಂತ ರವಳ್ಳಪ್ಪನವರ, ಲಖನ ಬರಗುಂಡಿ, ಶಿವಕುಮಾರ ವಡ್ಡರ, ಕಲ್ಮೇಶ ಚಚಡಿ, ಪರಶುರಾಮ ಪಾಲಕರ, ಸಚಿನ್ ಲಿಂಗನಮಠ, ಬಾಳು ದಡ್ಡಿ, ಪ್ರಭಾಕರ ಜಳಗೆಕರ, ದತ್ತಾ ನಿಟ್ಟೂರಕರ, ರಾಜು ಸಾವಂತ, ಶಾಹು ಶಿಂಧೆ, ಪರಶುರಾಮ ಕಾಕತಕರ, ಪ್ರವೀಣ ಪವಾರ ಇದ್ದರು.261027-24-963538143