ತಮಿಳುನಾಡು ಜೈಲಿನಿಂದ 17 ಕೈದಿಗಳ ಪರಾರಿ: 30 ವರ್ಷಗಳಲ್ಲೇ ದೊಡ್ಡ ಪ್ರಕರಣ
ಚೆನ್ನೈ: ತಮಿಳುನಾಡಿನ ಥೇನಿ ಜಿಲ್ಲೆಯ ತೆಕ್ಕಂಪಟ್ಟಿ ಉಪಕಾರಾಗೃಹದಿಂದ 17 ವಿಚಾರಣಾಧೀನ ಕೈದಿಗಳು ಸೋಮವಾರ ರಾತ್ರಿ ಪರಾರಿಯಾಗಿದ್ದಾರೆ. ಕೈದಿಯೊಬ್ಬರಿಗೆ ಅಪಸ್ಮಾರ ಬಂದಿದೆ ಎಂದು ಸುಳ್ಳು ಮಾಹಿತಿ ನೀಡಿ, ಕೋಣೆಗೆ ಬಂದ ಜೈಲು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ತಮಿಳುನಾಡು CM ವಿಜಯ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: DMK ನ

ಚೆನ್ನೈ: ತಮಿಳುನಾಡಿನ ಥೇನಿ ಜಿಲ್ಲೆಯ ತೆಕ್ಕಂಪಟ್ಟಿ ಉಪಕಾರಾಗೃಹದಿಂದ 17 ವಿಚಾರಣಾಧೀನ ಕೈದಿಗಳು ಸೋಮವಾರ ರಾತ್ರಿ ಪರಾರಿಯಾಗಿದ್ದಾರೆ. ಕೈದಿಯೊಬ್ಬರಿಗೆ ಅಪಸ್ಮಾರ ಬಂದಿದೆ ಎಂದು ಸುಳ್ಳು ಮಾಹಿತಿ ನೀಡಿ, ಕೋಣೆಗೆ ಬಂದ ಜೈಲು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ತಮಿಳುನಾಡು CM ವಿಜಯ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: DMK ನಾಯಕಿ ವಿರುದ್ಧ ಪ್ರಕರಣ ಸೋಮವಾರ ರಾತ್ರಿ ಸುಮಾರು 10.30ಕ್ಕೆ ಕೈದಿಯೊಬ್ಬರಿಗೆ ಅಪಸ್ಮಾರ ಬಂದಿದೆ ಎಂದು ಇತರ ಕೈದಿಗಳು ಜೈಲು ಸಿಬ್ಬಂದಿಯ ನೆರವು ಕೋರಿದ್ದರು. ಸಿಬ್ಬಂದಿ ಕೋಣೆಯೊಳಗೆ ಪ್ರವೇಶಿಸುತ್ತಿದ್ದಂತೆ ಕೈದಿಗಳು ಅವರ ಮೇಲೆ ಹಲ್ಲೆ ನಡೆಸಿ ಜೈಲಿನಿಂದ ತಪ್ಪಿಸಿಕೊಂಡಿದ್ದಾರೆ. ಘಟನೆಯಲ್ಲಿ ಇಬ್ಬರು ಜೈಲು ಸಿಬ್ಬಂದಿಗೂ ಗಾಯಗಳಾಗಿವೆ.ಪರಾರಿಯಾದ ಕೈದಿಗಳ ಪೈಕಿ ಸಿಲಂಬರಸನ್, ಪ್ರವೀಣ್ ಕುಮಾರ್, ರಾಜಾ ಸಿಕಂದರ್ ಮತ್ತು ರಾಜ್ಕುಮಾರ್ ಎಂಬುವವರರನ್ನು ಮಂಗಳವಾರ ಬೆಳಿಗ್ಗೆ ಪೊಲೀಸರು ಬಂಧಿಸಿದ್ದಾರೆ. ಉಳಿದ ಕೈದಿಗಳ ಪತ್ತೆಗಾಗಿ ತಮಿಳುನಾಡು ಪೊಲೀಸರು 17 ವಿಶೇಷ ತಂಡಗಳನ್ನು ರಚಿಸಿದ್ದಾರೆ.‘ಮೂಕುತಿ ಅಮ್ಮನ್ 2’: ದ್ವಿಪಾತ್ರದಲ್ಲಿ ನಟಿ ನಯನತಾರಾ; ಖಳನಾಯಕನಾದ ದುನಿಯಾ ವಿಜಯ್1995ರ ಬಳಿಕದ ದೊಡ್ಡ ಜೈಲು ಪರಾರಿತಮಿಳುನಾಡಿನಲ್ಲಿ ಸುಮಾರು 30 ವರ್ಷಗಳ ಬಳಿಕ ನಡೆದ ಅತಿದೊಡ್ಡ ಜೈಲು ಪರಾರಿ ಘಟನೆ ಇದು. 1995ರ ಆಗಸ್ಟ್ 15ರಂದು ನಿಷೇಧಿತ ಎಲ್ಟಿಟಿಇ ಸಂಘಟನೆಯ 43 ಶಂಕಿತ ಉಗ್ರರು ವೆಲ್ಲೂರು ಕೋಟೆಯೊಳಗಿನ ವಿಶೇಷ ಶಿಬಿರದಿಂದ 153 ಅಡಿ ಉದ್ದದ ಸುರಂಗ ಕೊರೆದು ಪರಾರಿಯಾಗಿದ್ದರು.ಗಾಯಗೊಂಡ ಜೈಲು ಸಿಬ್ಬಂದಿಗೆ ಥೇನಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಥೇನಿ ಕೇರಳದ ಗಡಿಗೆ ಹೊಂದಿಕೊಂಡಿರುವುದರಿಂದ ನೆರೆಯ ರಾಜ್ಯದ ಪೊಲೀಸರಿಗೂ ಮಾಹಿತಿ ನೀಡಲಾಗಿದೆ. ತಮಿಳುನಾಡು ಮತ್ತು ಕೇರಳದ ಇಡುಕ್ಕಿ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.ಚೆನ್ನೈನ ಪೂಝಲ್ ಕೇಂದ್ರ ಕಾರಾಗೃಹದಿಂದ ಇಬ್ಬರು ಕೈದಿಗಳು ತಪ್ಪಿಸಿಕೊಂಡಿದ್ದರು. ಇದಾದ ಬಳಿಕ ರಾಜ್ಯದ ಎಲ್ಲ ಕಾರಾಗೃಹಗಳ ಭದ್ರತಾ ಲೋಪಗಳನ್ನು ಪರಿಶೀಲಿಸಲು ಜೈಲು ಇಲಾಖೆ ಭದ್ರತಾ ಲೆಕ್ಕಪರಿಶೋಧನೆ ನಡೆಸುತ್ತಿರುವ ಸಂದರ್ಭದಲ್ಲೇ ಈ ಘಟನೆ ನಡೆದಿದೆ.ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರವು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕುರಿತು ವಿರೋಧ ಪಕ್ಷಗಳ ಟೀಕೆ ಎದುರಿಸುತ್ತಿದೆ. ನಟ ಅಜಿತ್ ಕುಮಾರ್ಗೆ ಪುಟಾಣಿ ರೇಸಿಂಗ್ ಕಾರು ಉಡುಗೊರೆ ನೀಡಿದ ಸಿಎಂ ಜೋಸೆಫ್ ವಿಜಯ್