ಸಿರಿಯಾ ಮೇಲೆ ದಾಳಿ: 20 ಉಗ್ರರು ಸಾವು
ಅಲ್–ತಫ್ಫ್ (ಸಿರಿಯಾ)/ಅಮ್ಮಾನ್ (ಜೋರ್ಡನ್): ಸಿರಿಯಾ ಮೇಲೆ ಸೋಮವಾರ ಸಂಜೆ ನಡೆಸಿದ ವಾಯುದಾಳಿಯಲ್ಲಿ ‘ಇಸ್ಲಾಮಿಕ್ ಸ್ಟೇಟ್’ನ ಸುಮಾರು 20 ಉಗ್ರರು ಮೃತಪಟ್ಟಿದ್ದಾರೆ ಎಂದು ಜೋರ್ಡನ್ ಮಂಗಳವಾರ ಹೇಳಿದೆ. ದಾಳಿಯಲ್ಲಿ ನಾಗರಿಕರು ಕೂಡ ಮೃತಪಟ್ಟಿರುವುದನ್ನು ಅದು ಒಪ್ಪಿಕೊಂಡಿದೆ.ದಕ್ಷಿಣ ಜೋರ್ಡನ್ನ ಕರಕ್ ನಗರದಲ್ಲಿನ ಗ್ರೀಕ್ ಆರ್ಥೊಡಾಕ್ಸ್ ಚರ್ಚ್ ಮೇಲೆ ಶುಕ್ರವಾರದಂದ

ಅಲ್–ತಫ್ಫ್ (ಸಿರಿಯಾ)/ಅಮ್ಮಾನ್ (ಜೋರ್ಡನ್): ಸಿರಿಯಾ ಮೇಲೆ ಸೋಮವಾರ ಸಂಜೆ ನಡೆಸಿದ ವಾಯುದಾಳಿಯಲ್ಲಿ ‘ಇಸ್ಲಾಮಿಕ್ ಸ್ಟೇಟ್’ನ ಸುಮಾರು 20 ಉಗ್ರರು ಮೃತಪಟ್ಟಿದ್ದಾರೆ ಎಂದು ಜೋರ್ಡನ್ ಮಂಗಳವಾರ ಹೇಳಿದೆ. ದಾಳಿಯಲ್ಲಿ ನಾಗರಿಕರು ಕೂಡ ಮೃತಪಟ್ಟಿರುವುದನ್ನು ಅದು ಒಪ್ಪಿಕೊಂಡಿದೆ.ದಕ್ಷಿಣ ಜೋರ್ಡನ್ನ ಕರಕ್ ನಗರದಲ್ಲಿನ ಗ್ರೀಕ್ ಆರ್ಥೊಡಾಕ್ಸ್ ಚರ್ಚ್ ಮೇಲೆ ಶುಕ್ರವಾರದಂದು ಸಿರಿಯಾದ ಬಂಡುಕೋರರು ನಡೆಸಿದ ದಾಳಿಯಲ್ಲಿ 9 ಜನರು ಮೃತಪಟ್ಟಿದ್ದರು. ಈ ದಾಳಿಗೆ ಪ್ರತಿಕಾರವಾಗಿ ಸಿರಿಯಾ ಮೇಲೆ ದಾಳಿ ಮಾಡಲಾಗಿದೆ.ಜೋರ್ಡನ್ ಸರ್ಕಾರದ ವಕ್ತಾರ ನೀಡಿದ ಸಂಖ್ಯೆಗೂ, ಸಿರಿಯಾ ನೀಡಿದ ಸಂಖ್ಯೆಗೂ ವ್ಯತ್ಯಾಸವಿದೆ. ಸಿರಿಯಾದ ನಾಗರಿಕ ರಕ್ಷಣಾ ಸಂಸ್ಥೆಯು, ‘ಏಳು ನಾಗರಿಕರ ಮೃತದೇಹ ಪತ್ತೆಹಚ್ಚಿದ್ದೇವೆ’ ಎಂದು ತಿಳಿಸಿದೆ.‘ದಕ್ಷಿಣ ದಾರಾ ಮತ್ತು ಸುವೈದಾ ಪ್ರಾಂತ್ಯದಲ್ಲಿ ಏಳು ಜನರ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ಇದರಲ್ಲಿ ಮೂವರು ಮಕ್ಕಳು ಮತ್ತು ಒಬ್ಬ ಮಹಿಳೆ ಸೇರಿದ ಐವರು ಒಂದೇ ಕುಟುಂಬದವರು. ಪ್ರತ್ಯೇಕ ದಾಳಿಗಳಲ್ಲಿ 60 ವರ್ಷದ ಮಹಿಳೆ ಮತ್ತು 80 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ’ ಎಂದು ಸಂಸ್ಥೆ ಹೇಳಿದೆ.