ಮೊದಲ ಸುತ್ತಿನ ಮತ ಎಣಿಕೆ; ಬಿಜೆಪಿ ಅಭ್ಯರ್ಥಿ ಸಂಕನೂರಗೆ 2065 ಮತಗಳ ಮುನ್ನಡೆ
ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯ ಮತಗಳ ಎಣಿಕೆ ಭರದಿಂದ ಸಾಗಿದೆ. ಮೊದಲ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ 2065 ಮತಗಳ ಮುನ್ನಡೆ ಸಾಧಿಸಿದ್ದಾರೆ.ಎಸ್.ವಿ.ಸಂಕನೂರ ಅವರು 6459 , ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ 4394 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥ
ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯ ಮತಗಳ ಎಣಿಕೆ ಭರದಿಂದ ಸಾಗಿದೆ. ಮೊದಲ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ 2065 ಮತಗಳ ಮುನ್ನಡೆ ಸಾಧಿಸಿದ್ದಾರೆ.ಎಸ್.ವಿ.ಸಂಕನೂರ ಅವರು 6459 , ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ 4394 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಕಾಂತಕುಮಾರ್ ಆರ್ 710 ಮತಗಳನ್ನು ಪಡೆದಿದ್ದಾರೆ.ಮೊದಲ ಸುತ್ತಿನಲ್ಲಿ 14,001 ಮತಗಳ ಎಣಿಕೆ ಆಗಿದ್ದು, ಈ ಪೈಕಿ 2133 ಮತಗಳು ಅಸಿಂಧುವಾಗಿವೆ. 11868 ಮತಗಳು ಸಿಂಧುವಾಗಿವೆ. ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ.ಎರಡನೇ ಸುತ್ತಿನ ಮತ ಎಣಿಕೆ 5.15 ಕ್ಕೆ ಆರಂಭವಾಗಿದೆ.ವಿಳಂಬ; ಮೊದಲ ಸುತ್ತಿನ ಮತ ಎಣಿಕೆ ಸಂದರ್ಭದಲ್ಲಿ ಒಂದು ಬಂಡಲ್ ನಲ್ಲಿ 3 ಮತಗಳ ವ್ಯತ್ಯಾಸ ಕಂಡು ಬಂದಿತು. ಹೀಗಾಗಿ ಮತ್ತೊಮ್ಮೆ ಎಣಿಕೆ ಮಾಡಲಾಯಿತು. ಇದರಿಂದ ಮೊದಲ ಸುತ್ತಿನ ಮತ ಎಣಿಕೆ 3 ಗಂಟೆ ನಡೆಯಿತು.
Read the complete story at Prajavani