ತಿಳವಳ್ಳಿ ಗ್ರಾಮಗಳಲ್ಲಿ ರೈತ ಸಮುದಾಯದಿಂದ ಸೀಗೆ ಹುಣ್ಣಿಮೆ ಆಚರಣೆ
ತಿಳವಳ್ಳಿ: ಮುಂಗಾರು ಮುಗಿದು ಹಿಂಗಾರು ಋತುಮಾನವನ್ನು ಬರಮಾಡಿಕೊಳ್ಳುವ ಹಬ್ಬವೇ ಸೀಗೆ ಹುಣ್ಣಿಮೆ. ತಿಳವಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತ ಸಮುಹ ತಮ್ಮ ಹೊಲಗದ್ದೆಗಳನ್ನು ಪೂಜಿಸುವ ಮೂಲಕ ಸೋಮವಾರ ಸಡಗರ ಸಂಭ್ರಮದಿಂದ ಆಚರಿಸಿದರು.ಎತ್ತಿನ ಗಾಡಿಗಳು, ಟ್ರ್ಯಾಕ್ಟರ್ ಬಂಡಿಗಳು ಹಾಗೂ ಕಾಲ್ನೆಡಿಗೆಯ ಮೂಲಕ ಮಕ್ಕಳು, ಮಹಿಳೆಯರು ಸೇರಿದಂತೆ ಇಡೀ ಕುಟುಂಬ ಸಮೇತವಾಗಿ

ತಿಳವಳ್ಳಿ: ಮುಂಗಾರು ಮುಗಿದು ಹಿಂಗಾರು ಋತುಮಾನವನ್ನು ಬರಮಾಡಿಕೊಳ್ಳುವ ಹಬ್ಬವೇ ಸೀಗೆ ಹುಣ್ಣಿಮೆ. ತಿಳವಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತ ಸಮುಹ ತಮ್ಮ ಹೊಲಗದ್ದೆಗಳನ್ನು ಪೂಜಿಸುವ ಮೂಲಕ ಸೋಮವಾರ ಸಡಗರ ಸಂಭ್ರಮದಿಂದ ಆಚರಿಸಿದರು.ಎತ್ತಿನ ಗಾಡಿಗಳು, ಟ್ರ್ಯಾಕ್ಟರ್ ಬಂಡಿಗಳು ಹಾಗೂ ಕಾಲ್ನೆಡಿಗೆಯ ಮೂಲಕ ಮಕ್ಕಳು, ಮಹಿಳೆಯರು ಸೇರಿದಂತೆ ಇಡೀ ಕುಟುಂಬ ಸಮೇತವಾಗಿ ಹೊಲ-ಗದ್ದೆಗಳಿಗೆ ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡು ಬಂದಿತು.ದಸರಾ ಹಬ್ಬ ಮುಗಿಯುತ್ತಿದಂತೆ ಬರುವ ಹಬ್ಬವೇ ಸೀಗೆ ಹುಣ್ಣಿಮೆ. ಇಡೀ ರೈತ ಸಮೂಹದಲ್ಲಿ ಒಂದು ವಿಶಿಷ್ಟ ಸ್ಥಾನ ಹೊಂದಿದೆ. ಹೊಲದ ಸುತ್ತ ಚರಗ ಚೆಲ್ಲಿ ಹೊಲದಲ್ಲಿ ಐದು ಕಲ್ಲುಗಳನ್ನು ಇಟ್ಟು ಅವುಗಳಿಗೆ ಸುಣ್ಣ ಮತ್ತು ಕೆಮ್ಮಣ್ಣು ಹಚ್ಚಿ ಅವುಗಳನ್ನು ಪಾಂಡವರು ಎಂದು ಪೂಜಿಸಲಾಗುತ್ತದೆ. ನಂತರ ವಿವಿಧ ಪದಾರ್ಥಗಳ ನೈವೇದ್ಯ ಮಾಡಲಾಗುತ್ತದೆ. ಆದರೆ ಪಾಂಡವರ ಮೂರ್ತಿಗಳ ಹಿಂದೆ ಕಳ್ಳರ ಮೂರ್ತಿಗಳನ್ನು ಇಟ್ಟು ಪುಜಿಸುವ ವಾಡಿಕೆ ಈಗಲೂ ರೂಢಿಯಲ್ಲಿದೆ.ನಂತರ ಮನೆಯಿಂದ ತಂದ ಜೋಳದ ರೊಟ್ಟಿ, ಪುಂಡಿ ಪಲ್ಲೆ, ಖರ್ಚಿಕಾಯಿ, ಕುಂಬಳಕಾಯಿ ಕಡುಬು, ಹೋಳಿಗೆ, ಕರಿಬುತ್ತಿ, ಬಿಳಿಬುತ್ತಿ, ವಿವಿಧ ತರಹದ ಚಟ್ನಿಗಳು, ಸಿಹಿ ತಿನಿಸುಗಳ ಸಾಮೂಹಿಕ ಸಹ ಭೋಜನ ನಡೆಯಿತು.261027-22-1085910626