ಯಲಹಂಕದ ನೆಲಕದಿರೇನಹಳ್ಳಿಯ 59.39 ಎಕರೆ ಭೂಸ್ವಾಧೀನ ರದ್ದುಗಳಿಸಿದ ಸುಪ್ರೀಂ
ನವದೆಹಲಿ: ವಸತಿ ಸಹಕಾರ ಸಂಘಕ್ಕಾಗಿ 1988ರಲ್ಲಿ ಕೈಗೊಂಡಿದ್ದ ಬೆಂಗಳೂರಿನ (Bengaluru) ನೆಲಕದಿರೇನಹಳ್ಳಿಯ 59.39 ಎಕರೆ ಭೂಸ್ವಾಧೀನ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ (Supreme Court) ರದ್ದುಗೊಳಿಸಿದೆ. ಯಲಹಂಕ (Yalahanka) ತಾಲ್ಲೂಕಿನ ನೆಲಕದಿರೇನಹಳ್ಳಿಯಲ್ಲಿ 59 ಎಕರೆ 39 ಗುಂಟೆಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಈ ಪ್ರಕ್ರಿಯೆಯಲ್ಲಿ ವಂಚನೆ ಹಾಗೂ ಅಧಿ

ನವದೆಹಲಿ: ವಸತಿ ಸಹಕಾರ ಸಂಘಕ್ಕಾಗಿ 1988ರಲ್ಲಿ ಕೈಗೊಂಡಿದ್ದ ಬೆಂಗಳೂರಿನ (Bengaluru) ನೆಲಕದಿರೇನಹಳ್ಳಿಯ 59.39 ಎಕರೆ ಭೂಸ್ವಾಧೀನ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ (Supreme Court) ರದ್ದುಗೊಳಿಸಿದೆ. ಯಲಹಂಕ (Yalahanka) ತಾಲ್ಲೂಕಿನ ನೆಲಕದಿರೇನಹಳ್ಳಿಯಲ್ಲಿ 59 ಎಕರೆ 39 ಗುಂಟೆಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಈ ಪ್ರಕ್ರಿಯೆಯಲ್ಲಿ ವಂಚನೆ ಹಾಗೂ ಅಧಿಕಾರದ ದುರ್ಬಳಕೆ ನಡೆದಿದೆ. ಯಾವುದೇ ನಿರ್ದಿಷ್ಟ ವಸತಿ ಯೋಜನೆ ಅಥವಾ ಲೇಔಟ್ಗೆ ಸರ್ಕಾರದ ಪೂರ್ವಾನುಮೋದನೆ ಇಲ್ಲದಿರುವ ಕಾರಣದಿಂದ ಈ ಭೂಸ್ವಾಧೀನ ಪ್ರಕ್ರಿಯೆಯೇ ದೋಷಪೂರಿತವಾಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ. ಇದನ್ನೂ ಓದಿ: SIRನ ಎಲ್ಲಾ ಆದೇಶಗಳು ಸರ್ವಾನುಮತದಿಂದ ಕೂಡಿದ್ದವು, ಫಾರ್ಮ್-6 ತಿದ್ದುಪಡಿ ಮಾಡಿಲ್ಲ – ಸುಪ್ರೀಂಗೆ ಚುನಾವಣಾ ಆಯೋಗ ಮಾಹಿತಿ ಕರ್ನಾಟಕ ಹೈಕೋರ್ಟ್ನ ದ್ವಿಸದಸ್ಯ ಪೀಠದ ತೀರ್ಪನ್ನು ರದ್ದುಗೊಳಿಸಿರುವ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ.ವಿನೋದ್ ಚಂದ್ರನ್ ಅವರ ಪೀಠವು, ಏಕಸದಸ್ಯ ಪೀಠದ ತೀರ್ಪನ್ನು ಎತ್ತಿ ಹಿಡಿದಿದೆ. ಭೂಸ್ವಾಧೀನ ಕಾಯ್ದೆಯಡಿಯಲ್ಲಿ ಸರ್ಕಾರವು ಸರಿಯಾದ ಸ್ವಾಧೀನ ಪ್ರಕ್ರಿಯೆ ನಡೆಸಿಲ್ಲ ಎಂದೂ ಪೀಠ ಅಭಿಪ್ರಾಯಪಟ್ಟಿದೆ. ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಗಣನೆಗೆ ತೆಗೆದುಕೊಳ್ಳದೆ, ಭೂಮಾಲೀಕತ್ವವನ್ನು ಆಯಾ ಭೂಮಾಲೀಕರಿಗೆ ಹಿಂದಿರುಗಿಸಬೇಕೆಂದು ಪೀಠ ನಿರ್ದೇಶಿಸಿದೆ. ಸರ್ಕಾರದಿಂದ ಪರಿಹಾರ ಪಡೆದ ಭೂಮಾಲೀಕರು ಬಡ್ಡಿರಹಿತವಾಗಿ ಮೊತ್ತ ಮರುಪಾವತಿಸಬೇಕು ಎಂದು ತಿಳಿಸಿದೆ. ಭೂಮಿಯ ಸ್ವಾಧೀನವನ್ನು ಹಸ್ತಾಂತರಿಸಿದ್ದರೂ ಅಥವಾ ಹಣ ಮರುಪಾವತಿಸಿದ್ದರೂ, ಪ್ರತಿವಾದಿಯಾಗಿರುವ ಕರ್ನಾಟಕ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಆ ಭೂಮಿಗಳ ಮೇಲೆ ಯಾವುದೇ ಹಕ್ಕು ಇರುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿ, ಸಂಘವೇ ವಂಚನೆಗೆ ಸಹಕರಿಸಿದೆ ಎಂಬುದನ್ನು ಪೀಠ ಗಮನಿಸಿದೆ.ಇದನ್ನೂ ಓದಿ: ಜ್ಞಾನೇಶ್ ಕುಮಾರ್ ವಜಾಗೊಳಿಸುವಂತೆ ಪ್ರಧಾನಿಗೆ ಹೇಳಿ, 30 ಸೆಕೆಂಡ್ನಲ್ಲೇ ಪ್ರತಿಭಟನೆ ನಿಲ್ಲಿಸ್ತೇವೆ: ರಾಹುಲ್ ಗಾಂಧಿ ಭೂಮಾಲೀಕರು ಸರ್ಕಾರ ನೀಡಿದ ಪರಿಹಾರ ಹಿಂತಿರುಗಿಸಲು ಅಸಮರ್ಥರಾಗಿದ್ದಾಗ ಅಥವಾ ಹಿಂತಿರುಗಿಸಲು ಇಚ್ಛಿಸದಿದ್ದಾಗ, ಅಂತಹ ಜಮೀನುಗಳನ್ನು ಸರ್ಕಾರವು ಹರಾಜು ಹಾಕಬೇಕು. ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದೊಂದಿಗೆ ಸಮಾಲೋಚಿಸಿ, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ, ಈ ಮೊತ್ತವನ್ನು ಸಂತ್ರಸ್ತರಿಗೆ ಪರಿಹಾರ ನೀಡಲು ಬಳಸಲಾಗುತ್ತದೆ ಎಂದು ಪೀಠ ಆದೇಶಿಸಿದೆ. ಜಿಲ್ಲಾ ನ್ಯಾಯಾಧೀಶರ (ಆಯ್ಕೆ ಶ್ರೇಣಿ) ಶ್ರೇಣಿಯ ನ್ಯಾಯಾಂಗ ಅಧಿಕಾರಿಯೊಬ್ಬರ ಮೇಲ್ವಿಚಾರಣೆಯಲ್ಲಿ, ಕಂದಾಯ ಅಧಿಕಾರಿಗಳು ಹರಾಜು ಪ್ರಕ್ರಿಯೆ ನಡೆಸಬೇಕು. ಏಕಸದಸ್ಯ ಪೀಠವು ವಿಧಿಸಿದ್ದ ವೆಚ್ಚವನ್ನು ನ್ಯಾಯಪೀಠ ಹೆಚ್ಚಿಸಿದ್ದು, ಪ್ರತಿ ಅರ್ಜಿದಾರರಿಗೆ ತಲಾ 50,000 ರೂ. ಪಾವತಿಸುವಂತೆ ಆದೇಶಿಸಿದೆ. ದೀರ್ಘಕಾಲ ಆಗಿರುವುದನ್ನು ಪರಿಗಣಿಸಿ, ಸರ್ಕಾರಿ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಪೀಠ ರದ್ದುಗೊಳಿಸಿದೆ.ಇದನ್ನೂ ಓದಿ: ಸಕ್ಕರೆ ದರ ಏರಿಕೆ ಆಗುವವರೆಗೆ ರೈತರಿಗೆ ನ್ಯಾಯ ಸಿಗುವುದು ಕಷ್ಟ: ಡಿ.ಕೆ ಶಿವಕುಮಾರ್ ಎನ್.ನರಸಪ್ಪ ಮತ್ತು ಇತರರು ಸಲ್ಲಿಸಿದ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಪೀಠವು 71 ಪುಟಗಳ ತೀರ್ಪು ನೀಡಿದೆ. ಸಂಘದ ಅನುಮಾನಾಸ್ಪದ ನಿಯಮಾವಳಿ, ಸದಸ್ಯತ್ವದ ಬಗೆಗಿನ ಸ್ಪಷ್ಟ ವಿವರಗಳ ಕೊರತೆ, ಮಧ್ಯವರ್ತಿಗಳ ಒಳಗೊಳ್ಳುವಿಕೆ ಹಾಗೂ ಭೂಸ್ವಾಧೀನಕ್ಕೂ ಮೊದಲೇ ಲೇಔಟ್ ರಚನೆಗಾಗಿ ಖಾಸಗಿ ವ್ಯಕ್ತಿಗಳೊಂದಿಗೆ ಮಾಡಿಕೊಂಡ ಒಪ್ಪಂದಗಳನ್ನು ಪೀಠ ಗಮನಿಸಿದೆ.ಇದನ್ನೂ ಓದಿ: ಬೈಕ್ ಟ್ಯಾಕ್ಸಿಗೆ ಅನುಮತಿಸಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಅರ್ಜಿ – ನ.16ಕ್ಕೆ ವಿಚಾರಣೆ ಮುಂದೂಡಿಕೆ