ಕುಮಾರಿ ಎಲಿಮಿನೇಟ್ ಆಗಬೇಕಿತ್ತು: ಬಿಗ್ಬಾಸ್ ಮನೆಯಿಂದ ಹೊರಬಂದ ಲಕ್ಷ್ಮೀ ಮಾತು
ಅಗ್ನಿ ಪರೀಕ್ಷೆ ಮೂಲಕ ಬಿಗ್ಬಾಸ್ ಸೀಸನ್ 13ರ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಹೋಗಿದ್ದ ಲಕ್ಷ್ಮೀ ಗೌಡ ಅವರು ಎರಡೇ ವಾರದಲ್ಲಿ ಎಲಿಮಿನೇಟ್ ಆಗಿ ಮನೆಯಿಂದ ಹೊರಬಂದಿದ್ದಾರೆ. ಬಿಗ್ಬಾಸ್ ಮನೆಯಿಂದ ಹೊರಬಂದ ಬಳಿಕ ‘ಪ್ರಜಾವಾಣಿ ಸಂದರ್ಶನ’ದಲ್ಲಿ ಮಾತನಾಡಿರುವ ಲಕ್ಷ್ಮೀ ಅವರು, 15 ದಿನಗಳಷ್ಟೇ ಮನೆಯಲ್ಲಿದ್ದರೂ ಒಳ್ಳೆಯ ನೆನಪುಗಳನ್ನು ಹೊತ್ತು ತಂದಿದ್ದೇನೆ
ಅಗ್ನಿ ಪರೀಕ್ಷೆ ಮೂಲಕ ಬಿಗ್ಬಾಸ್ ಸೀಸನ್ 13ರ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಹೋಗಿದ್ದ ಲಕ್ಷ್ಮೀ ಗೌಡ ಅವರು ಎರಡೇ ವಾರದಲ್ಲಿ ಎಲಿಮಿನೇಟ್ ಆಗಿ ಮನೆಯಿಂದ ಹೊರಬಂದಿದ್ದಾರೆ. ಬಿಗ್ಬಾಸ್ ಮನೆಯಿಂದ ಹೊರಬಂದ ಬಳಿಕ ‘ಪ್ರಜಾವಾಣಿ ಸಂದರ್ಶನ’ದಲ್ಲಿ ಮಾತನಾಡಿರುವ ಲಕ್ಷ್ಮೀ ಅವರು, 15 ದಿನಗಳಷ್ಟೇ ಮನೆಯಲ್ಲಿದ್ದರೂ ಒಳ್ಳೆಯ ನೆನಪುಗಳನ್ನು ಹೊತ್ತು ತಂದಿದ್ದೇನೆ’ ಎಂದಿದ್ದಾರೆ.BBK 13: ಮನೆಯ ಸದಸ್ಯರಿಗೆ ‘ಖಾರ’ದ ಅನುಭವ ನೀಡಿದ ಕಿಚ್ಚ ಸುದೀಪ್!BBK 13: ಅವಾಚ್ಯ ಪದ ಬಳಸಿದ್ದ ಮಂಜುನಾಥ್ ಬಿಗ್ ಬಾಸ್ ಮನೆಯಿಂದ ಔಟ್!ಬಿಗ್ಬಾಸ್ ಅನುಭವ, ಅಲ್ಲಿ ಕಳೆದ ಕ್ಷಣಗಳ ಬಗ್ಗೆ ಲಕ್ಷ್ಮೀ ಹಂಚಿಕೊಂಡಿದ್ದು ಹೀಗೆ...‘ವೈಲ್ಡ್ ಕಾರ್ಡ್ ಮೂಲಕ ಹೋದಾಗ ಯಾರೂ ಸೇರಿಸಿಕೊಳ್ಳಲು ತಯಾರಿರಲಿಲ್ಲ. ಟಾಸ್ಕ್ಗಳಿಂದ ಹೊರಗಿಟ್ಟಿದ್ದರು. ಈ ವೇಳೆ ನನ್ನ ಪರವಾಗಿ ನಿಂತು, ಟಾಸ್ಕ್ ಆಡಿ ನನ್ನನ್ನು ನಾನು ಸಾಬೀತು ಮಾಡಿಕೊಂಡೆ. ಅಲ್ಲಿದ್ದವರು, ಸುಖಾ ಸುಮ್ಮನೆ ಜಗಳವಾಡುವುದೇ ಹೆಚ್ಚು. ಬಿಗ್ಬಾಸ್ ಮನೆಯಲ್ಲಿ ತಮಾಷೆಯ ವಾತಾವರಣ ನಿರ್ಮಾಣ ಮಾಡಲು ಪ್ರಯತ್ನಿಸಿದ್ದೇನೆ. ಆದರೆ, ಎಡಿಟ್ ಆಗಿ ಸಂಚಿಕೆಯಲ್ಲಿ ನನ್ನನ್ನು ಹೇಗೆ ತೋರಿಸಿದ್ದಾರೋ ಗೊತ್ತಿಲ್ಲ. ನಾನು ಹೇಗಿದ್ದೆ, ಎಷ್ಟು ಮನರಂಜನೆ ನೀಡಿದ್ದೇನೆ ಎನ್ನುವುದು ನೇರ ಪ್ರಸಾರ ನೋಡಿದರೆ ಗೊತ್ತಾಗುತ್ತದೆ. ಫುಟೇಜ್ಗೋಸ್ಕರ ಕಿರುಚಾಡುವುದು ನನ್ನ ಗುಣವಲ್ಲ. ಎಲ್ಲರೊಂದಿಗೂ ಬೆರೆತು ಅಲ್ಲಿದ್ದೆ. ಹೀಗಾಗಿಯೇ ಅಲ್ಲಿದ್ದ ಇತರ ಸ್ಪರ್ಧಿಗಳು ನನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಜನರಿಗೆ ಮನರಂಜನೆ ನೀಡುವವರನ್ನು ಇಟ್ಟುಕೊಳ್ಳಬೇಕಿತ್ತು. ಅಲ್ಲಿದ್ದ ಶೇ 80ರಷ್ಟು ಜನ ಟಾಸ್ಕ್ ಬಗ್ಗೆಯೇ ಯೋಚನೆ ಮಾಡುತ್ತಾರೆ. ಚಿಕ್ಕ ವಿಷಯಗಳಿಗೂ ಕಿರುಚಾಡುವವರೇ ಇದ್ದಾರೆ.ಕುಮಾರಿ ಈಗ ನನ್ನ ಜಾಗದಲ್ಲಿ ಇರಬೇಕಿತ್ತುನಾನು ಕುಮಾರಿ ಒಟ್ಟಿಗೆ ಬಿಗ್ಬಾಸ್ ಮನೆ ಪ್ರವೇಶ ಮಾಡಿದ್ದೆವು. ಅಲ್ಲಿ ಇದ್ದ ರೀತಿಯನ್ನು ನೋಡಿದರೆ ಈಗ ಎಲಿಮಿನೇಟ್ ಆಗಿ ನನ್ನ ಜಾಗದಲ್ಲಿ ಇರಬೇಕಾಗಿದ್ದು ಕುಮಾರಿ ಅವರು. ಟಾಸ್ಕ್, ಮನರಂಜನೆ ವಿಚಾರದಲ್ಲಿ ಎಲ್ಲವನ್ನೂ ಮಾಡಿದ್ದೇನೆ. ‘ಲಕ್ಷ್ಮೀ ಎಲ್ಲರೊಂದಿಗೆ ಬೆರೆಯುತ್ತಾರೆ, ನೀವು ಯಾಕೆ ಜಗದೀಶ್ ಮತ್ತು ಕಿರಣ್ ಜತೆ ಮಾತ್ರ ಇರುತ್ತೀರಿ’ ಎಂದು ಮನೆಯವರೇ ಕೇಳುತ್ತಾರೆ. ಹೀಗಾಗಿ ಕುಮಾರಿ ಎಲ್ಲರೊಂದಿಗೂ ಬೆರೆಯುತ್ತಿಲ್ಲ ಎನ್ನುವುದು ಇದರಿಂದಲೇ ತಿಳಿಯುತ್ತದೆ. ಬಿಗ್ಬಾಸ್ ಮನೆಗೆ ಹೋಗಿರುವುದು ಕುಟುಂಬವನ್ನು ಕಟ್ಟುವುದಕ್ಕಲ್ಲ, ಅದು ನನಗೂ ಗೊತ್ತು. ಆದರೆ ಒಂದು ಮನೆಯಲ್ಲಿ 24 ಗಂಟೆ ಇರುತ್ತೀರಿ ಎಂದರೆ ಅಲ್ಲಿದ್ದ ಜನ ಹೇಗೆ ಎನ್ನುವುದನ್ನು ತಿಳಿದುಕೊಳ್ಳಬಹುದು. ಆಟವನ್ನು ಒಬ್ಬರೇ ಆಡಬಹುದು. ಆದರೆ, ಯಾವಾಗಲೂ ಒಬ್ಬರೇ ಇರಲು ಸಾಧ್ಯವಿಲ್ಲ. ಕುಮಾರಿ ಯಾವಾಗಲೂ ಅವಳ ಪರವಾಗಿ ನಿಲ್ಲಲೇ ಇಲ್ಲ. ಹೀಗಾಗಿ ಕುಮಾರಿ ಎಲಿಮಿನೇಟ್ ಆಗಬೇಕಿತ್ತು. ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಲಕ್ಷ್ಮಿ ಗೌಡ ಭಾವುಕ ಪೋಸ್ಟ್ಅಗ್ನಿಪರೀಕ್ಷೆಯಲ್ಲಿಯೂ ಕುಮಾರಿ ಅವರು ಕೊನೆಯ ಸುತ್ತಿನವರೆಗೆ ಬಂದಿಲ್ಲ, ಯಾವುದೇ ಕಷ್ಟದ ಟಾಸ್ಕ್ಗಳನ್ನು ಆಡಿಲ್ಲ. ಎಲ್ಲವೂ ಸುಲಭವಾಗಿಯೇ ಸಿಕ್ಕಿದೆ. ಕುಮಾರಿ ಸಹಾನುಭೂತಿ ಮತ್ತು ಮುಗ್ಧೆಯಾಗಿ ಕಾಣಿಸಿಕೊಂಡ ಕಾರಣ ಬಿಗ್ಬಾಸ್ ಮನೆಗೆ ಹೋಗಿದ್ದಾರೆ. ಅವರು ಈ ಕಾರ್ಯಕ್ರಮಕ್ಕೆ ಅರ್ಹರಾದವರೇ ಅಲ್ಲ. ಆದರೆ ಇನ್ನು ಯಾಕೆ ಮನೆಯಲ್ಲಿ ಇಟ್ಟುಕೊಂಡಿದ್ದಾರೆ ಎನ್ನುವುದು ನನಗೆ ಕಾಡುತ್ತಿದೆ. ಬಿಗ್ಬಾಸ್ ಮನೆಯಿಂದ ಹೊರಬಂದ ಮೇಲೆ ಸಂದರ್ಶನಗಳಲ್ಲಿ ಆಸಿಯಾ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿದರೆ ಕೆಟ್ಟದಾಗಿ ಟ್ರೋಲ್ ಮಾಡುತ್ತೇವೆ ಎಂದು ಆಸಿಯಾ ಅಭಿಮಾನಿಗಳು ಮೆಸೇಜ್ ಮಾಡಿದ್ದಾರೆ. ಅದನ್ನು ಈಗ ನೋಡಿದೆ. ಅವರು ಹಾಗೆ ಮಾಡಿದರೆ ನೆಚ್ಚಿನ ಸ್ಪರ್ಧಿಯ ಹೆಸರನ್ನು ಹಾಳುಮಾಡುತ್ತಾರೆ ಅಷ್ಟೇ, ನನಗೇನು ಆಗುವುದಿಲ್ಲ.ಚಿಕ್ಕಂದಿನಿಂದಲೇ ಬಿಗ್ಬಾಸ್ಗೆ ಹೋಗಬೇಕು ಎನ್ನುವ ಆಸೆಯಿತ್ತು. ಅದಕ್ಕೆ ಸೆಲೆಬ್ರಿಟಿಯಾಗಿ ಗುರುತಿಸಿಕೊಳ್ಳಬೇಕು ಎಂದು ಪ್ರಯತ್ನಿಸುತ್ತಿದ್ದೆ. ಅದೇ ಸಮಯಕ್ಕೆ ಸಿಕ್ಕಿದ್ದು, ಅಗ್ನಿಪರೀಕ್ಷೆ. ಇನ್ನು ಮುಂದೆ ಒಳ್ಳೆಯ ಅವಕಾಶ ಬಂದರೆ, ಮನರಂಜನಾ ಕ್ಷೇತ್ರದಲ್ಲೇ ಮುಂದುವರಿಯುವೆ. ಧಾರಾವಾಹಿಗಳಲ್ಲಿ ನಟಿಸುವ ಬಗ್ಗೆ ಹೆಚ್ಚು ಒಲವಿದೆ’ ಎಂದು ಹೇಳಿದ್ದಾರೆ.