ಗದಗ; ಶಿರಹಟ್ಟಿ ವಂಚನೆ ಪ್ರಕರಣ: ಶೀಘ್ರ ಕ್ರಮಕ್ಕೆ ಒತ್ತಾಯ
ಗದಗ: ‘ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ಶ್ರೀ ಲಕ್ಷ್ಮೀ ಎಂಟರ್ಪ್ರೈಸಸ್ ಹೆಸರಿನಲ್ಲಿ ಜನರಿಗೆ ವಂಚಿಸಿದವರನ್ನು ಕೂಡಲೇ ಬಂಧಿಸಿ, ವಂಚನೆಗೊಳಗಾದವರ ಹಣ ಹಿಂದಿರುಗಿಸಬೇಕು’ ಎಂದು ಮುಖಂಡ ರಾಜು ಖಾನಪ್ಪನವರ ಆಗ್ರಹಿಸಿದರು.ನಗರದಲ್ಲಿ ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೂತನ ತನಿಖಾಧಿಕಾರಿ ನೇಮಿಸಿ, ವಂಚಕರ ವಿರುದ್ಧ ಶೀಘ್ರ ಕ್ರಮವಹಿಸದಿದ್ದರೆ, ರೈತ ಹಾಗೂ

ಗದಗ: ‘ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ಶ್ರೀ ಲಕ್ಷ್ಮೀ ಎಂಟರ್ಪ್ರೈಸಸ್ ಹೆಸರಿನಲ್ಲಿ ಜನರಿಗೆ ವಂಚಿಸಿದವರನ್ನು ಕೂಡಲೇ ಬಂಧಿಸಿ, ವಂಚನೆಗೊಳಗಾದವರ ಹಣ ಹಿಂದಿರುಗಿಸಬೇಕು’ ಎಂದು ಮುಖಂಡ ರಾಜು ಖಾನಪ್ಪನವರ ಆಗ್ರಹಿಸಿದರು.ನಗರದಲ್ಲಿ ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೂತನ ತನಿಖಾಧಿಕಾರಿ ನೇಮಿಸಿ, ವಂಚಕರ ವಿರುದ್ಧ ಶೀಘ್ರ ಕ್ರಮವಹಿಸದಿದ್ದರೆ, ರೈತ ಹಾಗೂ ಕಾರ್ಮಿಕ ಮುಖಂಡರೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತದೆ’ ಎಂದು ಎಚ್ಚರಿಸಿದರು.‘ಪ್ರಧಾನಿಮಂತ್ರಿ ಉದ್ಯೋಗ ಸೃಜನೆ ಯೋಜನೆಯಡಿ ಸಾಲ ಸೌಲಭ್ಯ ಒದಗಿಸುವುದಾಗಿ ನಂಬಿಸಿ, ಜನರಿಂದ ಹಣ ಪಡೆದು ವಂಚಿಸಲಾಗಿದೆ. ವಂಚಕರನ್ನು ಬಂಧಿಸಿ, ಶಿಕ್ಷೆ ವಿಧಿಸದಿದ್ದರೆ ಜಿಲ್ಲೆಯಲ್ಲಿ ವಂಚಕರ ಸಂಖ್ಯೆ ಹೆಚ್ಚಾಗಲಿದೆ. ಶಿರಹಟ್ಟಿ ಭಾಗದಲ್ಲಿ ಜೂಜು, ಅಕ್ರಮವಾಗಿ ಮರಳು ಸಾಗಣೆ ವಿರುದ್ಧವೂ ಕ್ರಮಕೈಗೊಳ್ಳಬೇಕಿದೆ’ ಎಂದು ಒತ್ತಾಯಿಸಿದರು.ಸೋಮಪ್ಪ ಲಮಾಣಿ, ಶಿವಯೋಗಿ ಹಿರೇಮಠ, ಸುರೇಶ ಕುರಿ, ಸಂತೋಷ ಕುರಿ, ಸಂತೋಷ ಲಮಾಣಿ, ಕೃಷ್ಣಪ್ಪ ತಂಬೂರಿ, ಪರಿಶುರಾಮ ಕುರಿ, ಶಂಕರಪ್ಪ ಲಮಾಣಿ, ಶಿವಪ್ಪ ಲಮಾಣಿ, ರಮೇಶ ಲಮಾಣಿ ಇದ್ದರು.261027-23-1702660650