ಸಿಗ್ನಿಸ್ ಏಷ್ಯಾದ ಅಧ್ಯಕ್ಷರಾಗಿ ಫಾ. ವಿಕ್ಟರ್ ವಿಜಯ್ ಲೋಬೊ ಆಯ್ಕೆ
ಮಂಗಳೂರು: ‘ಸಿಗ್ನಿಸ್ ಇಂಡಿಯಾ’ ಅಧ್ಯಕ್ಷರಾಗಿರುವ ಮಂಗಳೂರು ಧರ್ಮಪ್ರಾಂತ್ಯದ ಫಾ.ವಿಕ್ಟರ್ ವಿಜಯ್ ಲೋಬೊ ಅವರು 2026–2030ರ ಅವಧಿಗೆ ಸಿಗ್ನಿಸ್ ಏಷ್ಯಾದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ವಿಯೆಟ್ನಾಂನ ಸೈಗಾನ್ನಲ್ಲಿರುವ ಆರ್ಚ್ ಡಯಾಸಿಸ್ನ ಪ್ಯಾಸ್ಟೋರಲ್ ಸೆಂಟರ್ನಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆಯಿತು.‘ಸಿಗ್ನಿಸ್’ ಇದು ವಿಶ್ವ ಕಥೋಲಿಕ್ ಸಂವಹನ ಸಂ

ಮಂಗಳೂರು: ‘ಸಿಗ್ನಿಸ್ ಇಂಡಿಯಾ’ ಅಧ್ಯಕ್ಷರಾಗಿರುವ ಮಂಗಳೂರು ಧರ್ಮಪ್ರಾಂತ್ಯದ ಫಾ.ವಿಕ್ಟರ್ ವಿಜಯ್ ಲೋಬೊ ಅವರು 2026–2030ರ ಅವಧಿಗೆ ಸಿಗ್ನಿಸ್ ಏಷ್ಯಾದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ವಿಯೆಟ್ನಾಂನ ಸೈಗಾನ್ನಲ್ಲಿರುವ ಆರ್ಚ್ ಡಯಾಸಿಸ್ನ ಪ್ಯಾಸ್ಟೋರಲ್ ಸೆಂಟರ್ನಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆಯಿತು.‘ಸಿಗ್ನಿಸ್’ ಇದು ವಿಶ್ವ ಕಥೋಲಿಕ್ ಸಂವಹನ ಸಂಘಟನೆಯಾಗಿದ್ದು, ಏಷ್ಯಾ ಚಾಪ್ಟರ್ನಲ್ಲಿ 16 ಸದಸ್ಯ ರಾಷ್ಟ್ರಗಳನ್ನು ಹೊಂದಿದೆ. 12 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.ದಕ್ಷಿಣ ಕನ್ನಡ ಜಿಲ್ಲೆ ವಿಟ್ಲದಲ್ಲಿ ಜನಿಸಿದ ಫಾದರ್ ಲೋಬೊ, 2003 ಏಪ್ರಿಲ್ 24ರಂದು ಮಂಗಳೂರು ಡಯಾಸಿಸ್ ಫಾದರ್ ಆಗಿ ನೇಮಕಗೊಂಡರು. ಅವರು ಈ ಹಿಂದೆ ಮಂಗಳೂರು ಡಯಾಸಿಸ್ನ ಮಾಧ್ಯಮ ನಿರ್ದೇಶಕರಾಗಿ ಮತ್ತು ಕೆನರಾ ಸಂವಹನ ಕೇಂದ್ರದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ದ್ದರು. ಪ್ರಸ್ತುತ, ಅವರು ಕುಳೂರಿನ ಸೇಂಟ್ ಅಂತೋನಿ ಚರ್ಚ್ನ ಧರ್ಮಗುರು ಆಗಿ ಸೇವೆ ಸಲ್ಲಿಸುತ್ತಿ ದ್ದಾರೆ ಮತ್ತು ‘ಸಿಗ್ನಿಸ್ ಇಂಡಿಯಾ’ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ (2023–2027) ಎಂದು ಮಂಗಳೂರು ಧರ್ಮಪ್ರಾಂತ್ಯ ಪ್ರಕಟಣೆಯಲ್ಲಿ ತಿಳಿಸಿದೆ.261027-51-673496503